ಕರ್ನಾಟಕ

karnataka

ETV Bharat / bharat

ರಸ್ತೆ ಬದಿ ಹೂ ಮಾರುತ್ತಿದ್ದ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ 1,34,500 ರೂ.ನೀಡಿದ ಸಂಸದ! - ಡಿಎಂಕೆ ಸಂಸದ ಡಾ. ಸೆಂಥಿಲ್​ ಕುಮಾರ್

ಕೊರೊನಾ ಮಹಾಮಾರಿಯಿಂದಾಗಿ ಶಾಲಾ ವಿದ್ಯಾರ್ಥಿಗಳು ಕೆಲಸ ಮಾಡಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದ್ದು, ತಮಿಳುನಾಡಿನಲ್ಲಿ ರಸ್ತೆ ಬದಿ ಕೆಲಸ ಮಾಡುತ್ತಿದ್ದ ವಿದ್ಯಾರ್ಥಿಗಳ ಪಾಲಿಗೆ ಸಂಸದರೊಬ್ಬರು ಆಪತ್ಬಾಂಧವರಾಗಿದ್ದಾರೆ.

School students
School students

By

Published : Jul 27, 2020, 9:18 PM IST

ಚೆನ್ನೈ: ದೇಶಾದ್ಯಂತ ಕೊರೊನಾ ತಂದಿಟ್ಟಿರುವ ತೊಂದರೆಯಿಂದ ಎಲ್ಲರೂ ಸಂಕಷ್ಟಕ್ಕೊಳಗಾಗಿದ್ದಾರೆ. ಲಕ್ಷಾಂತರ ಜನರು ಕೆಲಸ ಕಳೆದುಕೊಂಡಿದ್ದು, ಬೇರೆ ದಾರಿಯಿಲ್ಲದೇ ರಸ್ತೆ ಬದಿ ವ್ಯಾಪಾರಿಗಳಾಗಿ ಜೀವನ ನಡೆಸುವಂತಹ ಸ್ಥಿತಿ ನಿರ್ಮಾಣಗೊಂಡಿದೆ.

ಇದೀಗ ತಮಿಳುನಾಡಿನಲ್ಲಿ ಶಾಲಾ ವಿದ್ಯಾರ್ಥಿಗಳು ಬೇರೆ ದಾರಿ ಕಾಣದೇ ರಸ್ತೆ ಬದಿ ವ್ಯಾಪಾರ ಮಾಡುತ್ತಿದ್ದು, ಅಂತಹ ವಿದ್ಯಾರ್ಥಿಗಳಿಗೆ ಡಿಎಂಕೆ ಸಂಸದ ಸಹಾಯ ಮಾಡಿದ್ದಾರೆ.

ವಿದ್ಯಾರ್ಥಿಗಳ ಪಾಲಿಗೆ ಆಪತ್ಬಾಂಧವರಾದ ಸಂಸದರು

ಶಬೀರ್​ ಕುಟುಂಬ ಬಡತನದಿಂದ ಕೂಡಿದ್ದು, ಬೇರೆ ದಾರಿ ಇಲ್ಲದ ಕಾರಣ ಇತನ ಇಬ್ಬರು ಮಕ್ಕಳು ರಸ್ತೆ ಬದಿಯಲ್ಲಿ ನಿಂತುಕೊಂಡು ಹೂವು ಮಾರಾಟ ಮಾಡುತ್ತಿದ್ದಾರೆ. ಇದರ ಮಾಹಿತಿ ಧರ್ಮಪುರಿ ಡಿಎಂಕೆ ಸಂಸದ ಡಾ. ಸೆಂಥಿಲ್​ ಕುಮಾರ್​ ಅವರ ಗಮನಕ್ಕೆ ಬರುತ್ತಿದ್ದಂತೆ ಮಕ್ಕಳ ಶಿಕ್ಷಣಕ್ಕಾಗಿ 1,34,500 ರೂ ನೀಡಿದ್ದಾರೆ. ಇದೇ ವಿಷಯವಾಗಿ ಮಾತನಾಡಿರುವ ಶಬೀರ್​, ಮಕ್ಕಳನ್ನ ಓದಿಸಬೇಕು ಎಂಬ ಮಹಾದಾಸೆ ಇದೆ. ಆದರೆ ಮನೆಯಲ್ಲಿ ಬಡತನವಿರುವ ಕಾರಣ ಬೇರೆ ದಾರಿ ಕಾಣದೇ ಅವರನ್ನ ನನ್ನೊಂದಿಗೆ ಕರೆದುಕೊಂಡು ಬರುವಂತಹ ಸ್ಥಿತಿ ನಿರ್ಮಾಣಗೊಂಡಿದೆ ಎಂದು ತಿಳಿಸಿದ್ದಾರೆ.

ರಸ್ತೆ ಬದಿಯಲ್ಲಿ ವಿದ್ಯಾರ್ಥಿಗಳ ವ್ಯಾಪಾರ

ABOUT THE AUTHOR

...view details