ನವದೆಹಲಿ:ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ವಾಪಸ್ ಪಡೆದ ಬಳಿಕ ಪಾಕಿಸ್ತಾನವು ಭಾರತದೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ಕಡಿತಗೊಳಿಸಿದೆ. ಈ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪಾಕಿಸ್ತಾನದಂತಹ ನೆರೆಯ ದೇಶ ಯಾವುದೇ ರಾಷ್ಟ್ರಕ್ಕೂ ಇರಬಾರದು' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಾಕ್ ನಂತಹ ನೆರೆಯ ದೇಶ ಯಾವ ರಾಷ್ಟ್ರಕ್ಕೂ ಬೇಡ... ರಾಜನಾಥ್ ಸಿಂಗ್ ಪಾರ್ಥನೆ
ತನ್ನ ನೆರೆಯ ರಾಷ್ಟ್ರವನ್ನು ಬದಲಾಯಿಸುವ ಅವಕಾಶ ಯಾವುದೇ ದೇಶಕ್ಕೆ ಇಲ್ಲ ಎಂಬ ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರ ಹೇಳಿಕೆಯನ್ನು ದೆಹಲಿಯಲ್ಲಿ ನಡೆದ ಸೈನ್ಯದ ಹಿರಿಯ ಅಧಿಕಾರಿಗಳ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪುನರುಚ್ಚರಿಸಿದ್ದಾರೆ.
ಸಾಂದರ್ಭಿಕ ಚಿತ್ರ
ತನ್ನ ನೆರೆಯ ರಾಷ್ಟ್ರವನ್ನು ಬದಲಾಯಿಸುವ ಅವಕಾಶ ಯಾವುದೇ ದೇಶಕ್ಕೆ ಇಲ್ಲ ಎಂಬ ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರ ಹೇಳಿಕೆಯನ್ನು ದೆಹಲಿಯಲ್ಲಿ ನಡೆದ ಸೈನ್ಯದ ಹಿರಿಯ ಅಧಿಕಾರಿಗಳ ಕಾರ್ಯಕ್ರಮದಲ್ಲಿ ರಾಜನಾಥ್ ಅವರು ಪುನರುಚ್ಚರಿಸಿದರು.
ನಮ್ಮ ಮುಖ್ಯ ಕಾಳಜಿ ನಮ್ಮ ಸುತ್ತಲಿನ ನೆರೆಹೊರೆಯವರು. ಸಮಸ್ಯೆ ಎಂದರೆ ನಾವು ನಮ್ಮ ಸ್ನೇಹಿತರನ್ನು ಬದಲಾಯಿಸಬಹುದು. ಆದರೆ, ನಮ್ಮ ನೆರೆಹೊರೆಯವರನ್ನು ಬದಲಾಯಿಸುವುದು ನಮ್ಮ ಕೈಯಲ್ಲಿಲ್ಲ. ನಮ್ಮಂತೆಯೇ ಬೇರೆ ಯಾರೂ ನೆರೆಹೊರೆಯವರನ್ನು ಪಡೆಯಬಾರದು ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.