ಕರ್ನಾಟಕ

karnataka

ETV Bharat / bharat

ಕಾಂಗ್ರೆಸ್​ ವಿರುದ್ಧ ಷಡ್ಯಂತ್ರದ ಆರೋಪ..... ಕೈ ನಾಯಕರ ವಿರುದ್ಧ ಸೀತಾರಾಮನ್​ ವಾಗ್ದಾಳಿ - ನವದೆಹಲಿ

ನೋಟ್ ಬ್ಯಾನ್​ ವೇಳೆ, ಕೆಲ ಬಿಜೆಪಿ ನಾಯಕರು 40 ರಷ್ಟು ಕಮಿಷನ್​ ಪಡೆದು ಹಣ ವರ್ಗಾವಣೆ ಮಾಡಿದ್ದಾರೆ ಎಂಬ ಸ್ಟಿಂಗ್​ ಆಪರೇಷನ್​ ವಿಡಿಯೋ ರಿಲೀಸ್ ಮಾಡಿದ ಹಿನ್ನೆಲೆಯಲ್ಲಿ ಅವರು ಸುದ್ದಿಗೋಷ್ಠಿ ನಡೆಸಿ ಈ ಎಚ್ಚರಿಕೆ ಕೊಟ್ಟಿದ್ದಾರೆ.

ಸೀತಾರಾಮನ್​

By

Published : Mar 27, 2019, 5:29 PM IST

ನವದೆಹಲಿ: ಬಿಜೆಪಿ ವಿರುದ್ಧ ಕಾಂಗ್ರೆಸ್​ ಹಾಗೂ ಕೆಲ ವೆಬ್​ಸೈಟ್​ಗಳು ಷಡ್ಯಂತ್ರ ಮಾಡುತ್ತಿವೆ. ಈ ಷಡ್ಯಂತ್ರಗಳಿಗೆ ನಾವು ಸೊಪ್ಪು ಹಾಕುವುದಿಲ್ಲ. ಸುಳ್ಳು ಸುದ್ದಿ ಹರಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ಖಡಕ್​ ಎಚ್ಚರಿಕೆ ಕೊಟ್ಟಿದ್ದಾರೆ.

ನೋಟ್ ಬ್ಯಾನ್​ ವೇಳೆ, ಕೆಲ ಬಿಜೆಪಿ ನಾಯಕರು 40 ರಷ್ಟು ಕಮಿಷನ್​ ಪಡೆದು ಹಣ ವರ್ಗಾವಣೆ ಮಾಡಿದ್ದಾರೆ ಎಂಬ ಸ್ಟಿಂಗ್​ ಆಪರೇಷನ್​ ವಿಡಿಯೋ ರಿಲೀಸ್ ಮಾಡಿದ ಹಿನ್ನೆಲೆಯಲ್ಲಿ ಅವರು ಸುದ್ದಿಗೋಷ್ಠಿ ನಡೆಸಿ ಈ ಎಚ್ಚರಿಕೆ ಕೊಟ್ಟಿದ್ದಾರೆ.



ಏನಿದು ವಿವಾದ:

ಖಾಸಗಿ ವೆಬ್​ಸೈಟ್​ ವೊಂದು ಬಿಜೆಪಿ ನಾಯಕರು ಹಳೆನೋಟುಗಳನ್ನ 40 ರಷ್ಟು ಕಮಿಷನ್​ ಮೇಲೆ ಎಕ್ಸೆಂಜ್​ ಮಾಡಿಕೊಳ್ಳುತ್ತಿರುವ ವಿಡಿಯೋವೊಂದನ್ನ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ರಿಲೀಸ್ ಮಾಡಿದ್ದವು.

ನೋಟು ರದ್ಧತಿ ವೇಳೆ ಬಿಜೆಪಿ ನಾಯಕರು ಇಂತಹ ಕಮಿಷನ್​ ದಂಧೆ ನಡೆಸಿದ್ದರು ಎಂದು ಆರೋಪಿಸಿತ್ತು. ಈ ಬಗ್ಗೆ ಖಾಸಗಿ ವೆಬ್​ ಸೈಟ್​ ವೊಂದು ಈ ಸ್ಟಿಂಗ್ ಆಪರೇಷನ್​ ವಿಡಿಯೋ ಪ್ರಕಟಿಸಿತ್ತು.

ಈ ಬಗ್ಗೆ ಇಂದು ಸುದ್ದಿಗೋಷ್ಠಿ ನಡೆಸಿದ ಸಚಿವೆ ನಿರ್ಮಲಾ ಸೀತಾರಾಮನ್​, ಈ ವಿಡಿಯೋಗೆ ಯಾವುದೇ ಮಾನ್ಯತೆ ಆಗಲಿ, ಇದರಲ್ಲಿ ಸ್ಪಷ್ಟತೆ ಆಗಲಿ ಇಲ್ಲ. ಚುನಾವಣೆ ಸಂದರ್ಭದಲ್ಲಿ ಪಕ್ಷದ ಇಮೇಜ್​ಗೆ ಡ್ಯಾಮೇಜ್​ ಮಾಡುವ ಉದ್ದೇಶದಿಂದಲೇ ಇಂತಹ ವಿಡಿಯೋಗಳನ್ನ ಪ್ರಕಟಿಸಲಾಗುತ್ತಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ಆರೋಪಿಸಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು, ನಾವು ಕಾನೂನು ಸಲಹೆ ತೆಗೆದುಕೊಂಡು ಕ್ರಮಕ್ಕೆ ಮುಂದಾಗಲಿದ್ದೇವೆ. ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳದೇ ಬಿಡುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್​ನಿಂದ ಬಿಜೆಪಿ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಕಾಂಗ್ರೆಸ್​​ ನಿರಂತರವಾಗಿ ಬಿಜೆಪಿ ವಿರುದ್ಧ ಸುಳ್ಳು ಆರೋಪಗಳನ್ನ ಮಾಡುತ್ತಿದೆ. ಸುಳ್ಳನ್ನು ಹರಡಲು ಹಲವು ಸಂಸ್ಥೆಗಳನ್ನ ಹುಟ್ಟುಹಾಕಿದೆ ಎಂದು ಕಿಡಿ ಕಾರಿದರು.

ವೈಯಕ್ತಿಕವಾಗಿ ಹಾಗೂ ಹಲವರು ಸೇರಿ ಮಾಡುತ್ತಿರುವ ಕಾನ್ಫರಸಿಗೆ ಬಿಜೆಪಿ ಸೊಪ್ಪು ಹಾಕುವುದಿಲ್ಲ. ಸುಳ್ಳು ಸ್ಟ್ರಿಂಗ್ ಆಪರೇಷನ್​ಗಳನ್ನ ಮಾಡಿ ಪಕ್ಷದ ಮನೋಬಲ ಕಡಿಮೆ ಮಾಡಲು ಹವಣಿಸುತ್ತಿದೆ. ಈ ಬಗ್ಗೆ ನಾವು ಸುಮ್ಮನೆ ಕೂಡುವುದಿಲ್ಲ. ಈ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತದೆ. ಕೆಲ ವೆಬ್​ ಸೈಟ್​ಗಳು ನಿರಂತರ ಸುಳ್ಳು ಆರೋಪಗಳನ್ನು ಮಾಡುತ್ತಿವೆ. ಅಂತಹವರ ವಿರುದ್ಧ ಕಾನೂನಿನ ಪ್ರಕಾರವೇ ಕ್ರಮಕೈಗೊಳ್ಳುತ್ತೇವೆ ಎಂದು ವಾರ್ನಿಂಗ್​ ಕೊಟ್ಟಿದ್ದಾರೆ.

ABOUT THE AUTHOR

...view details