ಕರ್ನಾಟಕ

karnataka

ETV Bharat / bharat

ಜೇಮ್ಸ್​​ಬಾಂಡ್​ ಖ್ಯಾತಿಯ ದೋವಲ್​ ಕಣಿವೆಯಲ್ಲಿ ಓಡಾಟ.... ಸ್ಥಳೀಯರೊಂದಿಗೆ ಊಟದ ಜತೆ ಚರ್ಚೆ!

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್​ 370 ರದ್ದು ಆಗಿದ್ದು, ಇದೀಗ ಕಣಿವೆ ನಾಡಿನ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಖುದ್ದಾಗಿ ರಾಷ್ಡ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್​ ಭೇಟಿ ನೀಡಿದ್ದಾರೆ.

ಅಜಿತ್​ ದೋವಲ್​​/ Ajit Doval

By

Published : Aug 7, 2019, 6:04 PM IST

ಶ್ರೀನಗರ: ಕಣಿವೆ ನಾಡು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್​​ 370 ರದ್ದುಗೊಂಡಿದೆ. ಈಗಾಗಲೇ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಸೇನಾ ತುಕಡಿ ರವಾನೆ ಮಾಡಲಾಗಿದ್ದು, ಇದೀಗ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್​​ ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ.

ಅಜಿತ್​ ದೋವಲ್​​/ Ajit Doval

ಅಲ್ಲಿನ ಸದ್ಯದ ಸ್ಥಿತಿಗತಿ ಬಗ್ಗೆ ಖುದ್ದಾಗಿ ಪರಿಶೀಲನೆ ನಡೆಸಿ, ದೋವಲ್​ ಕೇಂದ್ರಕ್ಕೆ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಶೋಪಿಯಾನ್​ ಪ್ರದೇಶದಲ್ಲಿ ಸ್ಥಳೀಯರೊಂದಿಗೆ ಮಾತನಾಡಿರುವ ದೋವಲ್​ ಆರ್ಟಿಕಲ್​​ 370 ರದ್ದತಿಗೆ ಯಾವ ರೀತಿಯಾಗಿ ಸ್ಪಂದಿಸಿದ್ದಾರೆ ಎಂಬುದು ಸೇರಿ ಪ್ರಮುಖ ಮಾಹಿತಿ ಪಡೆದುಕೊಂಡಿದ್ದಾರೆ. ಇದೇ ವೇಳೆ ಅವರೊಂದಿಗೆ ದೋವಲ್​ ಊಟ ಸಹ ಮಾಡಿ ಗಮನ ಸೆಳೆದಿದ್ದಾರೆ. ಇದಾದ ಬಳಿಕ ಸ್ಥಳೀಯ ಪೊಲೀಸರೊಂದಿಗೂ ಅವರು ಚರ್ಚೆ ನಡೆಸಿದರು.

ಇನ್ನು ಭಾರತೀಯ ಯೋಧರೊಂದಿಗೂ ದೋವಲ್​ ಚರ್ಚೆ ನಡೆಸಿ, ಕೆಲ ಮಹತ್ವದ ವಿಷಯ ಪಡೆದುಕೊಂಡಿದ್ದಾಗಿ ತಿಳಿದು ಬಂದಿದೆ. ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ 370 ನೇ ವಿಧಿ ರದ್ಧತಿ ಆಗುತ್ತಿದ್ದಂತೆ ಜಮ್ಮು ಮತ್ತು ಕಾಶ್ಮೀರ ಪುನರ್ ವಿಂಗಡಣೆ, ಅಧಿಕಾರ ಮತ್ತು ಹೊಣೆಗಾರಿಕೆಗಳ ವರ್ಗಾವಣೆಗಳಿಗೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕಿದ್ದಾರೆ.

ABOUT THE AUTHOR

...view details