ಬೆಂಗಳೂರು: ನಾವು ಯಾವ ಕಾಂಗ್ರೆಸ್ ಮುಖಂಡರನ್ನೂ ಭೇಟಿಯಾಗುವುದಿಲ್ಲ ಎಂದು ಮಧ್ಯಪ್ರದೇಶದ ಕಾಂಗ್ರೆಸ್ ಬಂಡಾಯ ಶಾಸಕರು ವಿಡಿಯೋ ಮುಖಾಂತರ ತಿಳಿಸಿದ್ದಾರೆ.
ಮಧ್ಯಪ್ರದೇಶದ ಕಾಂಗ್ರೆಸ್ ಬಂಡಾಯ ಶಾಸಕರು ರಮಡಾ ರೆಸಾರ್ಟ್ನಲ್ಲಿರುವ ಮಧ್ಯಪ್ರದೇಶದ ಕಾಂಗ್ರೆಸ್ ಬಂಡಾಯ ಶಾಸಕರನ್ನು ಭೇಟಿ ಮಾಡಲು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್, ಶಾಸಕ ಆರೀಫ್ ಮಸೂದ್ ಸೇರಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಶಾಸಕರಾದ ಕೃಷ್ಣಭೈರೇಗೌಡ, ಹ್ಯಾರೀಸ್, ರಿಜ್ವಾನ್ ಅರ್ಷದ್ ಸೇರಿದಂತೆ ಇನ್ನಿತರ ಮುಖಂಡರು ಆಗಮಿಸಿದ್ದರು. ಈ ವೇಳೆ ನಾಗೇನಹಳ್ಳಿ ಗೇಟ್ ಬಳಿ ಪೊಲೀಸರು ತಡೆದಿದ್ದರಿಂದ ಸ್ಥಳದಲ್ಲಿ ಹೈಡ್ರಾಮ ನಡೆದಿತ್ತು.
ಓದಿ:ರಮಡ ರೆಸಾರ್ಟ್ಗೆ ಬಿಗಿ ಪೊಲೀಸ್ ಭದ್ರತೆ... ಯಾರೇ ಬಂದರೂ ನೋ ಎಂಟ್ರಿ
ಇದಕ್ಕೆ ಕೈ ಬಂಡಾಯ ಶಾಸಕರು, ನಮ್ಮ ಸ್ವಇಚ್ಛೆಯಿಂದ ಇಲ್ಲಿಗೆ ಬಂದಿದ್ದೇವೆ. ಮಾಧ್ಯಮಗಳ ಮುಖಾಂತರ ದಿಗ್ವಿಜಯ್ ಸಿಂಗ್ ಸೇರಿದಂತೆ ಕಾಂಗ್ರೆಸ್ ಮುಖಂಡರು ನಮ್ಮನ್ನು ಭೇಟಿಯಾಗಲು ಬಂದಿದ್ದರೆಂದು ತಿಳಿಯಿತು. ಆದರೆ ನಾವು ಯಾರೊಟ್ಟಿಗೂ ಏನನ್ನು ಮಾತನಾಡಲು ಬಯಸುವುದಿಲ್ಲ ಎಂದರು.
ಒಂದು ವರ್ಷದಿಂದ ಹಲವಾರು ವಿಷಯಗಳ ಕುರಿತು ನಾವು ಮಾತನಾಡಿದ್ದೇವೆ. ಒಂದು ವರ್ಷದಿಂದ ನಮ್ಮ ಮಾತಿಗೆ ತಲೆ ಕೆಡಿಸಿಕೊಳ್ಳದವರು, ಒಂದು ದಿನದಲ್ಲಿ ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ನಮ್ಮ ಕ್ಷೇತ್ರದ ಜನರಿಗಾಗಿ, ಕ್ಷೇತ್ರದ ಅಭಿವೃದ್ಧಿ ಕೆಲಸಗಳು ಆಗದಿದ್ದ ಕಾರಣ ನಾವು ಇಲ್ಲಿ ಬಂದಿದ್ದೇವೆ. ನಮ್ಮನ್ನು ಮುಖಂಡರು ಭೇಟಿಯಾಗುವುದು ಬೇಡ. ವಾಪಸ್ ತೆರಳಲಿ ಎಂದು ತಿಳಿಸಿದರು.