ಕರ್ನಾಟಕ

karnataka

ETV Bharat / bharat

ರಫೇಲ್​ ಆಯ್ಕೆ ಮಾಡಿದ್ದೇ ಮೊದಲ ತಪ್ಪು: ಸಿಎಜಿ ಹೊಸ ಬಾಂಬ್​! - ದೋಷ

ಕೇಂದ್ರ ಸರ್ಕಾರ ರಫೇಲ್​ ಯುದ್ಧ ವಿಮಾನವನ್ನು ಆಯ್ಕೆ ಮಾಡಿದ್ದೇ ಮೊದಲು ತಪ್ಪು ಎಂದು ಸಿಎಜಿ ಹೇಳಿದೆ

ರಾಜೀವ್ ಮೆಹ್ರಿಶಿ

By

Published : Feb 14, 2019, 1:24 PM IST

ನವದೆಹಲಿ: ನಿನ್ನೆಯಷ್ಟೆ ಸಂಸತ್​ ಎದುರು ರಫೇಲ್​ ಕುರಿತಾದ ವರದಿ ಸಲ್ಲಿಸಿರುವ ಸಿಎಜಿ ಇದೀಗ ಹೊಸ ಬಾಂಬ್ ಸಿಡಿಸಿದೆ. ರಫೇಲ್ ಆಯ್ಕೆಯಲ್ಲಿಯೇ ಸಿಎಜಿ ದೋಷ ಹುಡುಕಿದ್ದು, ಹಲವು ಹಂತಗಳಲ್ಲಿ ನಡೆದ ಪ್ರಕ್ರಿಯೆ ಬಗ್ಗೆ ಅಪಸ್ವರ ಎತ್ತಿದೆ.

ಸರ್ಕಾರ ರಫೇಲ್​ ಯುದ್ಧ ವಿಮಾನಗಳ ಸಂಖ್ಯೆಯನ್ನು 36ಕ್ಕೆ ಇಳಿಸಿದಾಗ, ಭಾರತೀಯ ವಾಯುಪಡೆಗೆ ಕ್ಲಿಷ್ಟ ಪರಿಸ್ಥಿತಿ ಎದುರಾಗಿತ್ತು. ವಿಮಾನ ಆಯ್ಕೆಯಲ್ಲಿ ಸಾಕಷ್ಟು ಸಮಯ ವ್ಯರ್ಥವಾಯಿತು. ಅಲ್ಲದೆ, ಕೇಂದ್ರ ಜಾಗೃತ ಆಯೋಗ ನಿರ್ದೇಶನದಂತೆ, ಎರಡನೇ ಬಾರಿ ಬಿಡ್​ ಮಾಡಿದ ಏರೋ ಪೈಟರ್​ ತೂಫಾನ್​ನೊಂದಿಗೆ ಸರಿಯಾದ ಮಾತುಕತೆ ನಡೆಯಲೇ ಇಲ್ಲ ಎಂದು ಹೇಳಲಾಗಿದೆ.

ಮೀಡಿಯಂ ಮಲ್ಟಿ ರೋಲ್​ ಯುದ್ಧ ವಿಮಾನ​ (MMRCA) ಯೋಜನೆಯಡಿ ತಯಾರಾದ 18 ವಿಮಾನಗಳು ಹಾರಾಟದ ಸ್ಥಿತಿಯಲ್ಲಿದ್ದವು. ಉಳಿದವು ಪಿಎಸ್​ಯು ಹಿಂದುಸ್ತಾನ್​ ಏರೋನ್ಯಾಟಿಕ್​ ಲಿ (HAL)ನಿಂದ ತಯಾರಾಗಲು ಲೈಸನ್ಸ್​ ಪಡೆಯುವ ಹಂತದಲ್ಲಿದ್ದವು. ಆದರೆ ಈ ಎಲ್ಲ ಪ್ರಕ್ರಿಯೆಗಳನ್ನು 2015 ಜೂನ್​ನಲ್ಲಿ ಎನ್​ಡಿಎ ಸರ್ಕಾರ ರದ್ದು ಮಾಡಿತು. ಅಂತೆಯೇ, 2016 ಸೆಪ್ಟೆಂಬರ್​ನಲ್ಲಿ ಫ್ರಾನ್ಸ್​ನೊಂದಿಗೆ ಅಂತರ ಸರ್ಕಾರಿ ಒಪ್ಪಂದವೂ ಜರುಗಿತು. ಯುಪಿಎ ಸರ್ಕಾರದ ಅವಧಿಯಲ್ಲಿ MMRCA ಯೋಜನೆಯು ಅಂತಿಮ ರೂಪ ಪಡೆಯದ ಕಾರಣ ಎನ್​ಡಿಎ ಸರ್ಕಾರ 59,000 ಕೋಟಿ ರೂಗಳ ರಫೇಲ್ ಒಪ್ಪಂದಕ್ಕೆ ಮುಂದಾಗುವಂತಾಯಿತು ಎಂದು ವಿವರಿಸಿದೆ.

ಸ್ವೀಡಿಷ್​ನ Gripen-E, ರಷ್ಯಾದ MiG-35 ಹಾಗೂ fighters ಗಳು ಟ್ರಯಲ್​ ನೋಡುವ ಹಂತದಲ್ಲಿ ತಿರಸ್ಕೃತಗೊಂಡವು. ಕಡಿಮೆ ಬಿಡ್​ ಮಾಡಿದ ಕಾರಣ ರಫೇಲ್​ ಅನ್ನು ಆಯ್ಕೆ ಮಾಡಿಕೊಳ್ಳಲಾಯಿತು. ನಿಜಾಂಶವೇನೆಂದರೆ, ದಸಾಲ್ಟ್​ ಏವಿಯೇಷನ್​ನ ಕಡಿಮೆ ಬಿಡ್​ ಬಹುಕಾಲ ಉಳಿಯಲಿಲ್ಲ ಎಂದಿದೆ.

ದಸಾಲ್ಟ್​ ತಾಂತ್ರಿಕವಾಗಿ ಹಾಗೂ ಬೆಲೆಯಲ್ಲಿ ಗಣನೀಯವಾಗಿ ಪರಿವರ್ತನೆ ಮಾಡುತ್ತಾ ರಕ್ಷಣಾ​​ ಇಲಾಖೆ ಪ್ರಕ್ರಿಯೆಗಳ ನಿಯಮ ಉಲ್ಲಂಘಿಸಿತು. ಫೀಲ್ಡ್​ ಟ್ರಯಲ್​ನಲ್ಲಿ ರಫೇಲ್​ ಕೂಡ ಸೋತಿದ್ದರೂ ದೂರುಗಳಿಲ್ಲದ ಬಿಡ್​ ಸಲ್ಲಿಸಿತು. ದರದ ಮೌಲ್ಯಮಾಪನಕ್ಕೆ ಒಟ್ಟು ಮೊತ್ತದ ಬಿಡ್​ ಅನ್ನು ಸೂಚಿಸಲಾದ ರೀತಿಯಲ್ಲಿ ದಸಾಲ್ಟ್​ ಸಲ್ಲಿಸಿಯೇ ಇಲ್ಲ. ದಸಾಲ್ಟ್​ನ ಬಿಡ್​ ಮೌಲ್ಯಮಾಪನ ಮಾಡುವಲ್ಲಿ ಕಂಟ್ರಾಕ್ಟ್​​ ನೆಗೋಷಿಯೇಷನ್​ ಕಮಿಟಿ (CNC)ಯು ಡೈರೆಕ್ಟ್​ ಕಾಸ್ಟ್​ ಆಫ್​ ಅಕ್ವಿಸಿಷನ್​ ಪ್ರಕ್ರಿಯೆಯಲ್ಲಿ ಸಮಾನ ಸ್ಥಿತಿ ಪಾಲಿಸಿಲ್ಲ ಎಂದು ವಿವರಿಸಿದೆ.

ಮುಖ್ಯವಾಗಿ, ದಸಾಲ್ಟ್ ಮಾತುಕತೆ ವೇಳೆ ಮೊದಲ 18 ವಿಮಾನಗಳಿಗೆ ಮಾತ್ರ ಗ್ಯಾರಂಟಿ ನೀಡುವುದಾಗಿ ಹೇಳಿತ್ತು. ಆದರೆ ಹೆಚ್​ಎಲ್​ 108 ವಿಮಾನಗಳ ಗುಣಮಟ್ಟಕ್ಕೆ ತಾನು ಜವಾಬ್ದಾರಿ ಎಂದು ಹೇಳಿತ್ತು. CNCಯು ದಸಾಲ್ಟ್​ಗೆ 126 ವಿಮಾನಗಳ ಗುಣಮಟ್ಟದ ಹೊಣೆ ಹೊರುವಂತೆ ಸೂಚಿಸಿದ ಮಾತುಕತೆಯೇ ಬಿದ್ದುಹೋಗಿತ್ತು ಎಂದು ಹೇಳಿದೆ.

ABOUT THE AUTHOR

...view details