ಕರ್ನಾಟಕ

karnataka

ETV Bharat / bharat

ಪಾಕ್​ಗೆ ಬಿರಿಯಾನಿ ತಿನ್ನಲು ಹೋಗಿದ್ದು ಮೋದಿ : ಪ್ರಿಯಾಂಕಾ ವಾಗ್ದಾಳಿ - ರಾಹುಲ್ ಗಾಂಧಿ

ಪ್ರಧಾನಿ ಮೋದಿ ಬಿರಿಯಾನಿ ತಿನ್ನಲು ಪಾಕ್​​ಗೆ ಹೋಗಿದ್ದವರು ಎಂದು ಪ್ರಿಯಾಂಕಾ ಗಾಂಧಿ ಟಾಂಗ್​ ನೀಡಿದ್ದಾರೆ.

ಮೋದಿ ಬಿರ್ಯಾನಿ ತಿನ್ನಲು ಪಾಕ್​​ಗೆ ಹೋಗಿದ್ದವರು ಎಂದ ಪ್ರಿಯಾಂಕಾ ಗಾಂಧಿ

By

Published : Mar 30, 2019, 9:28 AM IST

ಅಯೋಧ್ಯೆ:ಪಾಕಿಸ್ತಾನದ ವಿಚಾರವಾಗಿ ಕಾಂಗ್ರೆಸ್​ ಟೀಕಿಸಿದ್ದ ಪ್ರಧಾನಿ ಮೋದಿ ಅವರಿಗೆ ಕಾಂಗ್ರೆಸ್‌ ಮುಖಂಡೆ ಪ್ರಿಯಾಂಕಾ ಗಾಂಧಿ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ. ಸ್ವತಃ ಪ್ರಧಾನಿ ನರೇಂದ್ರ ಮೋದಿಯೇ ಪಾಕ್‌ಗೆ ಬಿರಿಯಾನಿ ತಿನ್ನಲು ತೆರಳಿದ್ದರು ಅಂತಾ ಟೀಕಿಸಿದ್ದಾರೆ.

ಭಾರತ ನಡೆಸಿದ ಬಾಲಾಕೋಟ್​ ದಾಳಿಗೆ ವಿರುದ್ಧವಾಗಿ ಕಾಂಗ್ರೆಸ್ಸಿಗರು ಮಾತನಾಡುತ್ತಿದ್ದಾರೆ. ಇದು ಪಾಕ್​ಗೆ ಅನುಕೂಲಕರವಾಗಿದೆ ಎಂದು ಪ್ರಧಾನಿ ಮೋದಿ ನಿನ್ನೆ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದರು. ಈ ಬಗ್ಗೆ ಮಾಧ್ಯಮದವರು ಪ್ರಶ್ನೆ ಕೇಳಿದಾಗ, ಅವರೇ (ಮೋದಿ) ಬಿರಿಯಾನಿ ತಿನ್ನಲು ಪಾಕ್​ಗೆ ಹೋದವರು ಎಂದು ಪ್ರಿಯಾಂಕಾ ಕುಟುಕಿದ್ದಾರೆ.

ಮೋದಿ ಬಿರಿಯಾನಿ ತಿನ್ನಲು ಪಾಕ್​​ಗೆ ಹೋಗಿದ್ದವರು ಎಂದ ಪ್ರಿಯಾಂಕಾ ಗಾಂಧಿ

2015 ಡಿಸೆಂಬರ್​ನಲ್ಲಿ ಪ್ರಧಾನಿ ಮೋದಿ ಪಾಕ್​ ದಿಢೀರನೆ ಭೇಟಿ ನೀಡಿದ್ದರು. ಆಗಿನ ಪಾಕ್​ ಪ್ರಧಾನಿ ನವಾಜ್ ಷರೀಫ್​ರನ್ನು ಭೇಟಿ ಮಾಡಿದ್ದ ಮೋದಿ, ಅವರ ಮೊಮ್ಮಗಳ ಮದುವೆಯಲ್ಲೂ ಪಾಲ್ಗೊಂಡಿದ್ದರು.

ಅತ್ತ ಪ್ರಿಯಾಂಕಾ ಮೋದಿ ವಿರುದ್ಧ ದಾಳಿ ನಡೆಸಿದರೆ, ಇತ್ತ ಸಹೋದರ ರಾಹುಲ್ ಗಾಂಧಿ ಟ್ವಿಟ್ಟರ್​ ಮೂಲಕ ಮೋದಿಗೆ ಮತ್ತೊಂದು ಟಾಂಗ್​ ನೀಡಿದರು.ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ, ನೀತಿ ಆಯೋಗವನ್ನು ರದ್ದು ಮಾಡುತ್ತೇವೆ. ಇದು ಪ್ರಧಾನಿ ಮೋದಿ ಅವರ ಪ್ರಚಾರ ಮಾಡುವುದರ ಹೊರತಾಗಿ ಬೇರಾವ ಕೆಲಸ ಮಾಡಿಲ್ಲ. ಇದರ ಬದಲಾಗಿ ಮತ್ತೆ ಯೋಜನಾ ಆಯೋಗವನ್ನು ರಚಿಸಿ, ಪ್ರಖ್ಯಾತ ಆರ್ಥಿಕ ತಜ್ಞರನ್ನು ಹಾಗೂ ನೂರಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸುತ್ತೇವೆ ಎಂದು ಟ್ವೀಟ್​ ಮಾಡಿದ್ದಾರೆ.

ABOUT THE AUTHOR

...view details