ಮಾಧೆಪುರ (ಬಿಹಾರ): ಭಾರತೀಯ ಜನತಾ ಪಕ್ಷದ ಶಾಸಕ ಮತ್ತು ಸುಶಾಂತ್ ಸಿಂಗ್ ರಜಪೂತ್ ಅವರ ಸೋದರ ಸಂಬಂಧಿ ನೀರಜ್ ಕುಮಾರ್ ಬಬ್ಲು ಅವರು ಮಹಾರಾಷ್ಟ್ರ ಪೊಲೀಸರು ಮತ್ತು ಅಲ್ಲಿನ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಪ್ರಕರಣವನ್ನು ಮತ್ತಷ್ಟು ಸಂಕೀರ್ಣಗೊಳಿಸಲು ಮಹಾರಾಷ್ಟ್ರ ಪೊಲೀಸರು ಮತ್ತು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಸುಶಾಂತ್ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸಿರುವುದು ಸ್ವಾಗತಾರ್ಹ ಎಂದ ನೀರಜ್ ಕುಮಾರ್ ಮಾಧೇಪುರ ಜಿಲ್ಲೆಯ ಆಲಂನಗರ ಬ್ಲಾಕ್ನಲ್ಲಿ ಹೊಸದಾಗಿ ನಿರ್ಮಿಸಲಾದ ಅಸೆಂಬ್ಲಿ ಕಟ್ಟಡ ಉದ್ಘಾಟನೆಗೆ ಆಗಮಿಸಿದ ಸುಶಾಂತ್ ಸಿಂಗ್ ರಜಪೂತ್ ಸೋದರ ಸಂಬಂಧಿ ಹಾಗೂ ಬಿಜೆಪಿ ಶಾಸಕ ನೀರಜ್ ಕುಮಾರ್ ಬಬ್ಲು, ಸಿಬಿಐ ವಿಚಾರಣೆ ನಡೆಸಲು ಬಿಹಾರ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಎಂದು ಹೇಳಿದರು.
ಸಿಬಿಐ ವಿಚಾರಣೆ ಇಲ್ಲದಿದ್ದರೆ ನ್ಯಾಯ ಸಿಗುವುದಿಲ್ಲ. ಸಿಬಿಐ ತನಿಖೆಯ ಮೇಲೆ ಭರವಸೆಯಿದೆ. ಈ ವಿಷಯದ ಕುರಿತು ನ್ಯಾಯಯುತ ತನಿಖೆ ನಡೆಯಲಿದೆ ಎಂಬ ವಿಶ್ವಾಸವಿದೆ ಎಂದರು.
ಶಿವಸೇನಾ ಮುಖಂಡ ಸಂಜಯ್ ರಾವತ್, ಸುಶಾಂತ್ ಸಿಂಗ್ ರಜಪೂತ್ ತನ್ನ ತಂದೆಯೊಂದಿಗೆ ಉತ್ತಮ ಸಂಬಂಧ ಹೊಂದಿರಲಿಲ್ಲ ಎಂಬ ಹೆಳಿಕೆಯನ್ನು ನೀರಜ್ ಕುಮಾರ್ ಖಂಡಿಸಿದ್ದಾರೆ. ಇದು ಗೊಂದಲಕಾರಿ ಹಾಗೂ ಅಸಭ್ಯ ಹೇಳಿಕೆಯಾಗಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.