ಕರ್ನಾಟಕ

karnataka

ETV Bharat / bharat

ಮ್ಯಾಟ್ರಿಮೋನಿಯಲ್ಲಿ ಮಹಿಳಾ ವೈದ್ಯೆಗೆ ವಿದೇಶಿಗರಿಂದ ವಂಚನೆ

ಡೈವೋರ್ಸ್​ ಪಡೆದುಕೊಂಡಿದ್ದ ಮಹಿಳಾ ವೈದ್ಯವೋರ್ವಳು ಮ್ಯಾಟ್ರಿಮೋನಿಯಲ್ಲಿ ತನ್ನ ಹೆಸರು ನೋಂದಣಿ ಮಾಡಿ ಕೆಲ ದುಷ್ಕರ್ಮಿಗಳಿಂದ ವಂಚನೆಗೊಳಗಾಗಿರುವ ಘಟನೆ ನಡೆದಿದ್ದು, ಅದನ್ನ ಬೇಧಿಸುವಲ್ಲಿ ಸೈಬರಾಬಾದ್ ಪೊಲೀಸ್ ಆಯುಕ್ತ ವಿಶ್ವನಾಥ್ ಸಜ್ಜನವರ್​ ನೇತೃತ್ವದ ತಂಡ ಯಶಸ್ವಿಯಾಗಿದೆ.

Matrimonial fraud
Matrimonial fraud

By

Published : Mar 12, 2020, 8:45 AM IST

ಹೈದರಾಬಾದ್​​:ಗಂಡನಿಂದ ಡೈವೋರ್ಸ್​ ಪಡೆದುಕೊಂಡಿದ್ದ ಮಹಿಳಾ ವೈದ್ಯೆವೋರ್ವಳು ಮ್ಯಾಟ್ರಿಮೋನಿಯಲ್ಲಿ ತನ್ನ ಪ್ರೊಫೈಲ್​ ನೋಂದಾಯಿಸಿಕೊಂಡು ವಂಚನೆಗೆ ಒಳಗಾಗಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದ್ದು, ನಾಲ್ವರು ವಿದೇಶಿಗರು ಆಕೆಗೆ ಮೋಸ ಮಾಡಿದ್ದಾರೆ.

ಮ್ಯಾಟ್ರಿನೋನಿಯಲ್ಲಿ ತನ್ನ ಪ್ರೊಫೈಲ್​ ನೋಂದಾಯಿಸಿದ್ದ ವ್ಯಕ್ತಿಯೋರ್ವ ತಾನು ಯುಕೆಯಲ್ಲಿ ಶಸ್ತ್ರಚಿಕಿತ್ಸಕನಾಗಿ ಕೆಲಸ ಮಾಡುತ್ತಿರುವುದಾಗಿ ನಂಬಿಸಿ ವೈದ್ಯೆಯ ವಾಟ್ಸಪ್​ ನಂಬರ್​ಗೆ ಸಂದೇಶ ರವಾನೆ ಮಾಡಿ, ಆಕೆ ಜತೆ ಸಂಪರ್ಕ ಹೊಂದಿದ್ದಾನೆ. ಇದೇ ವೇಳೆ ಆಕೆಯನ್ನ ಮದುವೆಯಾಗುವುದಾಗಿ ನಂಬಿಸಿದ್ದಾನೆ.

ಹೈದರಾಬಾದ್​ನ ಮಹಿಳಾ ವೈದ್ಯೆಗೆ ವಿದೇಶಿಗರಿಂದ ವಂಚನೆ

ಕೆಲ ದಿನಗಳ ನಂತರ ವೈದ್ಯೆಗೆ ಕೆಲವೊಂದು ಚಿನ್ನದ ಆಭರಣ, ಮೊಬೈಲ್​ ಫೋನ್​, ಕೈಗಡಿಯಾರ ಹಾಗೂ ಕೆಲವೊಂದು ಡಾಲರ್​​​ ಕೊರಿಯರ್​ ಮೂಲಕ ಉಡುಗೊರೆಯಾಗಿ ಕಳುಹಿಸಿಕೊಡುವುದಾಗಿ ತಿಳಿಸಿದ್ದಾನೆ. ಇದೇ ನೆಪದಲ್ಲಿ ಕೊರಿಯರ್​ ವ್ಯಕ್ತಿಯಾಗಿ ನಟಿಸಿ ವೈದ್ಯೆಯನ್ನ ಸಂಪರ್ಕಿಸಿದ ಆತ, ಉಡುಗೊರೆ ಪಡೆದುಕೊಳ್ಳಲು ಎರಡು ಕಂತುಗಳಲ್ಲಿ 12.45 ಲಕ್ಷ ರೂ. ಪಡೆದುಕೊಂಡಿದ್ದಾನೆ. ತಾನು ವಂಚನೆಗೊಳಗಾಗಿರುವ ಮಾಹಿತಿ ಗೊತ್ತಾಗುತ್ತಿದ್ದಂತೆ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಪ್ರಕರಣ ಸಂಬಂಧ ಈಗಾಗಲೇ ಆರೋಪಿಯಿಂದ 18 ಮೊಬೈಲ್​ ಹಾಗೂ 3,05,076 ರೂ. ನಗದು ವಶಕ್ಕೆ ಪಡೆದುಕೊಂಡಿದ್ದು, ಓರ್ವ ನೈಜಿರಿಯನ್​ ಹಾಗೂ ಮೂವರು ನೇಪಾಳಿ ವ್ಯಕ್ತಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಸೈಬರಾಬಾದ್ ಪೊಲೀಸ್ ಆಯುಕ್ತ ವಿಶ್ವನಾಥ್​ ಸಜ್ಜನವರ್​, ಆರೋಪಿಗಳನ್ನ ಈಗಾಗಲೇ ವಶಕ್ಕೆ ಪಡೆದುಕೊಳ್ಳಲಾಗಿದೆ. ವಿಚಾರಣೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ABOUT THE AUTHOR

...view details