ಕರ್ನಾಟಕ

karnataka

By

Published : Jun 27, 2020, 4:01 PM IST

ETV Bharat / bharat

ಕೊರೊನಾಗಿಂತ ಮಾನಸಿಕ ಖಿನ್ನತೆಯೇ ಅಪಾಯಕಾರಿ... ಜನರು ಸಾವಿನ ಕದ ತಟ್ಟುವುದೇಕೆ?

ಲಾಕ್​ಡೌನ್​ ಹಾಗೂ ಅನ್‌ಲಾಕ್ ​1.0 ಅವಧಿಯಲ್ಲಿ ಜಾರ್ಖಂಡ್​ನಲ್ಲಿ ಪ್ರತಿ ನಾಲ್ಕೂವರೆ ಗಂಟೆಗೆ ಒಬ್ಬರಂತೆ ದಿನಕ್ಕೆ ಐವರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.

Jharkhand
ಆತ್ಮಹತ್ಯೆ

ರಾಂಚಿ: ಕೊರೊನಾಗಿಂತ ಮಾನಸಿಕ ಖಿನ್ನತೆಯೇ ಅಪಾಯಕಾರಿ ಎಂಬುದು ಜಾರ್ಖಂಡ್​ನಲ್ಲಿ​ ಸಾಬೀತಾಗಿದೆ. ಲಾಕ್​ಡೌನ್​ ಹಾಗೂ ಅನ್‌ಲಾಕ್ ​1.0 ಅವಧಿಯಲ್ಲಿ ಪ್ರತಿನಿತ್ಯ ಈ ರಾಜ್ಯದಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿರುವವರ ಸರಾಸರಿ 5.5ರಷ್ಟಿದೆ.

ಜಾರ್ಖಂಡ್​ನಲ್ಲಿ​ ಮಾರ್ಚ್​ನಿಂದ ಜೂನ್​ 25ರವರೆಗೆ 449 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೂನ್​ನಲ್ಲೇ 134 ಮಂದಿ ಸಾವಿಗೆ ಶರಣಾಗಿದ್ದಾರೆ. ರಾಜಧಾನಿ ರಾಂಚಿಯಲ್ಲೇ ಏ. 1ರಿಂದ ಜೂ. 25ರವರೆಗೆ 55 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರತಿ ನಾಲ್ಕೂವರೆ ಗಂಟೆಗೆ ಒಬ್ಬರಂತೆ ದಿನಕ್ಕೆ ಐವರು ​ಸೂಸೈಡ್ ಮಾಡಿಕೊಳ್ಳುತ್ತಿದ್ದಾರೆ.

ಲಾಕ್‌ಡೌನ್ ಮತ್ತು ಅನ್‌ಲಾಕ್ 1.0 ಅವಧಿಯಲ್ಲಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವ ಸುಮಾರು 1,200 ಜನರು ನಮ್ಮ ಸಂಸ್ಥೆಯನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಪ್ರತಿದಿನ 150ಕ್ಕೂ ಹೆಚ್ಚು ದೂರವಾಣಿ ಕರೆಗಳು ನಮಗೆ ಬರುತ್ತಿದ್ದವು. ಈ ಪೈಕಿ ಶೇ. 20ರಷ್ಟು ಜನರು ಬದುಕುವ ಭರವಸೆ ತ್ಯಜಿಸಿ ತಮ್ಮ ಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದ್ದರು ಎಂದು ರಾಂಚಿಯ ಸೆಂಟ್ರಲ್ ಇನ್​ಸ್ಟಿಟ್ಯೂಟ್ ಆಫ್ ಸೈಕಿಯಾಟ್ರಿ (ಸಿಐಪಿ)ಯ ಮನೋ ವೈದ್ಯ ಡಾ. ಸಂಜಯ್ ಕುಮಾರ್ ಮಂಡಲ್ ಮಾಹಿತಿ ನೀಡಿದ್ದಾರೆ.

ಆರ್ಥಿಕ ಕುಸಿತ, ಉದ್ಯೋಗ ಕಳೆದುಕೊಳ್ಳುವ ಭಯ, ನಿರುದ್ಯೋಗ, ಅಭದ್ರತೆ ಮತ್ತು ಇತರ ಅಂಶಗಳು ಜನರಲ್ಲಿ ತೀವ್ರ ಖಿನ್ನತೆಗೆ ಕಾರಣವಾಗಿವೆ. ಅಲ್ಲದೆ ಲಾಕ್‌ಡೌನ್ ವೇಳೆ ಜನರು ಮನೆಯಲ್ಲಿಯೇ ಬಂಧಿಸಲ್ಪಟ್ಟಿದ್ದರಿಂದ ಕೌಟುಂಬಿಕ ಕಲಹ, ಹಿಂಸಾಚಾರ ಹೆಚ್ಚಾಯಿತು. ಈ ಎಲ್ಲಾ ಅಂಶಗಳು ಜನರನ್ನು ಆತ್ಮಹತ್ಯೆಗೆ ಪ್ರೇರೇಪಿಸಿತು. ಈ ವೇಳೆ ಸರಿಯಾಗಿ ಆತ್ಮಾವಲೋಕನ, ಸಮಾಲೋಚನೆ ಮಾಡಿದ್ದಾರೆ. ಅನೇಕ ಜೀವಗಳು ಉಳಿಯುತ್ತಿತ್ತು ಎಂದು ಮನೋವೈದ್ಯ ಅಜಯ್ ಕುಮಾರ್ ಹೇಳುತ್ತಾರೆ.

ABOUT THE AUTHOR

...view details