ಮನಾಲಿ (ಹಿಮಾಚಲಪ್ರದೇಶ) :ಭಾರಿ ಹಿಮ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕುಲ್ಲು ಜಿಲ್ಲೆಯ ಮನಾಲಿಯ ಸೌಥ್ ಪೋರ್ಟಲ್ ಆಫ್ ಅಟಲ್ ಟನೆಲ್ ಮತ್ತು ಸೋಲಾಂಗ್ ನಲ್ಲಾ ನಡುವಿನ ರಸ್ತೆಯಲ್ಲಿ 500ಕ್ಕೂ ಹೆಚ್ಚು ಪ್ರವಾಸಿಗರು ಸಿಲುಕಿದ್ದು, ಅವರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಹೆಚ್ಚು ಹಿಮ ಸುರಿಯುತ್ತಿರುವ ಹಿನ್ನೆಲೆ ರಸ್ತೆಗಳು ಬಂದ್ ಆಗಿದ್ದು, ಸಂಚಾರ ವ್ಯವಸ್ಥೆ ಸ್ಥಗಿತಗೊಂಡಿದೆ. ಈ ಹಿನ್ನೆಲೆ ರಸ್ತೆಗಳಲ್ಲಿ ಸಿಲುಕಿರುವ ಪ್ರವಾಸಿಗರನ್ನು ರಕ್ಷಿಸಲು ಹಾಗೂ ರಸ್ತೆಯಲ್ಲಿನ ಹಿಮ ತೆರವುಗೊಳಿಸವ ಕೆಲಸ ನಡೆಯುತ್ತಿದೆ ಎಂದು ಮನಾಲಿ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ರಾಮನ್ ಘರ್ಸಂಗಿ ಹೇಳಿದ್ದಾರೆ.