ನವದೆಹಲಿ: ದೇಶಾದ್ಯಂತ ನಾಳೆ ನಡೆಯಲಿರುವ ಗೌರಿ-ಗಣೇಶ ಚತುರ್ಥಿಯ ಸಂಭ್ರಮದ ಸಿದ್ಧತೆಯಲ್ಲಿ ತೊಡಗಿರುವಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನಾಡಿನ ಜನತೆಗೆ ತಮ್ಮ ಶುಭಾಶಯಗಳ ಸಂದೇಶ ತಿಳಿಸಿದ್ದಾರೆ.
ರಾಷ್ಟ್ರಪತಿ ರಾಮನಾಥ ಕೋವಿಂದರ ಗಣೇಶ ಚತುರ್ಥಿಯ ಸಂದೇಶ.. ಗಣೇಶನಿಂದ ಕಲಿಯಬಹುದಾದ ಪಾಠವಿದು..
ಗಣೇಶನ ಜನ್ಮದಿನದಂದು ಆಚರಿಸುವ ಗಣೇಶ ಚತುರ್ಥಿಯು ಕಲಿಕೆ, ಜ್ಞಾನ ಮತ್ತು ಸಮೃದ್ಧಿಯನ್ನು ಸೂಚಿಸುತ್ತದೆ. ಇವು ಸಮಾಜದ ಎಲ್ಲಾ ವರ್ಗದವರಿಗೆ ಸಿಗಲಿ. ಅವುಗಳು ರಾಷ್ಟ್ರೀಯ ಅಭಿವೃದ್ಧಿ ಮತ್ತು ಸಮಾಜ ಕಲ್ಯಾಣ ಕಾರ್ಯಗಳ ಸಾಧನೆಗೆ ಅಳವಡಿಸಿಕೊಳ್ಳಬೇಕಾದ ಮೌಲ್ಯಗಳು ಮತ್ತು ಗುರಿಗಳಂತೆ ಪ್ರತಿನಿಧಿಸುತ್ತವೆ ಎಂದು ಕೋವಿಂದ್ ಅವರು ಹೇಳಿದ್ದಾರೆ.
ಗಣೇಶ ಚತುರ್ಥಿ
ಗಣೇಶನ ಜನ್ಮದಿನವೆಂದು ಆಚರಿಸುವ ಗಣೇಶ ಚತುರ್ಥಿಯ ಹಬ್ಬವು ಕಲಿಕೆ, ಜ್ಞಾನ ಮತ್ತು ಸಮೃದ್ಧಿಯನ್ನು ಸೂಚಿಸುತ್ತದೆ. ಇವು ಸಮಾಜದ ಎಲ್ಲಾ ವರ್ಗದವರಿಗೆ ಸಿಗಲಿ. ಅವುಗಳು ರಾಷ್ಟ್ರೀಯ ಅಭಿವೃದ್ಧಿ ಮತ್ತು ಸಮಾಜ ಕಲ್ಯಾಣ ಕಾರ್ಯಗಳ ಸಾಧನೆಗೆ ಅಳವಡಿಸಿಕೊಳ್ಳಬೇಕಾದ ಮೌಲ್ಯಗಳು ಮತ್ತು ಗುರಿಗಳಂತೆ ಪ್ರತಿನಿಧಿಸುತ್ತವೆ ಎಂದು ಕೋವಿಂದ್ ಅವರು ಹೇಳಿದ್ದಾರೆ."ನಾವೆಲ್ಲರೂ ಈ ಹಬ್ಬವನ್ನು ಸಾಂಪ್ರದಾಯಿಕ ಉತ್ಸಾಹ ಮತ್ತು ಸಂತೋಷದಿಂದ ಆಚರಿಸೋಣ" ಎಂದು ಅವರು ತಿಳಿಸಿದ್ದಾರೆ.