ಅಹಮದಾಬಾದ್:ನೂತನ ಮೋಟಾರು ವಾಹನ (ತಿದ್ದುಪಡಿ) ಕಾಯ್ದೆಯು ವಾಹನ ಸವಾರರನ್ನು ಹೈರಾಣ ಮಾಡಿರುವ ಬೆನ್ನಲ್ಲೇ, ಅಹಮದಾಬಾದ್ ಯುವಕನೋರ್ವನ ತಲೆ ಗಾತ್ರಕ್ಕೆ ಹೊಂದಿಕೊಳ್ಳದ ಹೆಲ್ಮೆಟ್ನಿಂದ ಪೊಲೀಸರು ಇಕ್ಕಟ್ಟಿಗೆ ಸಿಲುಕಿದ ಪ್ರಸಂಗ ನಡೆದಿದೆ.
ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ಝಾಕಿ ಎಂಬವರನ್ನು ಸಂಚಾರಿ ಪೊಲೀಸರು ರಸ್ತೆಯಲ್ಲಿ ಅಡ್ಡ ಗಟ್ಟಿದ್ದಾರೆ. ಈ ವೇಳೆ ಶಿರಸ್ತ್ರಾಣ ಧರಿಸದೇ ಇರುವುದಕ್ಕೆ ಆತ ತನ್ನ ಅಸಹಾಯಕತೆ ತೋಡಿಕೋಂಡಿದ್ದಾನೆ. ನನ್ನ ತಲೆ ದೊಡ್ಡದು. ಅದ್ರ ಗಾತ್ರಕ್ಕೆ ಹೊಂದಾಣಿಕೆಯಾಗುವ ಹೆಲ್ಮೆಟ್ ಸಿಗುತ್ತಿಲ್ಲ. ಹೀಗಾಗಿ, ಹೆಲ್ಮೆಟ್ ಇಲ್ಲದೆ ಸಂಚರಿಸುತ್ತಿದ್ದೇನೆ ಎಂದು ಹೇಳಿದ್ದಾನೆ.