ಕರ್ನಾಟಕ

karnataka

ETV Bharat / bharat

ಪ್ರಧಾನಿ ಮೋದಿ ಭಾರತದ ಜನಮೆಚ್ಚಿದ ನಾಯಕ... ಸಮೀಕ್ಷೆಯಲ್ಲಿ ಬಹಿರಂಗ - ಸಮೀಕ್ಷೆ

ಸಮೀಕ್ಷೆ ಪ್ರಕಾರ ಮೋದಿ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ವಿಚಾರದಲ್ಲಿ ಆರನೇ ಸ್ಥಾನದಲ್ಲಿದ್ದು, ಕಳೆದ ವರ್ಷ ಎಂಟನೇ ಸ್ಥಾನದಲ್ಲಿದ್ದರು. ಮಹಿಳೆಯರ ವಿಭಾಗದಲ್ಲಿ ಬಾಕ್ಸರ್​ ಮೇರಿ ಕೋಮ್ ಭಾರತದಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.

ಪ್ರಧಾನಿ ಮೋದಿ

By

Published : Jul 20, 2019, 5:38 AM IST

ನವದೆಹಲಿ:ಪ್ರಧಾನಿ ಮೋದಿ ಭಾರತದಲ್ಲೇ ಅತ್ಯಂತ ಮೆಚ್ಚುಗೆ ಪಡೆದ ಅಗ್ರನಾಯಕ ಎನ್ನುವ ಹಿರಿಮೆಗೆ ಪಾತ್ರವಾಗಿದ್ದು, ಯುಕೆ ಮೂಲದ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಿಂದ ವಿಷಯ ಬಹಿರಂಗವಾಗಿದೆ.

ಸಮೀಕ್ಷೆ ಪ್ರಕಾರ ಮೋದಿ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ವಿಚಾರದಲ್ಲಿ ಆರನೇ ಸ್ಥಾನದಲ್ಲಿದ್ದು, ಕಳೆದ ವರ್ಷ ಎಂಟನೇ ಸ್ಥಾನದಲ್ಲಿದ್ದರು. ಮಹಿಳೆಯರ ವಿಭಾಗದಲ್ಲಿ ಬಾಕ್ಸರ್​ ಮೇರಿ ಕೋಮ್ ಭಾರತದಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಸಮೀಕ್ಷೆ ಬಹಿರಂಗವಾಗುತ್ತಿದ್ದಂತೆ ಹಲವು ರಾಜಕಾರಣಿಗಳು ಟ್ವೀಟ್ ಮೂಲಕ ಪ್ರಧಾನಿ ಮೋದಿಗೆ ಶುಭಾಶಯ ಸಲ್ಲಿಸಿದ್ದಾರೆ.

ಬಾಲಿವುಡ್ ನಟರಾದ ಅಮಿತಾಭ್ ಬಚ್ಚನ್, ಶಾರುಖ್​ ಖಾನ್​​ ಹಾಗೂ ಸಲ್ಮಾನ್ ಖಾನ್ ಜನಪ್ರಿಯತೆ ವಿಚಾರದಲ್ಲಿ ಅಗ್ರ ಇಪ್ಪತ್ತರೊಳಗೆ ಕಾಣಿಸಿಕೊಂಡಿದ್ದಾರೆ. ದೀಪಿಕಾ ಪಡುಕೋಣೆ, ಪ್ರಿಯಾಂಕ ಗಾಂಧಿ, ಐಶ್ವರ್ಯಾ ರೈ ಹಾಗೂ ಸುಶ್ಮಿತಾ ಸೇನ್​ ಮಹಿಳೆಯರ ವಿಭಾಗದಲ್ಲಿ ಅಗ್ರ ಇಪ್ಪತ್ತರಲ್ಲಿ ಸ್ಥಾನ ಪಡೆದಿದ್ದಾರೆ.

ಜಾಗತಿಕ ಮಟ್ಟದಲ್ಲಿ ಶ್ರೀಮಂತ ಉದ್ಯಮಿ ಬಿಲ್​ ಗೇಟ್ಸ್​ ಅಗ್ರಸ್ಥಾನದಲ್ಲಿದ್ದರೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ನಂತರದ ಸ್ಥಾನದಲ್ಲಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಬರಾಕ್ ಒಬಾಮ ಪತ್ನಿ ಮಿಷೆಲ್ ಒಬಾಮ ಮೊದಲ ಸ್ಥಾನ ಹಾಗೂ ಒಫ್ರಾ ವಿನ್​ಫ್ರೇ ಎರಡನೇ ಸ್ಥಾನ ಪಡೆದಿದ್ದಾರೆ.

ABOUT THE AUTHOR

...view details