ಇಂದು ರಾಷ್ಟ್ರೀಯ ಮಾದಕವಸ್ತು ವ್ಯಸನ ವಿರೋಧಿ ದಿನ: ಭಾರತದಲ್ಲಿ ಹೆಚ್ಚಾಗುತ್ತಿದ್ದಾರೆ ವ್ಯಸನಿಗಳು!
ಭಾರತವನ್ನು ಮಾದಕವಸ್ತುಗಳಿಂದ ಮುಕ್ತಗೊಳಿಸಲು ಮತ್ತು ಕಾಪಾಡುವ ಉದ್ದೇಶದೊಂದಿಗೆ ಅಕ್ಟೋಬರ್ 2ರಂದು ರಾಷ್ಟ್ರೀಯ ಮಾದಕವಸ್ತು ವ್ಯಸನ ವಿರೋಧಿ ದಿನ ಆಚರಿಸಲಾಗುತ್ತದೆ. ಸರ್ಕಾರ ಮಾದಕ ವ್ಯಸನಿದಿಂದ ದೇಶವನ್ನು ರಕ್ಷಿಸಲು ಹಲವಾರು ಕ್ರಮ ಕೈಗೊಂಡಿದೆ. ಸೂಕ್ತ ಸಹಾರ ದೊರೆತಲ್ಲಿ ವ್ಯಸನಿಗಳನ್ನು ಡ್ರಗ್ಸ್ ಗಿಳಿನಿಂದ ದೂರಗೊಳಿಸಬಹುದಾಗಿದೆ.
National Anti-Drug addiction day
By
Published : Oct 2, 2020, 6:01 AM IST
ಹೈದರಾಬಾದ್:ಪ್ರತಿ ವರ್ಷ ಅಕ್ಟೋಬರ್ 2ರಂದು ರಾಷ್ಟ್ರೀಯ ಮಾದಕವಸ್ತು ವ್ಯಸನ ವಿರೋಧಿ ದಿನವನ್ನು ಆಚರಿಸಲಾಗುತ್ತದೆ. ಭಾರತವನ್ನು ಮಾದಕವಸ್ತುಗಳಿಂದ ಮುಕ್ತಗೊಳಿಸುವುದು ಮತ್ತು ಕಾಪಾಡುವುದು ಈ ದಿನದ ಉದ್ದೇಶವಾಗಿದೆ.
ಮಾದಕ ವ್ಯಸನವು ದೀರ್ಘಕಾಲದ ಮೆದುಳಿನ ಕಾಯಿಲೆಗಳಿಗೆ ಕಾರಣವಾಗುತ್ತದೆ. ಡ್ರಗ್ಸ್ ನಮ್ಮ ಸಮಾಜದ ದೊಡ್ಡ ಶತ್ರವಾಗಿದ್ದು, ಇದು ವ್ಯಕ್ತಿಯ ಮೇಲೆ ಮಾತ್ರವಲ್ಲ ಸಮಾಜದ ಮೇಲೂ ಪರಿಣಾಮ ಬೀರುತ್ತದೆ. ಇದು ತರ್ಕಬದ್ಧ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯದ ನಷ್ಟಕ್ಕೆ ಕಾರಣವಾಗುತ್ತದೆ.
ಹೆಚ್ಚಿನ ಜನರು ಪ್ರಯೋಗ, ವಿನೋದ ಮತ್ತು ಕುತೂಹಲಕ್ಕಾಗಿ ಡ್ರಗ್ಸ್ ತೆಗೆದುಕೊಳ್ಳಲು ಪ್ರಾರಂಭಿಸುತ್ತಾರೆ ಮತ್ತು ಕೆಲವರು ಒತ್ತಡದಿಂದಾಗಿ ಡ್ರಗ್ಸ್ಗೆ ಬಲಿಯಾಗುತ್ತಾರೆ.
ಡ್ರಗ್ಸ್ ಸೇವನೆಯ ದುಷ್ಪರಿಣಾಮಗಳು:
ಆರೋಗ್ಯ ಸಮಸ್ಯೆಗಳು
ನೆನಪಿನ ಅಸ್ವಸ್ಥತೆಗಳು
ಸಮತೋಲನ ಮತ್ತು ನಡೆಯಲು ತೊಂದರೆ
ಆತಂಕ, ಖಿನ್ನತೆ ಮತ್ತು ನಿದ್ರೆಯ ತೊಂದರೆ
ಹಠಾತ್ ತೂಕ ನಷ್ಟ ಅಥವಾ ತೂಕ ಹೆಚ್ಚಾಗುವುದು.
ಪಿತ್ತಜನಕಾಂಗದ ಕಾಯಿಲೆ, ಅಪಸ್ಮಾರ ಮತ್ತು ಕ್ಯಾನ್ಸರ್ ಅಪಾಯ
ಮಧುಮೇಹ ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಭೀತಿ
ಹೃದಯ ಸಂಬಂಧಿ ರೋಗ
ರೋಗನಿರೋಧಕ ಶಕ್ತಿ ಕಡಿಮೆಯಾಗುವುದು
ಸಂತಾನೋತ್ಪತ್ತಿ ಸಮಸ್ಯೆಗಳು
ವರ್ತನೆ ಮತ್ತು ಮಾನಸಿಕ ಬದಲಾವಣೆಗಳು
ಕೆಲಸದ ಸ್ಥಳದಲ್ಲಿ ಕಾರ್ಯಕ್ಷಮತೆಯ ಕುಸಿತ
ಆಸಕ್ತಿಯ ನಷ್ಟ ಮತ್ತು ಅನುಮಾನಾಸ್ಪದ ನಡವಳಿಕೆಗಳು
ಹಿಂಸಾತ್ಮಕ ವರ್ತನೆ
ವ್ಯಕ್ತಿತ್ವದಲ್ಲಿ ಬದಲಾವಣೆ
ಸಾಮಾಜಿಕ ಪರಿಣಾಮಗಳು: ಮಾದಕ ವ್ಯಸನಿಗಳು ತಮ್ಮ ಸಾಮಾಜಿಕ ಮತ್ತು ವೈಯಕ್ತಿಕ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾರೆ. ಅವರು ಸಾಮಾಜಿಕ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆಯಿದೆ.
ಆರ್ಥಿಕ ನಷ್ಟ: ಮಾದಕ ವ್ಯಸನಿಗಳು ತಮ್ಮ ಬೇಡಿಕೆ ಪೂರೈಸಲು ಹಣಕ್ಕಾಗಿ ಬೇಡಿಕೊಳ್ಳುತ್ತಾರೆ, ಸಾಲ ಪಡೆಯುತ್ತಾರೆ ಅಥವಾ ಹಣವನ್ನು ಕದಿಯುತ್ತಾರೆ.
ಭಾರತದಲ್ಲಿ ಮಾದಕ ವ್ಯಸನ:
ಕಚ್ಚಾ ಅಫೀಮು, ಪೋಪಿ ಹಸ್ಕ್ ಮತ್ತು ಹೆರಾಯಿನ್ ಎಂಬ ಮೂರು ಅಫೀಮು ಉತ್ಪನ್ನಗಳು ಸಾಮಾನ್ಯವಾಗಿ ದುರುಪಯೋಗಪಡಿಸಿಕೊಳ್ಳುವ ಡ್ರಗ್ ಆಗಿದೆ.ಹೆಚ್ಚಿನ ಹೆರಾಯಿನ್ ಅಫ್ಘಾನಿಸ್ತಾನದಿಂದ ಪಾಕಿಸ್ತಾನದ ಮೂಲಕ ಭಾರತಕ್ಕೆ ಬರುತ್ತದೆ.
ಭಾರತದಲ್ಲಿ ಡ್ರಗ್ಸ್ ಬಳಕೆ
ರಾಷ್ಟ್ರೀಯವಾಗಿ ಅಂದಾಜು 8.5 ಲಕ್ಷ ಜನರು ಡ್ರಗ್ಸ್ ಚುಚ್ಚಿಕೊಳ್ಳುತ್ತಾರೆ. 10-75 ವರ್ಷ ವಯಸ್ಸಿನ (3.1 ಕೋಟಿ ವ್ಯಕ್ತಿಗಳು) ಸುಮಾರು 2.8% ರಷ್ಟು ಭಾರತೀಯರು ಗಾಂಜಾ ಉತ್ಪನ್ನದ ಪ್ರಸ್ತುತ ಬಳಕೆದಾರರು. ಚರಸ್ / ಗಾಂಜಾ (1.2%)ಗೆ ಹೋಲಿಸಿದರೆ ಹೆಚ್ಚಿನ ಸಂಖ್ಯೆಯ ಜನರು ಭಾಂಗ್ (2%) ಬಳಸುತ್ತಾರೆ.
ಯಾವುದೇ ಒಪಿಯಾಡ್ನ ಪ್ರಸ್ತುತ ಬಳಕೆಯ ಹರಡುವಿಕೆಯು 2.06% ಆಗಿದೆ. ಹೆರಾಯಿನ್ ಭಾರತದಲ್ಲಿ ಸಾಮಾನ್ಯವಾಗಿ ಬಳಸುವ ಒಪಿಯಾಡ್ (1.14%). ಇದರ ನಂತರ ಔಷಧೀಯ ಒಪಿಯಾಡ್‌ಗಳು (0.96%) ಮತ್ತು ಅಫೀಮು (0.52%) ಬಳಸಲಾಗುತ್ತಿದೆ.
ರಾಷ್ಟ್ರಮಟ್ಟದಲ್ಲಿ ಸುಮಾರು 1.08% ಭಾರತೀಯರು (ಅಂದಾಜು 1.18 ಕೋಟಿ ಜನರು) ನಿದ್ರಾಜನಕಗಳ ಪ್ರಸ್ತುತ ಬಳಕೆದಾರರು. ಪ್ರಸ್ತುತ ನಿದ್ರಾಜನಕ ಬಳಕೆದಾರರು ಅತಿ ಹೆಚ್ಚಾಗಿ ಇರುವ ರಾಜ್ಯಗಳು ಸಿಕ್ಕಿಂ (8.6%), ನಾಗಾಲ್ಯಾಂಡ್ (5.4%), ಮಣಿಪುರ (4.3%) ಮತ್ತು ಮಿಜೋರಾಂ (3.8%).
ಉತ್ತರ ಪ್ರದೇಶ (19.6 ಲಕ್ಷ), ಮಹಾರಾಷ್ಟ್ರ (11.6 ಲಕ್ಷ), ಪಂಜಾಬ್ (10.9 ಲಕ್ಷ), ಆಂಧ್ರಪ್ರದೇಶ (7.4 ಲಕ್ಷ) ಮತ್ತು ಗುಜರಾತ್ (7 ಲಕ್ಷ) ಈ ಐದು ರಾಜ್ಯಗಳಲ್ಲಿ ಬಳಕೆದಾರರ ಸಂಖ್ಯೆ ಹೆಚ್ಚಿದೆ.
ಒಟ್ಟಾರೆಯಾಗಿ ರಾಷ್ಟ್ರಮಟ್ಟದಲ್ಲಿ 10-75 ವರ್ಷ ವಯಸ್ಸಿನ ಭಾರತೀಯರಲ್ಲಿ 0.70% ರಷ್ಟು ಜನರು ಇನ್ಹೇಲ್ ಡ್ರಗ್ಸ್ ಉತ್ಪನ್ನಗಳ ಪ್ರಸ್ತುತ ಬಳಕೆದಾರರಾಗಿದ್ದಾರೆ. ವಯಸ್ಕ ಜನಸಂಖ್ಯೆಯಲ್ಲಿ ಹರಡುವಿಕೆಯು 0.58% ಆಗಿದ್ದರೆ, ಮಕ್ಕಳು ಮತ್ತು ಹದಿಹರೆಯದವರಲ್ಲಿ ಹರಡುವಿಕೆ 1.17% ಆಗಿದೆ.
ಭಾರತದಲ್ಲಿ ಡ್ರಗ್ಸ್ ಬಳಕೆ
ಅಕ್ರಮ ಡ್ರಗ್ ಬಳಕೆ:
ಜಾಗತಿಕವಾಗಿ, ಏಷ್ಯಾ ಖಂಡದಲ್ಲಿ ಮತ್ತು ಭಾರತದಲ್ಲಿ ಡ್ರಗ್ ಬಳಕೆಯ ಅಂದಾಜು ಹೋಲಿಕೆ (%ದಲ್ಲಿ):
ಡ್ರಗ್ ವಿಭಾಗ
ವಿಶ್ವ (15-64 ವರ್ಷಗಳು)
ಏಷ್ಯಾ (15-64 ವರ್ಷಗಳು)
ಭಾರತ (10-75 ವರ್ಷಗಳು)
ಗಾಂಜಾ
3.9
1.9
1.2
ಒಪಿಯಾಡ್‌ಗಳು
0.70
0.46
2.06
ಕೊಕೇನ್
0.37
0.03
0.11
ಎಟಿಎಸ್
0.70
0.59
0.18
ಇನ್ಹಲಂಟ್ ಯೂಸ್ ಡಿಸಾರ್ಡರ್‌ಗಳ ಹರಡುವಿಕೆ (%ದಲ್ಲಿ):
ಬಳಕೆಯ ಮಾದರಿ
ವಯಸ್ಕರು (18 ವರ್ಷ ಮೇಲ್ಪಟ್ಟವರು)
ಮಕ್ಕಳು (10-17 ವರ್ಷ)
ಹಾನಿಕಾರಕ ಬಳಕೆ
0.13
0.12
ಅವಲಂಬನೆ
0.07
0.09
ಮಿತ ಬಳಕೆ
0.20
0.21
ಕಾಯಿದೆಗಳು:
ಎನ್‌ಡಿಪಿಎಸ್ ತಿದ್ದುಪಡಿಗಳು, 1989:
ಮಾದಕವಸ್ತು ಕಳ್ಳಸಾಗಣೆ ಮತ್ತು ದುರುಪಯೋಗವನ್ನು ಎದುರಿಸಲು ಕ್ಯಾಬಿನೆಟ್ ಉಪಸಮಿತಿಯು ಕಾನೂನನ್ನು ಹೆಚ್ಚು ಕಠಿಣಗೊಳಿಸಬೇಕೆಂದು ಶಿಫಾರಸು ಮಾಡಿದ ನಂತರ 1989ರಲ್ಲಿ ಎನ್‌ಡಿಪಿಎಸ್ ಕಾಯ್ದೆಯು ಮೊದಲ ತಿದ್ದುಪಡಿಗಳಿಗೆ ಒಳಗಾಯಿತು.
ಎನ್‌ಡಿಪಿಎಸ್ ತಿದ್ದುಪಡಿಗಳು, 2001:
ಡ್ರಗ್ಸ್ ಪ್ರಮಾಣ ಅಂದರೆ "ಸಣ್ಣ", "ವಾಣಿಜ್ಯ" ಅಥವಾ "ಮಧ್ಯಂತರ" ಆಧಾರದ ಮೇಲೆ ದರ್ಜೆಯ ಶಿಕ್ಷೆಗೆ 2001ರಲ್ಲಿ ತಿದ್ದುಪಡಿಗಳನ್ನು ಅಂತಿಮವಾಗಿ ಅಂಗೀಕರಿಸಲಾಯಿತು. 19 ಅಕ್ಟೋಬರ್ 2001ರ ಅಧಿಸೂಚನೆಯ ಮೂಲಕ ಕೇಂದ್ರ ಸರ್ಕಾರವು ಮಿತಿಗಳನ್ನು ನಿರ್ದಿಷ್ಟಪಡಿಸಿದೆ.
ಎನ್‌ಡಿಪಿಎಸ್ ತಿದ್ದುಪಡಿಗಳು, 2014:
2014ರ ಆರಂಭದಲ್ಲಿ, ಎನ್‌ಡಿಪಿಎಸ್ ಕಾಯ್ದೆಯನ್ನು ಮೂರನೇ ಬಾರಿಗೆ ತಿದ್ದುಪಡಿ ಮಾಡಲಾಯಿತು ಮತ್ತು ಹೊಸ ನಿಬಂಧನೆಗಳು 1 ಮೇ 2014ರಿಂದ ಜಾರಿಗೆ ಬಂದವು. ಸೆಕ್ಷನ್ 31 ಎ ಅಡಿಯಲ್ಲಿ ನಿರ್ದಿಷ್ಟ ಪ್ರಮಾಣದ ಡ್ರಗ್ಸ ಒಳಗೊಂಡ ನಂತರದ ಅಪರಾಧಕ್ಕೆ ಕಠಿಣ ಶಿಕ್ಷೆ ವಿಧಿಸಲಾಯಿತು. ಅಗತ್ಯ ಮಾದಕವಸ್ತುಗಳ ಹೊಸ ವರ್ಗವನ್ನು ರಚಿಸಲಾಯಿತು. ಸಣ್ಣ ಪ್ರಮಾಣದ ಅಪರಾಧಗಳಿಗೆ ಶಿಕ್ಷೆಯನ್ನು ಗರಿಷ್ಠ ಆರು ತಿಂಗಳಿಂದ ಒಂದು ವರ್ಷದ ಜೈಲು ಶಿಕ್ಷೆಗೆ ಹೆಚ್ಚಿಸಲಾಯಿತು.
ಸರ್ಕಾರದ ಧನಸಹಾಯ ಮತ್ತು ಕ್ರಮಗಳು:
ಡ್ರಗ್ ಡಿ-ಅಡಿಕ್ಷನ್ ಪ್ರೋಗ್ರಾಂನ್ನು (ಡಿಡಿಎಪಿ) 1988ರಲ್ಲಿ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಡಿಯಲ್ಲಿ ಪ್ರಾರಂಭಿಸಲಾಯಿತು ಮತ್ತು ಎಸ್‌ಯುಡಿಗಳಿಗೆ ಚಿಕಿತ್ಸೆ ನೀಡುವಂತೆ ಆದೇಶಿಸಲಾಯಿತು. ಡಿಡಿಎಪಿ ಮೂಲಕ ಕೇಂದ್ರ ಸರ್ಕಾರದಿಂದ ಒಂದು ಬಾರಿ ಹಣಕಾಸಿನ ಅನುದಾನವನ್ನು ನೀಡುವ ಮೂಲಕ ಸರ್ಕಾರಿ ಆಸ್ಪತ್ರೆಗಳಲ್ಲಿ ಡಿ-ಅಡಿಕ್ಷನ್ ಕೇಂದ್ರಗಳನ್ನು (ಡಿಎಸಿ) ಸ್ಥಾಪಿಸಲಾಗಿದ್ದು, ಪುನರಾವರ್ತಿತ ವೆಚ್ಚಗಳನ್ನು ರಾಜ್ಯ ಸರ್ಕಾರಗಳು ಭರಿಸುತ್ತವೆ. ಇದಲ್ಲದೆ ಕೆಲವು ಪ್ರಧಾನ ಸಂಸ್ಥೆಗಳು ಮತ್ತು ಈಶಾನ್ಯ ಪ್ರದೇಶದ ಡಿಎಸಿಗಳಿಗೆ ಅವುಗಳ ಕಾರ್ಯಕ್ಕಾಗಿ ವಾರ್ಷಿಕ ಅನುದಾನವನ್ನು ನೀಡುತ್ತಿವೆ.
ಕ್ಯಾಬಿನೆಟ್ ಉಪಸಮಿತಿಯ ಶಿಫಾರಸುಗಳನ್ನು ಅನುಸರಿಸಿ, ಡ್ರಗ್ ಡಿ-ಅಡಿಕ್ಷನ್ ಪ್ರೋಗ್ರಾಂನ್ನು (ಡಿಡಿಎಪಿ) 1988ರಲ್ಲಿ ಪ್ರಾರಂಭಿಸಲಾಯಿತು. ಈ ಕಾರ್ಯಕ್ರಮವು ಆರು ಪ್ರಮುಖ ಆಸ್ಪತ್ರೆಗಳು / ಸಂಸ್ಥೆಗಳಲ್ಲಿ 30 ಹಾಸಿಗೆಗಳ "ಡಿ-ಅಡಿಕ್ಷನ್ ಸೆಂಟರ್"ಗಳನ್ನು (ಡಿಎಸಿ) ಸ್ಥಾಪಿಸಿ, ಎಸ್‌ಯುಡಿ ರೋಗಿಗಳಿಗೆ ಒಳರೋಗಿ ಚಿಕಿತ್ಸೆಯನ್ನು ನೀಡುವ ಉದ್ದೇಶ ಹೊಂದಿದೆ.
ಮುಂದಿನ ಕೆಲವು ವರ್ಷಗಳಲ್ಲಿ ಅಂದರೆ 1992-93ರಲ್ಲಿ ವಿವಿಧ ರಾಜ್ಯಗಳಲ್ಲಿನ ವೈದ್ಯಕೀಯ ಕಾಲೇಜುಗಳು / ಜಿಲ್ಲಾ ಆಸ್ಪತ್ರೆಗಳಲ್ಲಿ ಡಿಎಸಿಗಳನ್ನು ಸ್ಥಾಪಿಸುವ ಯೋಜನೆಯಡಿ ಈ ಕಾರ್ಯಕ್ರಮವನ್ನು ಮತ್ತಷ್ಟು ವಿಸ್ತರಿಸಲಾಯಿತು.
ಕೇಂದ್ರ ಸರ್ಕಾರವು 2020ರಲ್ಲಿ ಪುನರ್ವಸತಿ ಕೇಂದ್ರಗಳ ಮೇಲಿನ ಹೊರೆ ಸರಾಗವಾಗಿಸಲು ವ್ಯಸನಿಗಳಿಗೆ ಉಚಿತ ಒಪಿಡಿ ಪ್ರವೇಶವನ್ನು ನೀಡಿತು.
ಡೇಟಾದ ಅನುಪಸ್ಥಿತಿ:
ಭಾರತೀಯ ಡ್ರಗ್ಸ್ ನೀತಿಯಲ್ಲಿ ಸ್ಪಷ್ಟವಾದ ಅಂತರವೆಂದರೆ ಡೇಟಾ. ದೇಶದಲ್ಲಿ ಡ್ರಗ್ಸ್ನ ಸ್ವರೂಪ, ವ್ಯಾಪ್ತಿ, ಅವಲಂಬನೆ ಮತ್ತು ಅದರ ಮಾದಕ ವ್ಯಸನಿಗಳ ಆರೋಗ್ಯದ ಮೇಲಾಗುತ್ತಿರುವ ಪರಿಣಾಮಗಳನ್ನು ತಿಳಿದು ನೀತಿ ರಚಿಸಬೇಕು. ಆದರೆ ಅದ್ಯಾವುದೂ ಇ್ನನೂ ತಿಳಿದಿಲ್ಲ.
ಮಾದಕ ವಸ್ತುಗಳ ಬಳಕೆಯ ವ್ಯಾಪ್ತಿಯನ್ನು ಅಂದಾಜು ಮಾಡುವ ಮೊದಲ ಮತ್ತು ಏಕೈಕ ಸಮೀಕ್ಷೆಯನ್ನು ಒಂದು ದಶಕದ ಹಿಂದೆ ಅಂದರೆ 2001-2002ರಲ್ಲಿ ನಡೆಸಲಾಯಿತು.
ಅಂದಾಜು 8.7 ಮಿಲಿಯನ್ ಗಾಂಜಾ ಬಳಕೆದಾರರಿದ್ದು, ಅವರಲ್ಲಿ 2.3 ಮಿಲಿಯನ್ ಜನರು ಅವಲಂಬಿತರಾಗಿದ್ದಾರೆ (26%). ಓಪಿಯೇಟ್ ಬಳಕೆದಾರರ ಸಂಖ್ಯೆ 2 ಮಿಲಿಯನ್ ಎಂದು ಅಂದಾಜಿಸಲಾಗಿದ್ದು, ಅದರಲ್ಲಿ 0.5 ಮಿಲಿಯನ್ (22%) ಜನರು ಅವಲಂಬಿತರಾಗಿದ್ದಾರೆ ಎಂದು ಭಾವಿಸಲಾಗಿದೆ.
ಎನ್‌ಜಿಒ ಮತ್ತು ಸರ್ಕಾರಿ ಕೇಂದ್ರಗಳಲ್ಲಿ ಡ್ರಗ್ಸ್ ಅವಲಂಬನೆಗೆ ಚಿಕಿತ್ಸೆ ಪಡೆಯುವ ರೋಗಿಗಳಿಂದ ಮಾಹಿತಿ ಸಂಗ್ರಹಿಸಲು ಡ್ರಗ್ ಅಬ್ಯೂಸ್ ಮಾನಿಟರಿಂಗ್ ಸಿಸ್ಟಮ್ (ಡಿಎಎಂಎಸ್) ಅಸ್ತಿತ್ವದಲ್ಲಿದ್ದರು ಆದರೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ರಾಷ್ಟ್ರವ್ಯಾಪಿ ಮತ್ತೊಂದು ಸಮೀಕ್ಷೆ ನಡೆಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ.
ಎನ್‌ಡಿಪಿಎಸ್ ಕಾಯ್ದೆಯಡಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಸ್ಥಾಪಿಸಲಾಗಿದ್ದು, ಅದರಿಂದಲೂ ಮಾಹಿತಿಯ ಕೊರತೆ ಹೆಚ್ಚಾಗುತ್ತಿದೆ.
ಮಾದಕ ವ್ಯಸನಿಗಳಿಗೆ ಸಹಾಯ:
ಸ್ವೀಕಾರ: ನಿಮ್ಮ ಸಮಸ್ಯೆ ಪರಿಹರಿಸಲು ಸಿದ್ಧರಾಗಿರಿ. ನೀವು ಬದಲಾಗಲು ಬಯಸುತ್ತೀರಿ ಎಂದು ನಿರ್ಧರಿಸಿ ಡ್ರಗ್ಸ್ ಬಳಸುವುದನ್ನು ನಿಲ್ಲಿಸಿ. ಉತ್ತಮಗೊಳ್ಳುವ ಬಯಕೆಯಿದ್ದರೆ, ಚಟದ ವಿರುದ್ಧ ಹೋರಾಡಲು ಸಹಾಯವಾಗಲಿದೆ.
ಬೆಂಬಲ ತೆಗೆದುಕೊಳ್ಳಿ: ನಿಮ್ಮ ಮತ್ತು ನಿಮ್ಮ ಪ್ರೀತಿಪಾತ್ರರ ಜೊತೆ ಪ್ರಾಮಾಣಿಕವಾಗಿರಲು ಪ್ರಾರಂಭಿಸಿ. ಚೇತರಿಕೆಗೆ ಬೆಂಬಲ ಬಹಳ ಅವಶ್ಯಕ. ನಿಮ್ಮ ಪ್ರೀತಿಪಾತ್ರರ ಬೆಂಬಲ ನಿಮಗಿದ್ದರೆ, ಚಿಕಿತ್ಸೆ ಮತ್ತು ಚೇತರಿಕೆ ಸುಲಭವಾಗುತ್ತದೆ. ಪ್ರೋತ್ಸಾಹ, ಸುರಕ್ಷತೆ, ಸೌಕರ್ಯ ಮತ್ತು ಮಾರ್ಗದರ್ಶನಕ್ಕಾಗಿ ಪ್ರೀತಿಪಾತ್ರರು ಅತ್ಯಗತ್ಯ.
ಪುನರ್ವಸತಿ: ಪುನರ್ವಸತಿ ಚಿಕಿತ್ಸೆಯ ಒಂದು ಪ್ರಮುಖ ಭಾಗವಾಗಿದೆ. ಮಾದಕ ವ್ಯಸನವನ್ನು ನಿಭಾಯಿಸುವ ಚಿಕಿತ್ಸೆಯು ಚಟದಿಂದ ಹೊರಬರುವುದು ಮಾತ್ರವಲ್ಲಿ, ವೈಯಕ್ತಿಕ ಮತ್ತು ವೃತ್ತಿಪರ ಜೀವನ ಸೇರಿದಂತೆ ನಿಮ್ಮ ಜೀವನದ ವಿವಿಧ ಅಂಶಗಳನ್ನು ತಿಳಿಸುವುದನ್ನು ಒಳಗೊಂಡಿರುತ್ತದೆ. ಇದು ಮತ್ತೆ ಜಗತ್ತನ್ನು ಎದುರಿಸಲು ತಯಾರಾಗುವುದನ್ನು ಒಳಗೊಂಡಿರುತ್ತದೆ.
ಸಮಸ್ಯೆಯನ್ನು ಪರಿಹರಿಸಿ: ಮಾದಕ ವ್ಯಸನದಿಮದ ದೂರವಾಗುವುದರ ಜೊತೆಗೆ ಮಾದಕವಸ್ತು ಅಭ್ಯಾಸಕ್ಕೆ ಕಾರಣವಾದ ಸಮಸ್ಯೆಯನ್ನು ಕೂಡಾ ನೀವು ಪರಿಹರಿಸಬೇಕು. ಯಾವುದೇ ಕಾರಣ ಅಥವಾ ಸಮಸ್ಯೆಯಿಂದಾಗಿ ನೀವು ಡ್ರಗ್ಸ್ ಗೀಳಿಗೆ ಅಂಟಿರಬಹುದು. ಆ ಪ್ರಚೋದಕಗಳು ಅಥವಾ ಸಮಸ್ಯೆಗಳು ಮತ್ತೆ ನಿಮ್ಮ ಜೀವನದಲ್ಲಿ ಕಾಣಿಸಿಕೊಳ್ಳಬಹುದು. ಈ ಸಮಸ್ಯೆಗಳನ್ನು ಎದುರಿಸಲು ನೀವು ಆರೋಗ್ಯಕರ ಮಾರ್ಗವನ್ನು ಕಂಡುಹಿಡಿಯಬೇಕು. ಡ್ರಗ್ಸ್ ಬದಲು ಆರೋಗ್ಯಕರ ರೀತಿಯಲ್ಲಿ ವ್ಯವಹರಿಸಲು ನೀವು ಕಲಿಯಬೇಕು. ಸೈಕೋಥೆರಪಿ ಮತ್ತು ಕೌನ್ಸೆಲಿಂಗ್ ಮಾಡಿಸಿಕೊಳ್ಳುವುದು ಸೂಕ್ತ.
ಬೆಂಬಲ ಗುಂಪು: ಬೆಂಬಲ ಗುಂಪಿನಲ್ಲಿ ಸೇರಿ ಮತ್ತು ನಿಯಮಿತವಾಗಿ ಸಭೆಗಳಿಗೆ ಹಾಜರಾಗಿ. ಇದೇ ರೀತಿಯ ಸಮಸ್ಯೆಯನ್ನು ಹೊಂದಿರುವ ಜನರೊಂದಿಗೆ ನೀವು ಸಂವಹನ ನಡೆಸಿದಾಗ, ಅವರ ಕಥೆಗಳು, ಅನುಭವಗಳು ಮತ್ತು ಅವರು ಹೇಗೆ ಸಮಸ್ಯೆಗಳನ್ನು ಪರಿಹರಿಸಿದರು ರಂದು ತಿಳಿದರೆ ಅದು ನಿಮ್ಮನ್ನು ಪ್ರೋತ್ಸಾಹಿಸುತ್ತದೆ.
ವ್ಯಸನಿಗಳಿಂದ ದೂರವಿರಿ: ನಿಮ್ಮ ಸಾಮಾಜಿಕ ವಲಯದಲ್ಲಿ ಮಾದಕ ವ್ಯಸನಿಗಳಿದ್ದರೆ ಅವರಿಂದ ದೂರವಿರಿ. ನಿಮ್ಮನ್ನು ಯಾವುದೇ ಕೆಟ್ಟ ವ್ಯಸನದೆಡೆಗೆ ಕರೆದೊಯ್ಯುವ ಜನ ನಿಮ್ಮ ಸುತ್ತಮುತ್ತಲಿದ್ದರೆ ಅವರಿಂದ ಅಂತರ ಕಾಯ್ದುಕೊಳ್ಳಿ. ಸಾಧ್ಯವಾದರೆ ಅವರನ್ನೂ ಬದಲಾಯಿಸಲು ಪ್ರಯತ್ನಿಸಿ.
ನಿಮ್ಮನ್ನು ಬೇರೆಡೆಗೆ ತಿರುಗಿಸಿ: ನಿಮ್ಮನ್ನು ಕಾರ್ಯನಿರತ ಮತ್ತು ಉದ್ಯೋಗದಲ್ಲಿರಿಸಿಕೊಳ್ಳಿ. ಹೊಸ ಹವ್ಯಾಸವನ್ನು ಆರಿಸಿ. ಸಮುದಾಯದೊಂದಿಗೆ ಹೆಚ್ಚು ತೊಡಗಿಸಿಕೊಳ್ಳಿ. ಹೊಸ ಗುರಿಗಳನ್ನು ಹೊಂದಿಸಿ. ನೀವು ಯಾರೆಂದು ನಿಮಗೆ ಅರಿವಾದಾಗ ನಿಮಗೆ ಮಾದಕ ವಸ್ತುಗಳ ಅಗತ್ಯವಿಲ್ಲ.
ತ್ವರಿತ ಪರಿಹಾರವಿಲ್ಲ: ಯಾವುದೇ ಸಮಸ್ಯೆಗೂ ತ್ವರಿತ ಪರಿಹಾರವಿಲ್ಲ ಎಂದು ನೀವು ಅರ್ಥಮಾಡಿಕೊಳ್ಳಬೇಕು ಮತ್ತು ಒಪ್ಪಿಕೊಳ್ಳಬೇಕು. ಚೇತರಿಕೆ ಒಂದು ಪ್ರಕ್ರಿಯೆ ಮತ್ತು ಇದು ಸಮಯ, ಶ್ರಮ ಮತ್ತು ತಾಳ್ಮೆ ತೆಗೆದುಕೊಳ್ಳುತ್ತದೆ. ನೀವು ಗುರಿಗೆ ಬದ್ಧರಾಗಿರಬೇಕು ಮತ್ತು ಮಾದಕ ವಸ್ತು ಸೇವನೆಯ ಚಟದಿಮದ ಹೊರ ಬರಬೇಕೆಂದು ದೃಢನಿಶ್ಚಯ ಮಾಡಬೇಕು.