ಕರ್ನಾಟಕ

karnataka

ETV Bharat / bharat

ಪುಲ್ವಾಮಾ ದಾಳಿ ಆರೋಪಿಯ ಆಸ್ತಿ ಮುಟ್ಟುಗೋಲು ಹಾಕಿದ ಎನ್‌ಐಎ - ರಾಷ್ಟ್ರೀಯ ತನಿಖಾ ದಳ (ಎನ್‌ಐಎ)

ಪುಲ್ವಾಮಾ ದಾಳಿಯ ಆರೋಪಿ ಇರ್ಷಾದ್ ಅಹ್ಮದ್ ರೇಶಿಯ ಮನೆಯನ್ನು ಮುಟ್ಟುಗೋಲು ಹಾಕಿರುವ ರಾಷ್ಟ್ರೀಯ ತನಿಖಾ ದಳ, ಈ ಆಸ್ತಿ ಭಯೋತ್ಪಾದನೆಯ ಆದಾಯವನ್ನು ಪ್ರತಿನಿಧಿಸುತ್ತದೆ ಮತ್ತು ನಿಷೇಧಿತ ಸಂಘಟನೆಯಾದ ಜೈಶ್-ಎ-ಮೊಹಮ್ಮದ್​​ನ ಭಯೋತ್ಪಾದಕ ಚಟುವಟಿಕೆಗಳಿಗೆ ಇದನ್ನು ಬಳಸಿಕೊಳ್ಳಲಾಗಿದೆ ಎಂದು ತಿಳಿಸಿದೆ.

NIA
ಎನ್‌ಐಎ

By

Published : Sep 19, 2020, 5:58 PM IST

ಶ್ರೀನಗರ:ಪುಲ್ವಾಮಾ ದಾಳಿಯ ಆರೋಪಿ ಇರ್ಷಾದ್ ಅಹ್ಮದ್ ರೇಶಿಯ ಮನೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) 'ಭಯೋತ್ಪಾದನೆಯ ಆದಾಯ' ಎಂದು ಘೋಷಿಸಿ ಮುಟ್ಟುಗೋಲು ಹಾಕಿದೆ.

1967 ರ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ ಸೆಕ್ಷನ್ 25 ರ ಅಡಿಯಲ್ಲಿ ಇರ್ಷಾದ್​ರ ಮನೆಯನ್ನು ಮುಟ್ಟುಗೋಲು ಹಾಕಲಾಗಿದೆ. ಈ ಆಸ್ತಿಯ ವರ್ಗಾವಣೆ, ಮಾರಾಟ ಸೇರಿದಂತೆ ಯಾವುದೇ ವ್ಯವಹಾರ ಮಾಡದಂತೆ ಸಂಬಂಧಪಟ್ಟವರಿಗೆ ನಿರ್ದೇಶಿಸಲಾಗಿದೆ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದ ರತ್ನಿಪೋರಾ ಪ್ರದೇಶದಲ್ಲಿರುವ ಇರ್ಷಾದ್ ಮನೆಯ ಗೋಡೆ ಮೇಲೆ, "ಈ ಆಸ್ತಿ ಭಯೋತ್ಪಾದನೆಯ ಆದಾಯವನ್ನು ಪ್ರತಿನಿಧಿಸುತ್ತದೆ ಮತ್ತು ನಿಷೇಧಿತ ಸಂಘಟನೆಯಾದ ಜೈಶ್-ಎ-ಮೊಹಮ್ಮದ್​​ನ ಭಯೋತ್ಪಾದಕ ಚಟುವಟಿಕೆಗಳಿಗೆ ಇದನ್ನು ಬಳಸಿಕೊಳ್ಳಲಾಗಿದೆ" ಎಂದು ಬರೆದಿರುವ ಆದೇಶ ಪ್ರತಿಯನ್ನು ಅಂಟಿಸಲಾಗಿದೆ.

ಇರ್ಷಾದ್ ಮನೆಯ ಗೋಡೆ ಮೇಲೆ ಅಂಟಿಸಿದ ಆದೇಶ ಪ್ರತಿ

ಫೆಬ್ರವರಿ 14, 2019 ರಂದು ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭದ್ರತಾ ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದ ಬೆಂಗಾವಲು ವಾಹನಗಳನ್ನು ಪುಲ್ವಾಮಾ ಜಿಲ್ಲೆಯ ಅವಂತಿಪೋರಾ ಬಳಿ ವಾಹನವೊಂದರ ಮೂಲಕ ಆತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿತ್ತು. ಘಟನೆಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ 40 ಸಿಬ್ಬಂದಿ ಹುತಾತ್ಮರಾಗಿದ್ದರು. ಪ್ರಕರಣ ಸಂಬಂಧ 2019 ರ ಏಪ್ರಿಲ್ 14 ರಂದು ಆರೋಪಿ ಇರ್ಷಾದ್ ಅಹ್ಮದ್ ರೇಶಿಯನ್ನು ಎನ್ಐಎ ಬಂಧಿಸಿತ್ತು.

ABOUT THE AUTHOR

...view details