ಜಮ್ಮು: ಜಮ್ಮು ಮತ್ತು ಕಾಶ್ಮೀರ ಪೊಲೀಸರು ಇಂದು ಲಷ್ಕರ್ ಏ ತೋಯ್ಬಾ ಉಗ್ರ ಸಂಘಟನೆಗೆ ಸೇರಿದ ಉಗ್ರನೊಬ್ಬನನ್ನು ಶ್ರೀನಗರದ ರಾಜಬಾಘ್ ಏರಿಯಾದಲ್ಲಿ ಬಂಧಿಸಿದ್ದಾರೆ.
ಪ್ರಾರ್ಥನೆಗೆಂದು ತೆರಳಿ ಉಗ್ರನಾಗಿದ್ದ.. ಕಣ್ಮರೆಯಾಗಿದ್ದವ ಆಸ್ಪತ್ರೆಯಲ್ಲಿ ಖಾಕಿ ಬಲೆಗೆ ಬಿದ್ದ..
ಲಷ್ಕರ್ ಏ ತೋಯ್ಬಾದ ಉಗ್ರನನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ.
ಶ್ರೀನಗರದ ರಾಜಬಾಘ್ ಏರಿಯಾದಲ್ಲಿ ಲಷ್ಕರ್ ಎ ತೊಯ್ಬಾ ಉಗ್ರನ ಬಂಧನ
ಶ್ರೀನಗರದ ನಾತಿಪೊರದ ನಿವಾಸಿಯಾದ ಡ್ಯಾನಿಷ್ ಹನೀಫ್ ಬಂಧಿತ ಉಗ್ರ. ರಾಜಬಾಘ್ ಏರಿಯಾದಲ್ಲಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರ ಬಗ್ಗೆ ಖಚಿತ ಸುಳಿವು ಆಧರಿಸಿ ದಾಳಿ ನಡೆಸಿದಪೊಲೀಸರು, ಉಗ್ರನನ್ನ ಬಂಧಿಸಿದ್ದಾರೆಂದು ತಿಳಿದು ಬಂದಿದೆ.
2018 ಡಿಸೆಂಬರ್ 30ರಂದು ಮಸೀದಿಯಲ್ಲಿ ಪ್ರಾರ್ಥನೆಗೆಂದು ತೆರಳಿದ್ದ ಹನೀಫ್ ಆ ಮೇಲೆ ಕಣ್ಮರೆಯಾಗಿದ್ದ. ಈತ ಉಗ್ರ ಸಂಘಟನೆಗೆ ಸೇರಿದ್ದಾಗಿ ಮೂಲಗಳು ತಿಳಿಸಿವೆ.