ನವದೆಹಲಿ: ಕೊರೊನಾ ಕರಿನೆರಳಿನ ನಡುವೆ ದುಡಿಮೆ ಇಲ್ಲದೆ, ವ್ಯಾಪಾರ ಆಗದೇ ಜನ ಒದ್ದಾಡುತ್ತಿದ್ದರೆ. ಇತ್ತ ನಿತ್ಯವೂ ಸತತ 12-13 ದಿನಗಳಿಂದ ಪೆಟ್ರೋಲ್, ಡೀಸೆಲ್ ದರ ಏರಿಕೆ ಆಗುತ್ತಲೇ ಇದೆ.
ಶತಕ ಬಾರಿಸುತ್ತಾ ಪೆಟ್ರೋಲ್-ಡೀಸೆಲ್ ಬೆಲೆ?... ನಿಲ್ಲದ ದರ ಏರಿಕೆ ಓಟ - ಪೆಟ್ರೋಲ್ ಡೀಸೆಲ್ ದರ ಏರಿಕೆ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರಿಕೆ ಆಗುತ್ತಿರುವ ಕಚ್ಚಾತೈಲ ಬೆಲೆ ಏರಿಕೆ ಹಾಗೂ ಕೇಂದ್ರ- ರಾಜ್ಯಗಳ ತೆರಿಗೆ ಭಾರದಿಂದಾಗಿ ದೇಶದಲ್ಲಿ ಇಂಧನ ಬೆಲೆ ಏರಿಕೆ ಕಾಣುತ್ತಿದೆ.
ಪೆಟ್ರೋಲ್, ಡೀಸೆಲ್ ದರ ಏರಿಕೆ
ಭಾರತ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರಿಕೆ ಆಗುತ್ತಿರುವ ಕಚ್ಚಾತೈಲ ಬೆಲೆ ಏರಿಕೆ ಹಾಗೂ ಕೇಂದ್ರ- ರಾಜ್ಯಗಳ ತೆರಿಗೆ ಭಾರದಿಂದಾಗಿ ಬೆಲೆ ಏರಿಕೆ ಕಾಣುತ್ತಿದೆ.
ಇದುವರೆಗೂ ಎಲ್ಲ ಸೇರಿ ಲೀಟರ್ಗೆ ಸರಾಸರಿ 6 ರೂ ಗಿಂತ ಹೆಚ್ಚು ಏರಿಕೆಯಾಗಿದೆ. ಇವತ್ತು ದೆಹಲಿಯಲ್ಲಿ ಲೀಟರ್ ಪೆಟ್ರೋಲ್ಗೆ 53 ಪೈಸೆ ಏರಿಕೆ ಕಾಣುವ ಮೂಲಕ 77.81 ರೂ ಗೆ ಹೆಚ್ಚಳ ಕಂಡಿದೆ. ಇನ್ನು ಡೀಸೆಲ್ ಬೆಲೆಯಲ್ಲೂ 64 ಪೈಸೆ ಏರಿಕೆ ಕಂಡು, 76.43 ಕ್ಕೆ ತಲುಪಿದೆ.