ಕರ್ನಾಟಕ

karnataka

ETV Bharat / bharat

ಭಾರತದ ಮೋಸ್ಟ್​ ವಾಂಟೆಡ್​ ಮಾದಕವಸ್ತು ಕಳ್ಳಸಾಗಣೆದಾರ ಚೀತಾ ಅರೆಸ್ಟ್​! - punjab latest news

ಭಾರತದ ಮೋಸ್ಟ್​ ವಾಂಟೆಡ್​ ಮಾದಕ ದ್ರವ್ಯ ಕಳ್ಳಸಾಗಣೆದಾರರಾದ ರಂಜೀತ್​​​​ ರಾಣಾ ಚೀತಾ ಮತ್ತು ಆತನ ಸಹೋದರ ಗಗನ್‌ದೀಪ್ ಭೋಲಾನನ್ನು ಪಂಜಾಬ್ ಪೊಲೀಸರು ಹರಿಯಾಣದಲ್ಲಿ ಬಂಧಿಸಿದ್ದಾರೆ.

Ranjeet Rana Cheeta
ರಂಜೀತ್ ರಾಣಾ ಚೀತಾ

By

Published : May 9, 2020, 7:45 PM IST

ಸಿರ್ಸಾ (ಹರಿಯಾಣ): ಭಾರತದ ಕುಖ್ಯಾತ ಮಾದಕವಸ್ತು ಕಳ್ಳಸಾಗಣೆದಾರ, ಕಳೆದ ವರ್ಷದ ಜೂನ್‌ನಲ್ಲಿ ಭಾರತ-ಪಾಕಿಸ್ತಾನ ಗಡಿಯಿಂದ 532 ಕೆಜಿ ಹೆರಾಯಿನ್ ಸಾಗಿಸಿದ್ದ. ಹೀಗಾಗಿ ಪೊಲೀಸರ ಮೋಸ್ಟ್​ ವಾಂಟೆಡ್​ ಆರೋಪಿ ರಂಜೀತ್​​​​​ ರಾಣಾ 'ಚೀತಾ'ನನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ.

ಇಬ್ಬರು ಮಾದಕ ದ್ರವ್ಯ ಕಳ್ಳಸಾಗಣೆದಾರರಾದ ರಂಜೀತ್ ರಾಣಾ ಚೀತಾ ಮತ್ತು ಆತನ ಸಹೋದರ ಗಗನ್‌ದೀಪ್ ಭೋಲಾನನ್ನು ಹರಿಯಾಣದ ಸಿರ್ಸಾದಲ್ಲಿ ಪಂಜಾಬ್ ಪೊಲೀಸರು ಬಂಧಿಸಿದ್ದಾರೆ ಎಂದು ಪಂಜಾಬ್ ಡಿಜಿಪಿ ದಿನಕರ್ ಗುಪ್ತಾ ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬ್​ಲ್ಲಿ ಹಿಜ್ಬುಲ್ ಕಾರ್ಯಕರ್ತರನ್ನು ಬಂಧಿಸಿದ ಸಂಬಂಧ ಹೆಚ್ಚಿನ ಮಾಹಿತಿಗಳನ್ನು ಅನುಸರಿಸಿದ ಪೊಲೀಸರ ತಂಡ, ರಂಜೀತ್ ರಾಣಾ ಚೀತಾನನ್ನು ಬಂಧಿಸಲು ಮುಂದಾದರು. ಜೂನ್‌ನಲ್ಲಿ ಅಟಾರಿ ಗಡಿಯಿಂದ 532 ಕೆಜಿ ಹೆರಾಯಿನ್ ಸಾಗಣೆಯಲ್ಲಿ ಚೀತಾ ಮೋಸ್ಟ್​ ವಾಂಟೆಡ್​ ಆರೋಪಿ ಎಂದು ಗುಪ್ತಾ ಟ್ವೀಟ್ ಮಾಡಿದ್ದಾರೆ.

ಇವರಿಬ್ಬರನ್ನೂ ಹರಿಯಾಣದ ಸಿರ್ಸಾ ಜಿಲ್ಲೆಯ ಬೇಗು ಗ್ರಾಮದಲ್ಲಿ ಬಂಧಿಸಲಾಗಿದೆ ಎಂದು ಪಂಜಾಬ್ ಡಿಜಿಪಿ ತನ್ನ ಅಧಿಕೃತ ಟ್ವಿಟರ್​ನಲ್ಲಿ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details