ಗೋರಖ್‌ಪುರ(ಉತ್ತರ ಪ್ರದೇಶ): ಸಾಮಾನ್ಯವಾಗಿ ಅಣ್ಣ ತಮ್ಮಂದಿರು, ಅಕ್ಕ ತಂಗಿಯರು ಒಂದೇ ಮಂಟಪದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡೋದನ್ನ ನೋಡಿದ್ದೇವೆ. ಇದು ತಂದೆ, ತಾಯಿಗೆ ಖರ್ಚು ವೆಚ್ಚಗಳನ್ನು ಕಡಿತ ಮಾಡುವ ಜೊತೆ ಜೊತೆಗೆ ಮಕ್ಕಳಿಗೆ ಮದುವೆ ಮಾಡಬೇಕು ಎಂಬ ಜವಾಬ್ದಾರಿಯನ್ನು ಕಡಿಮೆ ಮಾಡಿಕೊಳ್ಳುವ ಆಲೋಚನೆಯೂ ಹೌದು. ಆದರೆ ಇಲ್ಲಿ ನಡೆದಿರುವ ಎರಡು ಮದುವೆಗಳು ಸ್ವಲ್ಪ ವಿಭಿನ್ನ ಹಾಗೂ ವಿಶೇಷವಾಗಿದೆ.
ಗೋರಖ್‌ಪುರದ ಪಿಪ್ರೌಲಿ ಎಂಬ ಹಳ್ಳಿಯಲ್ಲಿ ಸರ್ಕಾರದಿಂದ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದ ಒಂದೇ ಮಂಟಪದಲ್ಲಿ 53 ವರ್ಷದ ತಾಯಿ ಹಾಗೂ 27 ವರ್ಷದ ಪುತ್ರಿ ಮದುವೆಯಾಗುವ ಮೂಲಕ ಗಮನ ಸಳೆದಿದ್ದಾರೆ. ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆಯಡಿ 63 ಮದುವೆಯಗಳು ನಡೆದವು.