ಕರ್ನಾಟಕ

karnataka

ETV Bharat / bharat

6 ದಿನದಲ್ಲಿ ಒಂದ್​ ಬುಲೆಟ್ ಸಹ ಹಾರಿಲ್ಲ... ಗಾಳಿಸುದ್ದಿಗೆ ಜಮ್ಮು ಪೊಲೀಸರ ಸ್ಪಷ್ಟನೆ

ಶನಿವಾರ ಸಂಜೆ ಬಳಿಕ ಪರಿಸ್ಥಿತಿ ಸಹಜ ಸ್ಥಿತಿಯತ್ತ ಬರುತ್ತಿದ್ದು, ಭದ್ರತೆಯನ್ನು ಮತ್ತಷ್ಟು ಸಡಿಲಿಸಲಾಗಿದೆ. ಕಣಿವೆ ರಾಜ್ಯ ಪ್ರಸ್ತುತ ಶಾಂತವಾಗಿದೆ ಎಂದು ಜಮ್ಮು ಕಾಶ್ಮೀರದ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಹೇಳಿದ್ದಾರೆ.

By

Published : Aug 11, 2019, 10:41 AM IST

ಕಣಿವೆ ರಾಜ್ಯ

ಶ್ರೀನಗರ: ವಾರದ ಹಿಂದೆ ಕೇಂದ್ರ ಸರ್ಕಾರ ಕಾಶ್ಮೀರಕ್ಕಿದ್ದ ವಿಶೇಷ ಸಂವಿಧಾನವನ್ನು ಹಿಂಪಡೆದ ನಂತರ ಒಂದೇ ಒಂದು ಗಲಾಟೆಯೂ ನಡೆದಿಲ್ಲ ಎಂದು ಜಮ್ಮು ಕಾಶ್ಮೀರದ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಭಾರತ - ಜಪಾನ್​ ಭಾಯಿ ಭಾಯಿ: ಕಾಶ್ಮೀರದಲ್ಲಿ ಬಂಡವಾಳ ಹೂಡಲು ಸನ್ನದ್ಧ...

ಕಾಶ್ಮೀರದಲ್ಲಿ ಗಲಾಟೆಗಳು ನಡೆಯುತ್ತಿವೆ ಎಂದು ವರದಿಯಾದ ಹಿನ್ನೆಲೆಯಲ್ಲಿ ದಿಲ್ಬಾಗ್ ಸಿಂಗ್ ಈ ಸ್ಪಷ್ಟನೆ ನೀಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಗಾಳಿ ಸುದ್ದಿಗಳನ್ನು ಆಧರಿಸಿ ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದ್ದರು.

ಕಣಿವೆ ರಾಜ್ಯದಲ್ಲಿ ಈದ್​ ಹಬ್ಬಕ್ಕೆ ಸಿದ್ಧತೆ

ಶನಿವಾರ ಸಂಜೆ ಬಳಿಕ ಪರಿಸ್ಥಿತಿ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಭದ್ರತೆಯನ್ನು ಮತ್ತಷ್ಟು ಸಡಿಲಿಸಲಾಗಿದೆ. ಕಣಿವೆ ರಾಜ್ಯ ಪ್ರಸ್ತುತ ಶಾಂತವಾಗಿದೆ. ಇಲ್ಲಿ ಕಳೆದ ಆರು ದಿನಗಳಲ್ಲಿ ಯಾವುದೇ ಗಲಾಟೆಯಾಗಿಲ್ಲ ಮತ್ತು ಒಂದು ಬುಲೆಟ್ ಸಹ ಹಾರಿಲ್ಲವೆಂದು ಜಮ್ಮು ಕಾಶ್ಮೀರ ಪೊಲೀಸ್​ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಹೇಳಿದ್ದು, ಗಾಳಿಸುದ್ದಿಯನ್ನು ನಂಬಬೇಡಿ ಎಂದಿದ್ದಾರೆ.

ಭಾನುವಾರದ ಬಳಿಕ ಭದ್ರತೆಯಲ್ಲಿ ದೊಡ್ಡ ಮಟ್ಟದ ಸಡಿಲಿಕೆ ಮಾಡಲಾಗುವುದು ಎಂದಿರುವ ದಿಲ್ಬಾಗ್ ಸಿಂಗ್ ಸೋಮವಾರದಂದು ಕಣಿವೆ ರಾಜ್ಯದ ಮಂದಿ ನಿರಾತಂಕವಾಗಿ ಈದ್​-ಉಲ್-ಝುಹಾವನ್ನು ಆಚರಿಸಬಹುದು ಎಂದು ಅಭಯ ನೀಡಿದ್ದಾರೆ.

ABOUT THE AUTHOR

...view details