ಕಳೆದ ಮೂರು ತಿಂಗಳ ಹಿಂದೆ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರಿಗೆ ವೈದ್ಯರು ಆಪರೇಷನ್ ಮಾಡಿದ್ದರು. ಈ ವೇಳೆ, ಮಹಿಳೆಯ ಹೊಟ್ಟೆಯಲ್ಲಿಯೇ ಕತ್ತರಿ ಬಿಟ್ಟು ಹೊಲಿಗೆ ಹಾಕಿದ್ದರು.
ಆಪರೇಷನ್ ವೇಳೆ ಹೊಟ್ಟೆಯಲ್ಲಿ ಕತ್ತರಿ ಬಿಟ್ಟ ವೈದ್ಯರು... 3 ತಿಂಗಳ ಬಳಿಕ ಬೆಳಕಿಗೆ ಬಂತು ಅವಾಂತರ!!
ಹೈದರಾಬಾದ್: ಇಲ್ಲಿನ ನಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯ ಮತ್ತೊಮ್ಮೆ ಸಾಬೀತಾಗಿದೆ. ಮಹಿಳೆಗೆ ಆಪರೇಷನ್ ಮಾಡುವ ವೇಳೆ ವೈದ್ಯರು ಕತ್ತರಿಯನ್ನು ಹೊಟ್ಟೆಯಲ್ಲೇ ಬಿಟ್ಟು ಹೊಲಿಗೆ ಹಾಕಿದ್ದಾರೆ. ಈ ಘಟನೆ ಮೂರು ತಿಂಗಳ ಬಳಿಕ ಬೆಳಕಿಗೆ ಬಂದಿದೆ.
ಹೊಟ್ಟೆ ನೋವು ಸರಿಯಾಗಲೆಂದೇ ಡಾಕ್ಟರ್ ಆಪರೇಷನ್ ಮಾಡಿದ್ದರು. ಆದರೆ, ಹೊಟ್ಟೆಯಲ್ಲಿಯೇ ಕತ್ತರಿ ಬಿಟ್ಟಿದ್ದರಿಂದ ಮಹಿಳೆಗೆ ಹೊಟ್ಟೆ ನೋವು ದಿನ ದಿನಕ್ಕೂ ಹೆಚ್ಚಾಗುತ್ತಲೇ ಹೋಗಿತ್ತೇ ಹೊರತು ಕಡಿಮೆ ಆಗಿರಲಿಲ್ಲ. ಇದರಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ ಮಹಿಳೆ ಮತ್ತೊಬ್ಬ ವೈದ್ಯರ ಬಳಿ ಚಿಕಿತ್ಸೆಗೆ ತೆರಳಿದ್ದರು. ಈ ವೇಳೆ ಹೊಟ್ಟೆ ನೋವಿಗೆ ಕಾರಣ ಏನೆಂದು ಪತ್ತೆ ಹಚ್ಚಲು ವೈದ್ಯರು ಸ್ಕ್ಯಾನಿಂಗ್ ಮಾಡಿದಾಗ ನಿಮ್ಸ್ ವೈದ್ಯರ ನಿರ್ಲಕ್ಷ್ಯ ಹೊರ ಬಿದ್ದಿದೆ. ಎಕ್ಸ್ರೇ ತೆಗೆದಾಗ ಮಹಿಳೆಯ ಹೊಟ್ಟೆಯಲ್ಲಿ ಕತ್ತರಿ ಇರುವುದು ಕಂಡು ಬಂದಿದೆ.
ಇದನ್ನು ತಿಳಿದ ಮಹಿಳೆ ಮತ್ತು ಆಕೆಯ ಬಂಧುಗಳು ಅಚ್ಚರಿಗೊಂಡಿದ್ದಾರೆ. ಆಪರೇಷನ್ ಮಾಡಿದರೂ ಹೊಟ್ಟೆ ನೋವು ಉಲ್ಬಣವಾಗಲು ಇದೇ ಕಾರಣ ಎಂಬುದು ಗೊತ್ತಾಗಿ ಹೌಹಾರಿದ್ದಾರೆ ಕೂಡಾ. ಬಳಿಕ ಆಪರೇಷನ್ ವೇಳೆ ನಿರ್ಲಕ್ಷ್ಯ ವಹಿಸಿದ ವೈದ್ಯರ ವಿರುದ್ಧ ಮಹಿಳೆಯ ಬಂಧುಗಳು ಪ್ರತಿಭಟನೆಯನ್ನೂ ನಡೆಸಿದ್ದಾರೆ.