ಕರ್ನಾಟಕ

karnataka

ETV Bharat / bharat

ಇಮ್ರಾನ್ ಸರ್ಕಾರದ ವಿರುದ್ಧ ತೀವ್ರಗೊಂಡ ಹೋರಾಟ: ವಿಪಕ್ಷಗಳಿಂದ ಇಸ್ಲಾಮಾಬಾದ್ ಚಲೋ ಘೋಷಣೆ

ಪಾಕಿಸ್ತಾನದಲ್ಲಿ ಪ್ರಧಾನಿ ಇಮ್ರಾನ್ ಖಾನ್ ಕುರ್ಚಿಗೆ ಕಂಟಕ ಎದುರಾಗುತ್ತಿದ್ದು, ಪಾಕಿಸ್ತಾನ ಡೆಮಾಕ್ರಟಿಕ್ ಪಾರ್ಟಿ ಮೈತ್ರಿಕೂಟದ ಪಕ್ಷಗಳು ಇಸ್ಲಾಮಾಬಾದ್ ಚಲೋ ಘೋಷಣೆ ಮಾಡಿವೆ.

Pakistan oppn announces long march to Islamabad
ಇಮ್ರಾನ್ ಸರ್ಕಾರದ ವಿರುದ್ಧ ತೀವ್ರವಾದ ಹೋರಾಟ

By

Published : Dec 14, 2020, 7:03 PM IST

ಇಸ್ಲಾಮಾಬಾದ್ (ಪಾಕಿಸ್ತಾನ):ಇಮ್ರಾನ್ ಖಾನ್​ ನೇತೃತ್ವದ ಸರ್ಕಾರದ ವಿರುದ್ಧ ಪಾಕಿಸ್ತಾನದಲ್ಲಿ ಆಕ್ರೋಶ ಭುಗಿಲೆದ್ದಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಹಾಗೂ ಅದರ 11 ಮೈತ್ರಿ ಪಕ್ಷಗಳು ಸರ್ಕಾರದ ವಿರುದ್ಧ ಅಭಿಯಾನ ನಡೆಸಲು ಸಿದ್ಧತೆ ನಡೆಸಿವೆ.

ಜನವರಿ ಅಥವಾ ಫೆಬ್ರವರಿಯಲ್ಲಿ ಸರ್ಕಾರದ ವಿರುದ್ಧ ಅಭಿಯಾನ ಬೃಹತ್ ಮಟ್ಟದಲ್ಲಿ ಅಭಿಯಾನ ನಡೆಯುಲಿದೆ ಎಂದು ಹೇಳಲಾಗುತ್ತಿದ್ದು, ಪಾಕಿಸ್ತಾನ ಮುಸ್ಲಿಂ ಲೀಗ್ (ಪಿಎಂಎಲ್​-ಎನ್​) ಉಪಾಧ್ಯಕ್ಷ ಮರ್ಯಮ್ ನವಾಜ್​​ ಸೋಮವಾರ ಮಿನಾರ್​​-ಇ-ಪಾಕಿಸ್ತಾನದ ಬಳಿ ಮಾತನಾಡುತ್ತಾ ಇಸ್ಲಾಮಾಬಾದ್ ಚಲೋಗೆ ಕರೆ ನೀಡಿದ್ದಾರೆ.

ಇದನ್ನೂ ಓದಿ:ಖಲಿಸ್ತಾನ್​ ಪ್ರತ್ಯೇಕತಾವಾದಿ ಚಳವಳಿ ಉತ್ತೇಜಿಸಲು ಪ್ಲಾನ್​.. ಮುಂದುವರಿದ ಪಾಕ್​ ನರಿ ಬುದ್ಧಿ

ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ಕೂಡಾ ಇಸ್ಲಾಮಾಬಾದ್ ಚಲೋ ಹಮ್ಮಿಕೊಳ್ಳಲು ಸಾಥ್ ನೀಡಿದ್ದಾರೆ. ಜಮೈತ್ ಉಲೇಮಾ ಇ ಇಸ್ಲಾಂನ ಮುಖ್ಯಸ್ಥ ಫಜ್ಲುರ್ ರೆಹಮಾನ್ ಪ್ರತಿಭಟನೆಯೊಂದರಲ್ಲಿ ಮಾತನಾಡುತ್ತಾ ಜನವರಿ ಅಥವಾ ಫೆಬ್ರವರಿಯಲ್ಲಿ ನಾವು ಇಸ್ಲಾಮಾಬಾದ್​ ಕಡೆಗೆ ಮೆರವಣಿಗೆ ಹೊರಡಲಿದ್ದೇವೆ ಎಂದಿದ್ದಾರೆ.

ಇದರ ಜೊತೆಗೆ ನ್ಯಾಯಸಮ್ಮತವಲ್ಲದ ಸರ್ಕಾರ ನಮ್ಮನ್ನು ಆಳ್ವಿಕೆ ಮಾಡಲು ನಾವು ಬಿಡುವುದಿಲ್ಲ. ಸರ್ಕಾರವನ್ನು ಉರುಳಿಸಿದ ನಂತರವೇ ನಾವು ವಿಶ್ರಾಂತಿ ಪಡೆಯುತ್ತೇವೆ ಎಂದು ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ ತೆಹ್ರಿಕ್ ಇ ಇನ್ಸಾಫ್ ಆಡಳಿತದ ಪಾಕ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದಲ್ಲಿ 2023ರಲ್ಲಿ ಚುನಾವಣೆಗಳು ನಡೆಯಲಿದ್ದು, ಈಗಾಗಲೇ ಸರ್ಕಾರ ಅಧ್ಯಕ್ಷತೆಯಿಂದಿದೆ ಹಾಗೂ ಇಮ್ರಾನ್ ಖಾನ್ ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ABOUT THE AUTHOR

...view details