ತಿರುವನಂತಪುರಂ:ಶನಿವಾರ ಮುಂಜಾನೆ ಮನೆಯೊಳಗೆ ಮಲಗಿದ್ದ 39 ವರ್ಷದ ಮಹಿಳೆ ಮೇಲೆ ಆ್ಯಸಿಡ್ ಸುರಿಯಲಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಲಗಿದ್ದ ಮಹಿಳೆ ಮೇಲೆ ಆ್ಯಸಿಡ್ ಸುರಿದ ಕಿರಾತಕ: ಸಂತ್ರಸ್ತೆ ಸ್ಥಿತಿ ಗಂಭೀರ
ಮನೆಯೊಳಗೆ ಮಲಗಿದ್ದ 39 ವರ್ಷದ ಮಹಿಳೆ ಮೇಲೆ ಆ್ಯಸಿಡ್ ಸುರಿದಿರುವ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ.
ಮಲಗಿದ್ದ ಮಹಿಳೆ ಮೇಲೆ ಆಸಿಡ್ ಸುರಿದ ಹಂತಕ: ಮಹಿಳೆ ಸ್ಥಿತಿ ಗಂಭೀರ
ಮಹಿಳೆ ಟೆಕ್ನೊಪಾರ್ಕ್ನ ಕಂಪನಿಯೊಂದರಲ್ಲಿ ಸ್ಚಚ್ಛತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಳು. ಸದ್ಯ ಪೊಲೀಸರು ಈ ಸಂಬಂಧ 34 ವರ್ಷದ ವ್ಯಕ್ತಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಆತ ಮಹಿಳೆಯ ಮನೆ ಕಿಟಕಿಯ ಗಾಜಿನ ಫಲಕಗಳನ್ನು ಮುರಿದು ಆಕೆಯ ಮೇಲೆ ಆ್ಯಸಿಡ್ ಸುರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಮಹಿಳೆಯನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.