ಗ್ವಾಲಿಯರ್(ಮಧ್ಯಪ್ರದೇಶ):ರಷ್ಯಾ ನಿರ್ಮಿತಮಿಗ್ - 21 ತರಬೇತಿ ಯುದ್ಧ ವಿಮಾನ ಗ್ವಾಲಿಯರ್ನಲ್ಲಿ ಪತನವಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ.
ದುರ್ಘಟನೆ ವೇಳೆ ಗ್ರೂಪ್ ಕ್ಯಾಪ್ಟನ್ ಹಾಗೂ ಸ್ಕ್ವಾಡ್ರನ್ ಲೀಡರ್ ಇಬ್ಬರೂ ಪ್ಯಾರಾಚೂಟ್ ಮೂಲಕ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ. ಮಿಗ್ 21 ಯುದ್ಧವಿಮಾನ ಗ್ವಾಲಿಯರ್ನ ಗದ್ದೆ ಇರುವ ಪ್ರದೇಶದಲ್ಲಿ ಬಿದ್ದಿದೆ.
ಮಿಗ್ 21 ಪತನದ ಇತಿಹಾಸ:
ಮಿಗ್ 21 ಯುದ್ಧ ವಿಮಾನವನ್ನು 1963 ರಲ್ಲಿ ಭಾರತೀಯ ವಾಯುಸೇನೆಗೆ ಸೇರ್ಪಡೆ ಮಾಡಲಾಗಿತ್ತು. ಈ ವೇಳೆ ಸುಮಾರು 1200 ಮಿಗ್ ಫೈಟರುಗಳನ್ನು ರಷ್ಯಾ ಜೊತೆಗಿನ ರಕ್ಷಣಾ ಒಪ್ಪಂದ ಪ್ರಕಾರ, ಸೇನೆಗೆ ಸೇರಿಸಲಾಗಿದೆ. 2019 ರವರೆಗೆ 113 ಫೈಟರ್ ಜೆಟ್‌ಗಳು ವಾಯುಸೇನೆಯಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿವೆ. ಆದ್ರೆ, ಈ ಯುದ್ದ ವಿಮಾನ ಸಾಕಷ್ಟು ತಾಂತ್ರಿಕ ತೊಂದರೆ ಎದುರಿಸುತ್ತಿದ್ದು 1970 ರಿಂದ ಇಲ್ಲಿಯವರೆಗೆ ಭಾರತದ 170 ಮಂದಿ ಪೈಲೆಟ್‌ಗಳು ಹಾಗು 40 ಮಂದಿ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ.
2010 ರಿಂದ 2013 ರ ವರೆಗೆ 14 ಮಿಗ್ 21 ವಿಮಾನಗಳು ಪತನವಾಗಿವೆ. ಇನ್ನು ಅಚ್ಚರಿ ಅಂದ್ರೆ, 1966 ರಿಂದ 1984 ರ ನಡುವೆ ನಿರ್ಮಾಣಗೊಂಡ 840 ಏರ್‌ಕ್ರಾಫ್ಟ್‌ಗಳಲ್ಲಿ ಸುಮಾರು ಅರ್ಧದಷ್ಟು ಪತನವಾಗಿದ್ದು ಸಾವುನೋವಿಗೆ ಕಾರಣವಾಗಿವೆ.