ತಿರುವನಂತಪುರಂ: ಕೇರಳದ ಕೃಷಿ ಸಚಿವ ವಿ.ಎಸ್ ಸುನಿಲ್ ಕುಮಾರ್ ಸೆಲ್ಫ್ ಕ್ವಾರೆಂಟೈನ್ಗೆ ಒಳಗಾಗಿದ್ದಾರೆ.
ಸೆಲ್ಫ್ ಕ್ವಾರಂಟೈನ್ಗೆ ಒಳಗಾದ ಕೇರಳದ ಕೃಷಿ ಸಚಿವ ವಿ.ಎಸ್ ಸುನಿಲ್ ಕುಮಾರ್
ಕೊರೊನಾ ಪರಿಶೀಲನಾ ಸಭೆಯಲ್ಲಿ ಭಾಗಿಯಾಗಿದ್ದ ಕೇರಳದ ಕೃಷಿ ಸಚಿವ ವಿ.ಎಸ್ ಸುನಿಲ್ ಕುಮಾರ್ ಸೆಲ್ಫ್ ಕ್ವಾರೆಂಟೈನ್ಗೆ ಒಳಗಾಗಿದ್ದಾರೆ.
ಕೃಷಿ ಸಚಿವ ವಿ.ಎಸ್ ಸುನಿಲ್ ಕುಮಾರ್
ಜೂನ್ 15ರಂದು ತ್ರಿಶೂರ್ನ ಕಾರ್ಪೊರೇಷನ್ನಲ್ಲಿ ಕೊರೊನಾ ಪರಿಶೀಲನಾ ಸಭೆ ನಡೆಸಲಾಗಿತ್ತು. ಅಲ್ಲಿ ಭಾಗಿಯಾಗಿದ್ದ ಆರೋಗ್ಯ ಕಾರ್ಯಕರ್ತನಿಗೆ ಕೊರೊನಾ ಇರುವುದಾಗಿ ವರದಿ ಬಂದಿದೆ. ಈ ಹಿನ್ನೆಲೆಯಲ್ಲಿ ಸಚಿವರು ಹಾಗೂ ಪರ್ಸನಲ್ ಅಸಿಸ್ಟೆಂಟ್ ಸೆಲ್ಫ್ ಕ್ವಾರೆಂಟೈನ್ಗೆ ಒಳಗಾಗಿದ್ದಾರೆ.
ಕೊರೊನಾ ಪರಿಶೀಲನಾ ಸಭೆಯಲ್ಲಿ 13 ಜನರು ಭಾಗಿಯಾಗಿದ್ದು, ಅವರೆಲ್ಲರನ್ನೂ ಕ್ವಾರೆಂಟೈನ್ಗೆ ಒಳಗಾಗುವಂತೆ ಸೂಚಿಸಲಾಗಿದೆ.