ಆಗ್ರಾ(ಉತ್ತರ ಪ್ರದೇಶ): ಗರ್ಭಿಣಿಯು ಕಾಡಿನ ಬಳಿ ಮಗುವಿಗೆ ಜನ್ಮ ನೀಡಿದ್ದು, ಮಗು ನಾಪತ್ತೆಯಾದ ಘಟನೆ ಆಗ್ರಾ ಜಿಲ್ಲೆಯಲ್ಲಿ ನಡೆದಿದೆ.
ಆಗ್ರಾದ ಪಿನಾಹತ್ ಬ್ಲಾಕ್‌ನ ಜೋಧಪುರ ಗ್ರಾಮದಿಂದ ಈ ಪ್ರಕರಣ ವರದಿಯಾಗಿದ್ದು, ಮಗು ಎಲ್ಲಿದೆ ಎಂಬುದು ಇನ್ನೂ ತಿಳಿದಿಲ್ಲ. ನವಜಾತ ಶಿಶುವನ್ನು ಕಾಡು ಪ್ರಾಣಿ ಕೊಂದಿರಬೇಕು ಎಂದು ಸಂಬಂಧಿಕರು ಮತ್ತು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.
ಮೂಲಗಳ ಪ್ರಕಾರ, ಗರ್ಭಿಣಿಯಾಗಿದ್ದ ಪಿಂಕಿ ಹೊಲಗಳಿಗೆ ತೆರಳುತ್ತಿದ್ದ ವೇಳೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ನಂತರ ಮಗುವಿಗೆ ಜನ್ಮ ನೀಡಿದ ಬಳಿಕ ಪ್ರಜ್ಞಾಹೀನಳಾಗಿದ್ದಾರೆ. ಪಿಂಕಿ ಬಹಳ ಸಮಯ ಕಳೆದರೂ ಮನೆಗೆ ಹಿಂದಿರುಗದಿದ್ದಾಗ, ಆಕೆಯ ಕುಟುಂಬ ಸದಸ್ಯರು ಹುಡುಕಲು ಪ್ರಾರಂಭಿಸಿದರು. ಸ್ವಲ್ಪ ಸಮಯದ ನಂತರ, ಪ್ರಜ್ಞಾಹೀನ ಸ್ಥಿತಿಯಲ್ಲಿ ಪಿಂಕಿ ಹೊಲದ ಬಳಿ ಬಿದ್ದಿರುವುದು ಕಂಡುಬಂದಿದೆ. ಆದರೆ ಅವಳ ನವಜಾತ ಶಿಶು ಕಾಣೆಯಾಗಿದೆ.