ನವದೆಹಲಿ:ಅಂಚೆ ನೌಕರರು ಕೋವಿಡ್ಗೆ ಬಲಿಯಾದರೆ 10 ಲಕ್ಷ ರೂ.ಗಳ ಪರಿಹಾರವನ್ನು ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.
ಕೊರೊನಾಗೆ ಅಂಚೆನೌಕರರು ಬಲಿಯಾದರೆ 10 ಲಕ್ಷ ರೂ. ಪರಿಹಾರ
ಆಹಾರದ ಪೊಟ್ಟಣ, ಪಡಿತರ ಹಾಗೂ ಔಷಧವನ್ನ ಸ್ಥಳೀಯ ಆಡಳಿತ ಹಾಗೂ ಪೊಲೀಸರ ಜೊತೆಗೂಡಿ ಅಂಚೆ ಇಲಾಖೆ ವಿತರಣೆ ಮಾಡುತ್ತಿದೆ. ಈ ಹಿನ್ನೆಲೆ ಅಂಚೆ ನೌಕರರು ಏನಾದರು ಕೊರೊನಾಗೆ ತುತ್ತಾದರೆ 10 ಲಕ್ಷ ರೂ. ಪರಿಹಾರಧನ ನೀಡಲಾಗುವುದು ಎಂದು ಸರ್ಕಾರ ಹೇಳಿದೆ.
ಕೊರೊನಾಗೆ ಅಂಚೆನೌಕರರು ಬಲಿಯಾದರೆ 10 ಲಕ್ಷ ಪರಿಹಾರ ಧನ
ಅಂಚೆ ಇಲಾಖೆ ಜನರಿಗೆ ಅಗತ್ಯವಾದ ಸೇವೆಯನ್ನು ಒದಗಿಸುತ್ತಿದೆ. ಆಹಾರದ ಪೊಟ್ಟಣ, ಪಡಿತರ ಹಾಗೂ ಔಷಧವನ್ನ ಸ್ಥಳೀಯ ಆಡಳಿತ ಹಾಗೂ ಪೊಲೀಸರ ಜೊತೆಗೂಡಿ ವಿತರಣೆ ಮಾಡುತ್ತಿದೆ. ಈ ಹಿನ್ನೆಲೆ ಅಂಚೆ ನೌಕರರು ಏನಾದರು ಕೊರೊನಾಗೆ ತುತ್ತಾದರೆ 10 ಲಕ್ಷ ಪರಿಹಾರಧನ ನೀಡಲಾಗುವುದು ಎಂದು ಸರ್ಕಾರ ಹೇಳಿದೆ.
ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರು ಎಲ್ಲಾ ರಾಜ್ಯದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಮತ್ತು ವ್ಯವಸ್ಥಾಪಕರ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿ, ದೇಶಾದ್ಯಂತ ಅಗತ್ಯವಿರುವವರಿಗೆ ಸಹಾಯ ಮಾಡಲು ಸಕ್ರಿಯರಾಗಿ ಎಂದು ಸೂಚನೆ ನೀಡಿದ್ದಾರೆ.