ಕರ್ನಾಟಕ

karnataka

ETV Bharat / bharat

ರಾಯಭಾರತ್ವದ ಬಾಕಿ ಮೊತ್ತಕ್ಕಾಗಿ ಸುಪ್ರೀಂ ಮೆಟ್ಟಿಲೇರಿದ ಕ್ಯಾಪ್ಟನ್​ ಕೂಲ್​

ರಾಯಭಾರತ್ವದ ಬಾಕಿ ಮೊತ್ತ 40 ಕೋಟಿ ರೂ ನೀಡಲು ಆಮ್ರಪಾಲಿ ಕಂಪನಿಗೆ ಸೂಚಿಸುವಂತೆ ಮಹೇಂದ್ರ ಸಿಂಗ್​ ಧೋನಿ ಸುಪ್ರೀಂಕೋರ್ಟ್​ ಮೊರೆ ಹೋಗಿದ್ದಾರೆ.

ಬಾಕಿ ಮೊತ್ತಕ್ಕಾಗಿ ಆಮ್ರಪಾಲಿ ಕಂಪನಿ ವಿರುದ್ಧ ಸುಪ್ರೀಂಕೋರ್ಟ್​ ಮೊರೆ ಹೋದ ಧೋನಿ

By

Published : Mar 27, 2019, 11:31 AM IST

Updated : Mar 27, 2019, 11:37 AM IST

ನವದೆಹಲಿ: ಕ್ರಿಕೆಟ್​ ಲೋಕದ ಕ್ಯಾಪ್ಟನ್​ ಕೂಲ್​ ಎಂದೇ ಕರೆಸಿಕೊಳ್ಳುವ ಮಹೇಂದ್ರ ಸಿಂಗ್​ ಧೋನಿ, ಆಮ್ರಪಾಲಿ ಕಂಪನಿ ವಿರುದ್ಧ ಗರಂ ಆಗಿದ್ದಾರೆ. ಕಂಪನಿ ತನಗೆ ನೀಡಬೇಕಾದ ಬಾಕಿ ಮೊತ್ತ 40 ಕೋಟಿ ರೂ ನೀಡುವಂತೆ ತಾಕೀತು ಮಾಡಿ, ಸುಪ್ರೀಂಕೋರ್ಟ್​ ಮೊರೆ ಹೋಗಿದ್ದಾರೆ.

ಈ ಮೊದಲು ಧೋನಿ ರಿಯಲ್​ ಎಸ್ಟೇಟ್​ ವಲಯದ ಆಮ್ರಪಾಲಿ ಗ್ರೂಪ್​ನ ರಾಯಭಾರಿಯಾಗಿದ್ದರು. ಆದರೆ, ಕಂಪನಿ ಬಗ್ಗೆ ಸಾಕಷ್ಟು ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಅವರು 2016 ಏಪ್ರಿಲ್​ನಲ್ಲಿ ರಾಯಭಾರಿತ್ವಕ್ಕೆ ರಾಜೀನಾಮೆ ನೀಡಿದ್ದರು. ಆ ಸಮಯದಲ್ಲಿ ಕಂಪನಿ ಬಳಿ ಹಣವಿರಲಿಲ್ಲ ಎಂದು ಸುಮ್ಮನಾಗಿದ್ದಾಗಿ ಹೇಳಿಕೊಂಡಿರುವ ಧೋನಿ, ಇದೀಗ ಕೂಡಲೇ ಹಣ ಸಂದಾಯ ಮಾಡುವಂತೆ ಒತ್ತಾಯ ಮಾಡಿದ್ದಾರೆ. ಕಂಪನಿಗೆ ಈ ಬಗ್ಗೆ ನಿರ್ದೇಶನ ನೀಡುವಂತೆ ಸುಪ್ರೀಂಕೋರ್ಟ್​ಗೆ ಮನವಿ ಸಲ್ಲಿಸಿದ್ದಾರೆ.

ನೊಯ್ಡಾದಲ್ಲಿ ಆಮ್ರಪಾಲಿ ಗ್ರೂಪ್​ ಸಪ್ಪಿರೆ ಯೋಜನೆಯಡಿ ಫ್ಲಾನ್​ ನಿರ್ಮಿಸುವ ಕಾರ್ಯ ಕೈಗೆತ್ತಿಕೊಂಡಿತ್ತು. 42 ಸಾವಿರ ಫ್ಲಾಟ್​ಗಳನ್ನು ಆಗಾಗಲೇ ಜನರು ಬುಕ್​ ಸಹ ಮಾಡಿದ್ದರು. ಆದರೆ ಕಂಪನಿ ಯೋಜನೆಯನ್ನು ಪೂರ್ಣಗೊಳಿಸಲಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಫ್ಲಾಟ್​ಗಳನ್ನು ಬುಕ್​ ಮಾಡಿದ್ದ ಮಂದಿ ಟ್ವಿಟ್ಟರ್​ ಮೂಲಕ ಆಕ್ರೋಶ ಹೊರಹಾಕಿ, ಧೋನಿಗೆ ಟ್ಯಾಗ್​ ಸಹ ಮಾಡಿದ್ದರು. ಕಂಪನಿಯ ರಾಯಭಾರಿತ್ವ ತ್ಯಜಿಸಿ, ಇಲ್ಲವೇ ಕಂಪನಿ ತನ್ನ ಕಾರ್ಯವನ್ನು ಪೂರ್ಣಗೊಳಿಸುವ ಭರವಸೆ ನೀಡಿ ಎಂದು ಆಗ್ರಹಿಸಿದ್ದರು.

ಇದೇ ಕಾರಣಕ್ಕೆ ಧೋನಿ ಕಂಪನಿಯ ರಾಯಭಾರತ್ವದಿಂದ ಹಿಂದೆ ಸರಿಯುವಂತಾಯಿತು. ಕಳೆದ ತಿಂಗಳಷ್ಟೆ ಸುಪ್ರೀಂಕೋರ್ಟ್​ ಕಂಪನಿಯ ಸಿಎಂಡಿ ಅನಿಲ್​ ಶರ್ಮ ಹಾಗೂ ಇಬ್ಬರು ನಿರ್ದೇಶಕರನ್ನು ಕ್ರಿಮಿನಲ್​ ದೂರಿನಡಿ ಬಂಧಿಸುವಂತೆ ದೆಹಲಿ ಪೊಲೀಸರಿಗೆ ಸೂಚನೆ ನೀಡಿದೆ. ಇವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆಯೂ ಸೂಚನೆ ನೀಡಿದೆ.


Last Updated : Mar 27, 2019, 11:37 AM IST

ABOUT THE AUTHOR

...view details