ನವದೆಹಲಿ: 2019ರ ಕ್ಯಾಲೆಂಡರ್ ವರ್ಷ ಮುಕ್ತಾಯವಾಗುವ ಸನಿಹದಲ್ಲಿದೆ. ಈ ವರ್ಷದಲ್ಲಿ ಅತಿಹೆಚ್ಚು ಸುದ್ದಿಗೆ ಗ್ರಾಸವಾದ ಮತ್ತು ಮರುಟ್ವೀಟ್ ಆದ ಟ್ವೀಟ್ ಯಾವುದು ಎಂಬುದನ್ನು ಮೈಕ್ರೋಬ್ಲಾಗಿಂಗ್ ಸೈಟ್ ಬಹಿರಂಗಗೊಳಿಸಿದೆ.
ಪ್ರಧಾನಿ ಮೋದಿಗೆ 'ಗೋಲ್ಡನ್ ಟ್ವೀಟ್ ಆಫ್ 2019' ಅವಾರ್ಡ್... ಯಾವುದು ಆ Tweet? - ವಿರಾಟ್ ಕೊಹ್ಲಿ ಟ್ವಿಟ್ಟರ್
ಪ್ರಧಾನಿ ನರೇಂದ್ರ ಮೋದಿ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ನೇತೃತ್ವದ ಬಿಜೆಪಿ ಸರ್ಕಾರ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರುವಲ್ಲಿ ಯಶಸ್ವಿಯಾಯಿತು. ಚುನಾವಣೆ ಗೆಲುವಿ ಕುರಿತು ಪ್ರಧಾನಿ ಮಾಡಿದ್ದ ಟ್ವೀಟ್ ಅತಿಹೆಚ್ಚು ಲೈಕ್ ಮತ್ತು ಷೇರ್ ಆಗಿದ್ದು, ಇದನ್ನು 'ಗೋಲ್ಡನ್ ಟ್ವೀಟ್ ಆಫ್ 2019' ಎಂದು ಮೈಕ್ರೋಬ್ಲಾಗಿಂಗ್ ಹೆಸರಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ನೇತೃತ್ವದ ಬಿಜೆಪಿ ಸರ್ಕಾರ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರುವಲ್ಲಿ ಯಶಸ್ವಿಯಾಯಿತು. ಚುನಾವಣೆ ಗೆಲುವಿನ ಕುರಿತು ಪ್ರಧಾನಿ ಮಾಡಿದ್ದ ಟ್ವೀಟ್ ಅತಿಹೆಚ್ಚು ಲೈಕ್ ಮತ್ತು ಷೇರ್ ಆಗಿದ್ದು, ಇದನ್ನು 'ಗೋಲ್ಡನ್ ಟ್ವೀಟ್ ಆಫ್ 2019' ಎಂದು ಟ್ವಿಟರ್ ಹೇಳಿದೆ.
ಕ್ರೀಡಾ ವಿಭಾಗದಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಮಾಜಿ ಕ್ಯಾಪ್ಟನ್ ಎಂ.ಎಸ್. ಧೋನಿ ಜನ್ಮ ದಿನದಂದು ಶುಭಕೋರಿದ್ದ ಟ್ವೀಟ್, ಅತಿಹೆಚ್ಚು ರೀಟ್ವಿಟ್ಗೊಂಡಿದೆ. ಧೋನಿ ಅವರ ಜನ್ಮದಿನದಂದು ಕೊಹ್ಲಿ ಮಾಡಿದ್ದ ಹೃತ್ಪೂರ್ವಕ ಟ್ವೀಟ್, ಇವರಿಬ್ಬರ ಫೋಟೋ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಒಂದು ಮಹಾಕಾವ್ಯದ ಕ್ಷಣವಾಗಿತ್ತು ಎಂಬುದು ಅದಕ್ಕೆ ಬಂದ ಕಮೆಂಟ್ಗಳ ಮೂಲಕ ತಿಳಿಯುತ್ತದೆ. ಮನರಂಜನೆ ವಿಭಾಗದಲ್ಲಿ ತಮಿಳು ನಟ ವಿಜಯ್ ಅಭಿನಯದ 'ಬಿಗಿಲ್' ಅತ್ಯಧಿಕ ಮರು ಟ್ವೀಟ್ ಹಾಗೂ ಅತಿಹೆಚ್ಚು ಷೇರ್ ಆಗಿದೆ.