ಕರ್ನಾಟಕ

karnataka

ETV Bharat / bharat

ಲೋಕಸಮರದ ಏಕೈಕ ಗೇಮ್​ಚೇಂಜರ್​ ಮೋದಿ: ಜೇಟ್ಲಿ

ಮೋದಿ ಓರ್ವ ಪ್ರಭಾವಿ ನಾಯಕ. ಭ್ರಷ್ಟಾಚಾರ ಹಾಗೂ ಭಯೋತ್ಪಾದನೆ ನಿರ್ಮೂಲನೆಗೆ ಪಣ ತೊಟ್ಟಿರುವ ಮೋದಿ ಮತ್ತೆ ಪ್ರಧಾನಿ ಪಟ್ಟಕೇರುವುದು ಖಚಿತ ಎಂದು ಜೇಟ್ಲಿ ವಿಶ್ವಾಸ ಮಾತುಗಳನ್ನಾಡಿದ್ದಾರೆ

ನರೇಂದ್ರ ಮೋದಿ

By

Published : Mar 26, 2019, 11:02 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಚುನಾವಣೆಯ ಏಕೈಕ ಗೇಮ್​​ಚೇಂಜರ್ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಮೋದಿ ನಿಲುವುಗಳು ಹಾಗೂ ಸರ್ಕಾರದ ಅಭಿವೃದ್ಧಿಪರ ಕಾರ್ಯಕ್ರಮಗಳು ಮತ್ತೊಮ್ಮೆ ಕೈ ಹಿಡಿಯಲಿದ್ದು ಈ ಮೋದಿ ಎರಡನೇ ಬಾರಿ ಪ್ರಧಾನಿಯಾಗಲಿದ್ದಾರೆ ಎಂದು ಜೇಟ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಬಾರಿ ಚುನಾವಣೆಯಲ್ಲಿ ಏಕೈಕ ಗೇಮ್​ಚೇಂಜರ್​​ ಇದ್ದು ಅವರ ಹೆಸರು ನರೇಂದ್ರ ಮೋದಿ. ಮೋದಿ ಓರ್ವ ಪ್ರಭಾವಿ ನಾಯಕ. ಭ್ರಷ್ಟಾಚಾರ ಹಾಗೂ ಭಯೋತ್ಪಾದನೆ ನಿರ್ಮೂಲನೆಗೆ ಪಣ ತೊಟ್ಟಿರುವ ಮೋದಿ ಮತ್ತೆ ಪ್ರಧಾನಿ ಪಟ್ಟಕೇರುವುದು ಖಚಿತ ಎಂದು ಜೇಟ್ಲಿ ವಿಶ್ವಾಸ ಮಾತುಗಳನ್ನಾಡಿದ್ದಾರೆ.

ಚೌಕಿದಾರ್ ಅಭಿಯಾನದ ಬಗ್ಗೆ ಮಾತನಾಡಿದ ಜೇಟ್ಲಿ, ಮೋದಿ ಕಳೆದ ಐದು ವರ್ಷದಿಂದ ಚೌಕಿದಾರರಾಗಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಕಠಿಣ ನಿಲುವು ತಳೆದಿದ್ದಾರೆ. ಇವುಗಳೇ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲಿದೆ ಎಂದಿದ್ದಾರೆ.

ABOUT THE AUTHOR

...view details