ನವದೆಹಲಿ: ಕಾಶ್ಮೀರದ ಮಕ್ಕಳು ಮರಳಿ ಶಾಲೆಗೆ ಹೋಗಲು ವಿಶ್ವಸಂಸ್ಥೆ ನೆರವಾಗಬೇಕು ಎಂದು ಪಾಕಿಸ್ತಾನದ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮತ್ತು ಶಿಕ್ಷಣ ಹಕ್ಕುಗಳ ಹೋರಾಟಗಾರ್ತಿ ಮಲಾಲ ಯೂಸುಫ್ ಝಾಯಿ ಟ್ವಿಟ್ಟರ್ನಲ್ಲಿ ಮನವಿ ಮಾಡಿದ್ದಾರೆ.
ಕಳೆದ ವಾರ ನಾನು ಕಾಶ್ಮೀರದಲ್ಲಿ ವಾಸಿಸುವ ಮತ್ತು ಕರ್ತವ್ಯ ನಿರ್ವಹಿಸುತ್ತಿರುವ ಪತ್ರಕರ್ತರು, ಮಾನವ ಹಕ್ಕುಗಳ ಹೋರಾಟಗಾರರು, ವಕೀಲರು ಮತ್ತು ವಿದ್ಯಾರ್ಥಿಗಳೊಂದಿಗೆ ಮಾತನಾಡಿದ್ದೇನೆ. ಅಲ್ಲಿನ ಯುವತಿಯರೊಂದಿಗೆ ನೇರವಾಗಿ ಮಾತನಾಡಲು ಪ್ರಯತ್ನಿಸಿದೆ. ಅಲ್ಲಿನ ಮೂವರು ಯುವತಿಯರು ಹೇಳುವ ಪ್ರಕಾರ ಕಾಶ್ಮೀರ ಸದ್ಯಕ್ಕೆ ನಿಶ್ಯಬ್ದವಾಗಿದೆ. ಏನಾಗುತ್ತಿದೆ ಎಂದು ತಿಳಿದುಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಕಿಟಕಿ ಮೂಲಕ ಭದ್ರತಾ ಪಡೆಗಳ ಹೆಜ್ಜೆಗಳ ಶಬ್ದವೊಂದೆ ನಮ್ಮ ಕಿವಿಗೆ ಕೇಳುತ್ತಿರುವುದು ತುಂಬಾ ಭಯವಾಗುತ್ತಿದೆ ಎಂದಿದ್ದಾರೆ.
ಅಲ್ಲದೆ, ಆಗಸ್ಟ್ನಲ್ಲಿ ಪರೀಕ್ಷೆ ಬರೆಯಬೇಕಿತ್ತು, ಅದೂ ಕೂಡ ಸಾಧ್ಯವಾಗಿಲ್ಲ. ಶಾಲೆಗೆ ಹೋಗಲು ಆಗುತ್ತಿಲ್ಲ. ನಾನೊಬ್ಬ ಉತ್ತಮ ಬರಹಗಾರ್ತಿ ಆಗಬೇಕಿಂದಿದ್ದೆ. ಆದರೆ ಇದೇ ಪರಿಸ್ಥಿತಿ ಮುಂದುವರೆದರೆ ಅದು ಆಸಾಧ್ಯವೆನಿಸುತ್ತದೆ. ಇದರಿಂದ ಖಿನ್ನತೆಗೆ ಒಳಗಾಗಿದ್ದೇನೆ ಎಂದು ಅಳಲು ತೋಡಿಕೊಂಡಿದ್ದಾರೆ ಅಂತಾ ಮಲಾಲ ಟ್ವೀಟ್ ಮಾಡಿದ್ದಾರೆ.