ಕರ್ನಾಟಕ

karnataka

ETV Bharat / bharat

130 ಕೋಟಿ ಭಾರತೀಯರು ಕಾಯುತ್ತಿದ್ದ ಐತಿಹಾಸಿಕ ಕ್ಷಣ ಬಂದಿದೆ: ಪ್ರಧಾನಿ ಮೋದಿ

130 ಕೋಟಿ ಭಾರತೀಯರು ಕಾಯುತ್ತಿರುವ ಆ ಕ್ಷಣ ಬಂದೇ ಬಿಟ್ಟಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಸುರಕ್ಷಿತವಾಗಿ ಇಳಿಯಲಿದೆ. ಭಾರತೀಯ ವಿಜ್ಞಾನಿಗಳ ಮಹೋನ್ನತ ಕಾರ್ಯವನ್ನು ವಿಶ್ವದ ಪ್ರತಿಯೊಂದು ರಾಷ್ಟ್ರವೂ ಇಂದು ನೋಡಲಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ಮೋದಿ

By

Published : Sep 6, 2019, 3:03 PM IST

ನವದೆಹಲಿ: ಚಂದ್ರನ ಅಂಗಳದಲ್ಲಿ ಮತ್ತೊಮ್ಮೆ ಇಸ್ರೋ ಇಳಿಯಲು ಸಿದ್ಧವಾಗಿದ್ದು ಈ ಐತಿಹಾಸಿಕ ಕ್ಷಣಕ್ಕೆ ಇಡೀ ಭಾರತವೇ ಅತ್ಯಂತ ಕಾತರವಾಗಿದೆ. ಈ ವಿಚಾರದಲ್ಲಿ ಪ್ರಧಾನಿ ಮೋದಿ ಸಹ ಹೊರತಾಗಿಲ್ಲ.

ದಕ್ಷಿಣ ಧ್ರುವದ ಆಯ್ಕೆಯ ಹಿಂದಿದೆ ಈ ಕಾರಣ! ನಾಸಾಗೂ ಅಗತ್ಯ ಚಂದ್ರಯಾನ-2 ಯಶಸ್ಸು

130 ಕೋಟಿ ಭಾರತೀಯರು ಕಾಯುತ್ತಿರುವ ಆ ಕ್ಷಣ ಬಂದೇ ಬಿಟ್ಟಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಸುರಕ್ಷಿತವಾಗಿ ಇಳಿಯಲಿದೆ. ಭಾರತೀಯ ವಿಜ್ಞಾನಿಗಳ ಮಹೋನ್ನತ ಕಾರ್ಯವನ್ನು ವಿಶ್ವದ ಪ್ರತಿಯೊಂದು ರಾಷ್ಟ್ರವೂ ಇಂದು ನೋಡಲಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಬೆಂಗಳೂರಿನ ಇಸ್ರೋ ಕೇಂದ್ರದಲ್ಲಿ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಕಾತರನಾಗಿದ್ದೇನೆ. ಇಸ್ರೋ ಕ್ವಿಜ್​ನಲ್ಲಿ ವಿಜೇತರಾದ ಬುದ್ಧಿವಂತರೊಂದಿಗೆ ಸಮಯ ಕಳೆಯಲು ಉತ್ಸುಕನಾಗಿದ್ದೇನೆ. ಚಂದ್ರಯಾನ 2ರ ಎಲ್ಲ ಮಾಹಿತಿಗಳನ್ನು ನಾನು ಪಡೆದುಕೊಳ್ಳುತ್ತಲೇ ಬಂದಿದ್ದೇನೆ. ಭಾರತೀಯ ಬಾಹ್ಯಾಕಾಶ ಕ್ಷೇತ್ರ ಹಾಗೂ ಭಾರತೀಯ ವಿಜ್ಞಾನಿಗಳ ಪ್ರತಿಭೆ ವಿಶ್ವಕ್ಕೇ ಪರಿಚಯವಾಗುವ ಕ್ಷಣ ಇಂದು ಬಂದಿದೆ ಎಂದು ಮೋದಿ ಟ್ವೀಟ್ ಮೂಲಕ ಹೇಳಿದ್ದಾರೆ.

ಚಂದ್ರಯಾನ-2 ಲ್ಯಾಂಡಿಂಗ್ ಪ್ರಕ್ರಿಯೆಯನ್ನು ಪ್ರತಿಯೊಬ್ಬ ಭಾರತೀಯರು ನೋಡುವಂತೆ ಪ್ರಧಾನಿ ಟ್ವೀಟ್​ನಲ್ಲಿ ಮನವಿ ಮಾಡಿದ್ದಾರೆ. ನಿಮ್ಮ ವೀಕ್ಷಣೆಯನ್ನು ಟ್ವೀಟ್ ಮಾಡಿ ಮತ್ತು ಆಯ್ದ ಉತ್ತಮ ಟ್ವೀಟ್​​ಗಳನ್ನು ನಾನು ರಿಟ್ವೀಟ್ ಮಾಡಲಿದ್ದೇನೆ ಎಂದು ಮೋದಿ ಟ್ವಿಟರ್​​ನಲ್ಲಿ ಹೇಳಿದ್ದಾರೆ.

ಹೌದು, ಸೆಪ್ಟೆಂಬರ್ 7ರ ಮುಂಜಾನೆ 1.30ರಿಂದ 2ರ ಅವಧಿಯಲ್ಲಿ ನಡೆಯುವ ಲ್ಯಾಂಡಿಂಗ್ ಪ್ರಕ್ರಿಯೆ ವೀಕ್ಷಿಸಲು ಇಸ್ರೋ ಪ್ರಧಾನಿ ಮೋದಿಗೆ ಆಹ್ವಾನ ನೀಡಿತ್ತು. ಈ ಆಹ್ವಾನವನ್ನು ಒಪ್ಪಿಕೊಂಡಿರುವ ಮೋದಿ ಇಂದು ರಾತ್ರಿ ಬೆಂಗಳೂರಿಗೆ ಬಂದಿಳಿಯಲಿದ್ದಾರೆ. ಇದಕ್ಕೂ ಮುನ್ನ ಸರಣಿ ಟ್ವೀಟ್ ಮಾಡಿರುವ ಪ್ರಧಾನಿ ಚಂದ್ರಯಾನ 2 ಬಗ್ಗೆ ಬರೆದುಕೊಂಡಿದ್ದಾರೆ.

ABOUT THE AUTHOR

...view details