ನವದೆಹಲಿ: ಭಾರತ ಮತ್ತು ಯುಕೆ ನಡುವಿನ ವಿಮಾನಗಳು ಜನವರಿ 8 ರಿಂದ ಮತ್ತೆ ಪುನಾರಂಭಗೊಳ್ಳಲಿವೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ. ಡಿಸೆಂಬರ್ 23 ರಂದು ವಿಮಾನವನ್ನು ಬುಕ್ ಪ್ರಯಾಣಿಕರಿಗೆ ಪ್ರಯಾಣಕ್ಕೆ ಮೊದಲ ಆದ್ಯತೆ ಎಂದು ಏರ್ ಇಂಡಿಯಾ ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಎಲ್ಲ ಪ್ರಯಾಣಿಕರಿಗೆ ಡಿಸೆಂಬರ್ 22 ರಂದು ಅವರು ಕಾಯ್ದಿರಿಸಿದ ವಿಮಾನಗಳನ್ನು ರೀ ಶೆಡ್ಯೂಲ್ ಮಾಡಲಾಗುವುದೆಂದು ತಿಳಿಸಲಾಗಿತ್ತು. ಇಂದು ಪ್ರಕಟಣೆಯ ಬಳಿಕ ಎಸ್ಎಂಎಸ್ಗಳು ಮತ್ತು ಮೇಲ್‌ಗಳ ಮುಖಾಂತರ ಪ್ರಯಾಣಿಕರಿಗೆ ಮರು ನಿಗದಿಪಡಿಸಿದ ಪ್ರಯಾಣದ ದಿನಾಂಕವನ್ನು ತಿಳಿಸಲಾಗಿದೆ. ಡಿಸೆಂಬರ್ 23 ರಂದು ತಮ್ಮ ವಿಮಾನವನ್ನು ಕಾಯ್ದಿರಿಸಿದ ಪ್ರಯಾಣಿಕರು ಮೊದಲ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗುವುದು "ಎಂದು ವಿಮಾನಯಾನ ಸಂಸ್ಥೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತ ಮತ್ತು ಯುಕೆ ನಡುವಿನ ವಿಮಾನಗಳು 2021ರ ಜನವರಿ 8 ರಿಂದ ಪುನಾರಂಭ ಮಾಡಲು ನಿರ್ಧರಿಸಲಾಗಿದೆ. ಜನವರಿ 23 ರವರೆಗೆ ಎರಡೂ ದೇಶಗಳ ವಿಮಾನಗಳಿಗೆ ದೆಹಲಿ, ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್‌ಗೆ ಮಾತ್ರ ತೆರಳಲು ಅವಕಾಶ ಹಾಗೂ ವಾರಕ್ಕೆ 15 ವಿಮಾನಗಳು ಮಾತ್ರ ಸಂಚರಿಸಬೇಕು, ಎಂದು ಸಚಿವರು ಟ್ವೀಟ್ನಲ್ಲಿ ಹೇಳಿದ್ದಾರೆ.