ಕರ್ನಾಟಕ

karnataka

ETV Bharat / bharat

ಸಂಸತ್​ ಅಧಿವೇಶನ: ಮೊದಲ ಬಾರಿಗೆ ಆ್ಯಪ್​ ಮೂಲಕ ಹಾಜರಾತಿ ದಾಖಲಿಸಿದ ಸಂಸದರು - 'ಹಾಜರಾತಿ ನೋಂದಣಿ' ಆ್ಯಪ್

ಕೊರೊನಾ ಮಾನದಂಡಗಳೊಂದಿಗೆ ಸಂಸತ್ತಿನ ಮಾನ್ಸೂನ್ ಅಧಿವೇಶನ ಆರಂಭವಾಗಿದ್ದು, ಇದೇ ಮೊದಲ ಬಾರಿಗೆ 'ಹಾಜರಾತಿ ನೋಂದಣಿ' ಆ್ಯಪ್ ಮೂಲಕ ಸಂಸದರ ಹಾಜರಾತಿಯನ್ನು ದಾಖಲಿಸಿಕೊಳ್ಳಲಾಗಿದೆ.

Parliament Monsoon Session 2020
ಆ್ಯಪ್​ ಮೂಲಕ ಹಾಜರಾತಿ ದಾಖಲಿಸಿದ ಸಂಸದರು

By

Published : Sep 14, 2020, 12:23 PM IST

ನವದೆಹಲಿ: ಸಂಸತ್​ ಮುಂಗಾರು ಅಧಿವೇಶನ ಆರಂಭವಾಗಿದ್ದು, ಇದೇ ಮೊದಲ ಬಾರಿಗೆ ಆ್ಯಪ್​ ಮೂಲಕ ಸಂಸದರು ಹಾಜರಾತಿಯನ್ನು ದಾಖಲಿಸಿದ್ದಾರೆ.

ಕೋವಿಡ್​ ಹಾವಳಿಯಿಂದಾಗಿ ಈ ಬಾರಿಯ ಸಂಸತ್ತಿನ ಮಾನ್ಸೂನ್ ಅಧಿವೇಶನ ಕೊರೊನಾ ಮಾನದಂಡಗಳೊಂದಿಗೆ ತಡವಾಗಿ ಪ್ರಾರಂಭವಾಗಿದೆ. ಸೋಂಕು ಭೀತಿ ಹಿನ್ನೆಲೆ ಮುಂಜಾಗ್ರತಾ ಹಾಗೂ ಮುನ್ನೆಚ್ಚರಿಕಾ ಕ್ರಮವಾಗಿ ಈ ಬಾರಿ 'ಹಾಜರಾತಿ ನೋಂದಣಿ' ಆ್ಯಪ್ ಮೂಲಕ ಸಂಸದರ ಹಾಜರಾತಿಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಲೋಕಸಭಾ ಸಚಿವಾಲಯ ಮಾಹಿತಿ ನೀಡಿದೆ.

ಇನ್ನು ಅಧಿವೇಶನಕ್ಕೂ ಮುನ್ನ ಸಂಸದರಿಗೆ ಕೋವಿಡ್​ ಟೆಸ್ಟ್​ ಮಾಡಲಾಗಿದ್ದು, ಆಂಧ್ರ ಪ್ರದೇಶದ ಚಿತ್ತೂರು ಸಂಸದ ರೆಡ್ಡಪ್ಪ ಹಾಗೂ ಅರಾಕು ಸಂಸದೆ ಗೊಡ್ಡೇಟಿ ಮಾಧವಿ ಅವರ ವರದಿ ಪಾಸಿಟಿವ್​ ಬಂದಿದೆ.

ABOUT THE AUTHOR

...view details