ನಲ್ಗೊಂಡ:ತಾಯಿಯೊಬ್ಬಳು ಹೆತ್ತ ಮಗನ ಕತ್ತಿಗೆಯನ್ನು ಟವೆಲ್ನಿಂದ ಬಿಗಿದು ಕೊಲೆ ಮಾಡಿದಲ್ಲದೆ, ಆ ಮಗುವಿನ ಶವವನ್ನು ಗೋಣಿ ಚೀಲದಲ್ಲಿ ತುಂಬಿ ಅಮಾನವೀಯವಾಗಿ ನಡೆದುಕೊಂಡಿರುವ ಘಟನೆ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ.
9 ವರ್ಷದ ಬಾಲಕ ನಾಗರಾಜು ತನ್ನ ತಾಯಿ ಜೊತೆ ವಾಸಿಸುತ್ತಿದ್ದ. ನಾಗರಾಜು ತಂದೆ ಬೋರ್ವೆಲ್ ಡ್ರಿಲ್ಲಿಂಗ್ ಫರ್ಮ್ನಲ್ಲಿ ಕೆಲಸ ಮಾಡುತ್ತಿದ್ದು, ಪ್ರತಿದಿನ ಕೆಲಸಕ್ಕೆ ತೆರಳುತ್ತಿದ್ದ. ಗಂಡ ಇಲ್ಲದ ಸಮಯವನ್ನು ಬಳಸಿಕೊಂಡ ಆಕೆ ಬೇರೆ ವ್ಯಕ್ತಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಳಂತೆ. ಈ ವಿಷಯ ಮಗ ನಾಗರಾಜುಗೆ ತಿಳಿದಿತ್ತಂತೆ.
ಇನ್ನು ವಿವಾಹೇತರ ಸಂಬಂಧದ ಬಗ್ಗೆ ಗಂಡನಿಗೆ ತಿಳಿಯುತ್ತೆಂಬ ಭಯ ಆಕೆಗೆ ಕಾಡಿದೆ. ನಿನ್ನೆ ಸಂಜೆ ಮಗನ ಕತ್ತಿಗೆಯನ್ನು ಟವೆಲ್ನಿಂದ ಬಿಗಿದು ಕೊಲೆ ಮಾಡಿದ್ದಾಳೆ. ನಂತರ ಮಗನ ಶವವನ್ನು ಗೋಣಿ ಚೀಲದಲ್ಲಿ ತುಂಬಿದ್ದಾಳೆ ಎನ್ನಲಾಗಿದೆ.
ಇನ್ನು ಈ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿದಿದೆ. ಕೂಡಲೇ ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಬಾಲಕನ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇನ್ನು ಆರೋಪಿಯನ್ನು ಬಂಧಿಸಿದ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ. ಈ ಘಟನೆ ಕುರಿತು ನಲ್ಗೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.