ಕರ್ನಾಟಕ

karnataka

ETV Bharat / bharat

ಗರ್ಲ್​ಫ್ರೆಂಡ್​​ ಸಹೋದರನಿಂದ ಯುವಕನ ಬರ್ಬರ ಕೊಲೆ! - ಯುವಕನ ಬರ್ಬರ ಕೊಲೆ

ಪರಸ್ಪರ ಪ್ರೀತಿಸುತ್ತಿದ್ದ ಹುಡುಗಿ-ಹುಡುಗನ ನಡುವೆ ವೈಮನಸ್ಸು ಉಂಟಾಗಿ ಬ್ರೇಕ್​ ಅಪ್​ ಮಾಡಿಕೊಳ್ಳಲು ಮುಂದಾಗಿದ್ದು, ಈ ವೇಳೆ ಹುಡುಗನ ಭೀಕರ ಕೊಲೆ ಮಾಡಲಾಗಿದೆ.

Man killed by the brother of his Girlfriend
Man killed by the brother of his Girlfriend

By

Published : Jun 7, 2020, 4:30 AM IST

ಕಡಲೂರು (ತಮಿಳುನಾಡು):ತಾನು ಪ್ರೀತಿಸುತ್ತಿದ್ದ ಗರ್ಲ್​ಫ್ರೆಂಡ್​ ಸಹೋದರನಿಂದ ಯುವಕನೋರ್ವನ ಬರ್ಬರ ಕೊಲೆಯಾಗಿರುವ ಘಟನೆ ತಮಿಳುನಾಡಿನ ಕಡಲೂರು ಬಳಿಯ ಚಿದಂಬರಂ ಎಂಬಲ್ಲಿ ನಡೆದಿದೆ.

ಚಿದಂಬರಂ ವಿಒಸಿ ನಗರದಲ್ಲಿ 21 ವರ್ಷದ ಅನ್ಬಾಲಗನ್​ ವಾಸವಾಗಿದ್ದು, ಹತ್ತಿರದ ತರಕಾರಿ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದನು. ಅರಂಗನಾಥನ್​ ಬೀದಿಯಲ್ಲಿ ವಾಸವಾಗಿದ್ದ 16 ವರ್ಷದ ಬಾಲಕಿಯನ್ನ ಈತ ಪ್ರೀತಿಸುತ್ತಿದ್ದನು.

ಅವರಿಬ್ಬರ ನಡುವೆ ಕೆಲವೊಂದು ಸಮಸ್ಯೆ ಉದ್ಭವವಾಗಿದ್ದು, ಅದು ಕುಟುಂಬದ ಸದಸ್ಯರಿಗೆ ಗೊತ್ತಾಗಿದೆ. ಹೀಗಾಗಿ ಆತನೊಂದಿಗಿನ ಸಂಬಂಧ ಮುರಿದುಕೊಳ್ಳಲು ಸಿದ್ಧಳಾಗಿದ್ದಾಳೆ. ಈ ವೇಳೆ ಆಕೆ ಜತೆ ಮಾತನಾಡಲು 21 ವರ್ಷದ ಅನ್ಭಾಲಗನ್​ ಹುಡುಗಿ ಮನೆಗೆ ತೆರಳಿದ್ದಾನೆ. ಈ ವೇಳೆ ಹುಡುಗಿಯ 17 ವರ್ಷದ ಸಹೋದರ ಆತನ ಮೇಲೆ ಹಲ್ಲೆ ಮಾಡಿ ತನ್ನ ಸ್ನೇಹಿತರೊಂದಿಗೆ ಕೊಲೆ ಮಾಡಿದ್ದಾನೆ.

ತದನಂತರ ಸ್ಥಳದಿಂದ ಪರಾರಿಯಾಗಿದ್ದಾರೆ. ಈಗಾಗಲೇ ಬಾಲಕಿಯ ಕುಟುಂಬದ ಸದಸ್ಯರ ಬಂಧನ ಮಾಡಲಾಗಿದ್ದು, ಆತನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ABOUT THE AUTHOR

...view details