ಠಾಣೆ(ಮಹಾರಾಷ್ಟ್ರ):ಮಹಾರಾಷ್ಟ್ರದ ಕೊರೊನಾ ವೈರಸ್ ಕ್ಯಾರಂಟೈನ್ ಕೇಂದ್ರದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ವ್ಯಕ್ತಿಯೊಬ್ಬರು ಗಾಯಗೊಂಡು ಸದ್ಯ ಠಾಣೆಯ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕ್ವಾರಂಟೈನ್ ಕೇಂದ್ರದಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಕಾಲು ಮುರಿದುಕೊಂಡ ವ್ಯಕ್ತಿ - ಕೊರೊನಾ ವೈರಸ್ ನ್ಯೂಸ್
ಕೊರೊನಾ ವೈರಸ್ ಕ್ಯಾರೆಂಟೈನ್ ಕೇಂದ್ರದಿಂದ ತಪ್ಪಿಸಿಕೊಳ್ಳಲು ಕಟ್ಟಡದಿಂದ ಜಿಗಿದು ಕಾಲುಗಳನ್ನು ಮುರಿದುಕೊಂಡ ವ್ಯಕ್ತಿ ಸದ್ಯ ಥಾಣೆಯ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ
ಕ್ವಾರಂಟೈನ್ ಕೇಂದ್ರದಿಂದ ತಪ್ಪಿಸಿಕೊಳ್ಳಲೆತ್ನಿಸಿ ಕಾಲು ಮುರಿದುಕೊಂಡ ವ್ಯಕ್ತಿ
ಏಪ್ರಿಲ್ 18 ರಿಂದ 44 ವರ್ಷದ ಮುಂಬೈನ ಚೆಂಬೂರು ನಿವಾಸಿಯನ್ನು ಮಹಾನಗರ ಪಾಲಿಕೆ ವಸತಿ ಸಮುಚ್ಚಯದ ಕೊರೊನಾ ಕ್ವಾರಂಟೈನ್ ಕೇಂದ್ರದ ಮೂರನೇ ಮಹಡಿಯಲ್ಲಿರಿಸಲಾಗಿತ್ತು. ಆತ ಭಾನುವಾರ ಅಲ್ಲಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಕಿಟಕಿಯಿಂದ ಹೊರಗೆ ಹಾರಿದ್ದು, ಕಾಲುಗಳು ಮುರಿದುಹೋಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಐಪಿಸಿ ಸೆಕ್ಷನ್ 188, 271 ಮತ್ತು 338 ಅಡಿಯಲ್ಲಿ ವ್ಯಕ್ತಿಯ ವಿರುದ್ಧ ಕೊಂಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.