ಕರ್ನಾಟಕ

karnataka

ETV Bharat / bharat

ಡೊನಾಲ್ಡ್​ ಟ್ರಂಪ್​ಗೆ ಅವಿಸ್ಮರಣೀಯ ಸ್ವಾಗತ ನೀಡುತ್ತೇವೆ: ಪ್ರಧಾನಿ ಮೋದಿ ಟ್ವೀಟ್​! - ಭಾರತದ ಪ್ರವಾಸ್​ ಟ್ರಂಪ್​

ಭಾರತಕ್ಕೆ ಆಗಮಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗೆ ಅವಿಸ್ಮರಣೀಯ ಸ್ವಾಗತ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮಾಡಿದ್ದಾರೆ.

ಭಾರತಕ್ಕೆ ಡೊನಾಲ್ಡ್​ ಟ್ರಂಪ್​
ಭಾರತಕ್ಕೆ ಡೊನಾಲ್ಡ್​ ಟ್ರಂಪ್​

By

Published : Feb 12, 2020, 12:51 PM IST

Updated : Feb 12, 2020, 1:22 PM IST

ನವದೆಹಲಿ:ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಇದೇ ಫೆಬ್ರವರಿ 24 ಹಾಗೂ 25ರಂದು ಭಾರತಕ್ಕೆ ಆಗಮಿಸಲಿದ್ದು, ಅವರಿಗೆ ಅದ್ಧೂರಿ ಸ್ವಾಗತ ನೀಡಲು ಭಾರತ ಸಜ್ಜಾಗಿದೆ.

ಭಾರತಕ್ಕೆ ಆಗಮಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮಾಡಿದ್ದು, ಅವಿಸ್ಮರಣೀಯ ಸ್ವಾಗತ ನೀಡುವುದಾಗಿ ಟ್ವೀಟ್​ ಮಾಡಿದ್ದಾರೆ. ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್​ ಜತೆ ಡೊನಾಲ್ಡ್​ ಟ್ರಂಪ್​ ಫೆ. 24ರಂದು ಗುಜರಾತ್​ನ ಅಹಮದಾಬಾದ್​ಗೆ ಬಂದಿಳಿಯಲಿದ್ದು, ಈ ವೇಳೆ, ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, ಭಾರತ ಭೇಟಿಯನ್ನು ಎದುರು ನೋಡುತ್ತಿದ್ದೇನೆ. ಅಲ್ಲಿನ ಪ್ರಧಾನಿ ನರೇಂದ್ರ ಮೋದಿ ನನ್ನ ಸ್ನೇಹಿತ. ಅವರು ಮಹಾನ್ ಸಂಭಾವಿತ ವ್ಯಕ್ತಿ ಎಂದು ಹೇಳಿದ್ದಾರೆ.

ಕಳೆದ ವಾರ ನಾನು ಮೋದಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದು, ನನ್ನನ್ನು ಸ್ವಾಗತಿಸಲು ಲಕ್ಷಾಂತರ ಜನರು ಭಾರತದಲ್ಲಿ ಕಾಯುತ್ತಿದ್ದಾರೆ ಎಂದಿದ್ದಾರೆ. ಇನ್ನು ಇದೇ ವರ್ಷ ನವೆಂಬರ್​ ತಿಂಗಳಲ್ಲಿ ಅಮೆರಿಕ ಅಧ್ಯಕ್ಷ್ಯ ಚುನಾವಣೆ ನಡೆಯಲಿರುವ ಕಾರಣ, ಈ ಭೇಟಿ ಮಹತ್ವ ಪಡೆದುಕೊಂಡಿದೆ. ಇದೇ ವೇಳೆ, ಉಭಯ ದೇಶಗಳ ನಡುವೆ ವ್ಯಾಪಾರ, ಮಿಲಿಟರಿ, ನೌಕಾ ಹೆಲಿಕಾಪ್ಟರ್​ ಸೇರಿ ಕೆಲವೊಂದು ಮಹತ್ವದ ಒಪ್ಪಂದ ಏರ್ಪಡುವ ಸಾಧ್ಯತೆ ಇದೆ.

Last Updated : Feb 12, 2020, 1:22 PM IST

ABOUT THE AUTHOR

...view details