ಕರ್ನಾಟಕ

karnataka

ETV Bharat / bharat

ನದಿಯಲ್ಲಿ ಮುಳುಗಿದ್ದ ಪುರಾತನ ಶಿವ ದೇವಾಲಯ ಪತ್ತೆ: ಈ ದೇವಸ್ಥಾನ ಕಟ್ಟಿಸಿದ್ದು ಯಾರು ಗೊತ್ತಾ?

ಸುಮಾರು 50 ರಿಂದ 80 ವರ್ಷಗಳ ಹಿಂದೆ ಭಾರಿ ಮಳೆಯಿಂದ ಪ್ರವಾಹ ಸೃಷ್ಟಿಯಾದ ಹಿನ್ನೆಲೆಯಲ್ಲಿ ನದಿಯಲ್ಲಿ ಮುಳುಗಿದ್ದ ಪುರಾತನ ದೇವಾಲಯವೊಂದು ಗ್ರಾಮಸ್ಥರ ಪರಿಶ್ರಮದಿಂದ ಬೆಳಕಿಗೆ ಬಂದಿದೆ. ಪುರಾತನ ದೇವಾಲಯ ನೋಡಲು ಜನಸಾಗರವೇ ಹರಿದು ಬರುತ್ತಿದೆ.

Shiva temple found, Shiva temple found in penna river, Nellore Shiva temple found news, Nellore Shiva temple news, ಶಿವ ದೇವಾಲಯ ಪತ್ತೆ, ಪೆನ್ನಾ ನದಿಯಲ್ಲಿ ಶಿವ ದೇವಾಲಯ ಪತ್ತೆ, ನೆಲ್ಲೂರು ಪೆನ್ನಾ ನದಿಯಲ್ಲಿ ಶಿವ ದೇವಾಲಯ ಪತ್ತೆ, ನೆಲ್ಲೂರು ದೇವಾಲಯ ಪತ್ತೆ ಸುದ್ದಿ,
ನದಿಯಲ್ಲಿ ಮುಳುಗಿದ್ದ ಪುರಾತನ ಶಿವ ದೇವಾಲಯ ಪತ್ತೆ

By

Published : Jun 17, 2020, 6:36 AM IST

Updated : Jun 17, 2020, 10:48 AM IST

ನೆಲ್ಲೂರು: ನೂರಾರು ವರ್ಷಗಳ ಹಿಂದೆ ಚೋಳರ ಕಾಲದಲ್ಲಿ ಪರಶುರಾಮ ಸ್ಥಾಪಿಸಿದ್ದ ದೇವಾಲಯವೊಂದು ಪತ್ತೆಯಾಗಿದೆ. ಚೋಳರ ಕಾಲದಲ್ಲಿ ಪೆನ್ನಾ ನದಿ ದಡದ ಮೇಲೆ ನಿರ್ಮಾಣವಾಗಿದ್ದ ಈ ದೇವಾಲಯವು ಗ್ರಾಮಸ್ಥರ ಶ್ರಮದಿಂದ ಬೆಳಕಿಗೆ ಬಂದಿದೆ.

ನದಿಯಲ್ಲಿ ಮುಳುಗಿದ್ದ ಪುರಾತನ ಶಿವ ದೇವಾಲಯ ಪತ್ತೆ

ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಬೆಜರ್ಲ ತಾಲೂಕಿನ ಪೆರುಮಾಲುಪಾಡು ಗ್ರಾಮದ ಬಳಿಯ ಪೆನ್ನಾ ನದಿಯ ದಡದಲ್ಲಿರುವ ನೂರಾರು ವರ್ಷಗಳ ಹಳೆಯ ನಾಗೇಶ್ವರಸ್ವಾಮಿ ದೇವಸ್ಥಾನ ಪತ್ತೆಯಾಗಿದೆ. 50 - 80 ವರ್ಷಗಳ ಹಿಂದೆ ಭಾರಿ ಮಳೆಯಿಂದಾಗಿ ಉಂಟಾದ ಪ್ರವಾಹಕ್ಕೆ ಈ ದೇವಾಲಯ ನದಿಯಲ್ಲಿ ಮುಳುಗಡೆಯಾಗಿತ್ತು. ಈ ನದಿಯ ತಟದಲ್ಲಿದ್ದ ಜನ ಸುರಕ್ಷಿತ ಸ್ಥಳಕ್ಕೆ ತೆರಳಿ ಅಲ್ಲೇ ವಾಸಿಸುತ್ತಿದ್ದರು. ಈಗ ಆ ಊರು ಪೆರುಮಾಲುಪಾಡು ಗ್ರಾಮವಾಗಿದೆ.

ಮುಳುಗಡೆಯಾಗಿದ್ದ ದೇವಸ್ಥಾನ ಮರುಸ್ಥಾಪನೆ ಮಾಡಲು ಇಲ್ಲಿನ ಗ್ರಾಮಸ್ಥರು ನಿರ್ಧರಿಸಿದ್ದರು. ದೇವಾಲಯ ಮುಳಗಡೆಯಾಗಿದ್ದ ಸ್ಥಳವನ್ನು ಗುರುತಿಸಿ, ಜೆಸಿಬಿ ಮೂಲಕ ಮರಳು ಅಗೆದು ದೇವಾಲಯವನ್ನು ಪತ್ತೆ ಹಚ್ಚಿದ್ದಾರೆ. ಬಳಿಕ ಪುರಾತತ್ವ ಇಲಾಖೆಗೆ ಈ ಮಾಹಿತಿಯನ್ನು ನೀಡಿದ್ದಾರೆ.

ಸುಮಾರು 200 ವರ್ಷಗಳ ಹಿಂದೆ ಈ ದೇವಾಲಯ ನಿರ್ಮಾಣವಾಗಿದೆಯಂತೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ಮಾಹಿತಿ ಕಲೆ ಹಾಕಿದ ನಂತರ ದೇವಾಲಯದಲ್ಲಿರುವ ಮೂರ್ತಿಯನ್ನು ತಮ್ಮ ಗ್ರಾಮದಲ್ಲಿ ಮರು ಸ್ಥಾಪನೆ ಮಾಡುವುದಾಗಿ ಗ್ರಾಮಸ್ಥರು ಹೇಳುತ್ತಿದ್ದಾರೆ. ಈ ನಾಗೇಶ್ವರಸ್ವಾಮಿ ದೇವಸ್ಥಾನ ನೋಡಲು ಜನ ಸಾಗರವೇ ಹರಿದು ಬರುತ್ತಿದ್ದು, ಕೆಲ ಮಹಿಳೆಯರು ದೇವಾಲಯಕ್ಕೆ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.

Last Updated : Jun 17, 2020, 10:48 AM IST

ABOUT THE AUTHOR

...view details