ಹೈದರಾಬಾದ್:ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 150ನೇ ಜನ್ಮ ದಿನಾಚರಣೆ. ಇಡೀ ಭಾರತವೇ ಬಾಪೂಜಿ ಜನ್ಮ ದಿನಾಚರಣೆಯನ್ನು ಸಡಗರ, ಸಂಭ್ರಮದಿಂದ ಆಚರಿಸಲು ಎದುರು ನೋಡುತ್ತಿದೆ. ಈ ಮಧ್ಯೆ ಈಟಿವಿ ಭಾರತ ವಿಶೇಷವಾಗಿ ಗೌರವ ನಮನ ಸಲ್ಲಿಸಿದೆ.
ಈಟಿವಿ ಭಾರತ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಅಚ್ಚುಮೆಚ್ಚಿನ 'ವೈಷ್ಣವ ಜನತೋ ತೇನೆ ರೆ ಕಹಿಯೇ..' ಹಾಡನ್ನ ದೇಶದ ಪ್ರಖ್ಯಾತ ಗಾಯಕರಿಂದ ಹಾಡಿಸಿ ಲೋಕಾರ್ಪಣೆಗೊಳಿಸಿದೆ.
ರಾಮೋಜಿ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ರಾಮೋಜಿ ರಾವ್ ಈ ಹಾಡನ್ನು ಲೋಕಾರ್ಪಣೆ ಮಾಡಿದ್ದು, ಈ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರ್ತಿದೆ.
ಕೇಂದ್ರ ಸಚಿವ ಪಿಯೂಷ್ ಗೊಯಲ್, ಈ ಹಾಡನ್ನು ಟ್ವೀಟ್ ಮಾಡುವ ಮೂಲಕ ಹರ್ಷ ವ್ಯಕ್ತಪಡಿಸಿದ್ದು, ದೇಶದ ಪ್ರಮುಖ ಗಾಯಕರು ತಮ್ಮ ಮಧುರ ಕಂಠದಿಂದ ವೈಷ್ಣವ ಜನತೋ ತೇನೆ ರೆ ಕಹಿಯೇ ಹಾಡು ಹಾಡಿದ್ದು, ನೀವೂ ಕೇಳಿ ಎಂದು ಸೂಚಿಸಿದ್ದಾರೆ.
ಕನ್ನಡದ ಹೆಮ್ಮೆಯ ಗಾಯಕ ವಿಜಯ ಪ್ರಕಾಶ್ ಕೂಡ ಈಟಿವಿ ಭಾರತವನ್ನು ಶ್ಲಾಘಿಸಿದ್ದು, ಭಾರತದ ಶ್ರೇಷ್ಠ ಗಾಯಕರೊಂದಿಗೆ ಹಾಡುವ ಸದವಕಾಶ, ಜೈ ಹಿಂದ್, ಇದು ಈಟಿವಿಯ ಕೂಡುಗೆ ಕೇಳಿ ಹರಿಸಿ ಎಂದು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮೆಚ್ಚುಗೆ ಸೂಚಿಸಿದ್ದು, ಸುಂದರವಾದ ಹಾಡಿನ ಮೂಲಕ ಈಟಿವಿ ಭಾರತ ಅದ್ಭುತ ಕಾರ್ಯ ಮಾಡಿದೆ ಎಂದಿದ್ದಾರೆ. ಉಳಿದಂತೆ ಡಿಡಿ ನ್ಯೂಸ್ ಆಂಧ್ರ ಕೂಡ ಈಟಿವಿ ಭಾರತ ಕಾರ್ಯ ಮೆಚ್ಚಿ ಹಾಡು ಟ್ವೀಟ್ ಮಾಡಿದೆ.