ಕರ್ನಾಟಕ

karnataka

ETV Bharat / bharat

ಲಾಕ್​ಡೌನ್​ ಅವಧಿಯಲ್ಲಿ ಕೃಷಿ ರಂಗಕ್ಕೆ ಸ್ವಲ್ಪ ರಿಲೀಫ್​ ಘೋಷಿಸಿದ ಸಚಿವಾಲಯ

ಲಾಕ್​ ಡೌನ್​ ಹಿನ್ನೆಲೆಯಲ್ಲಿ ಕೃಷಿ ರಂಗಕ್ಕೆ ತೊಂದರೆಯಾಗಬಾರದೆಂಬ ಉದ್ದೇಶಕ್ಕೆ ಕೇಂದ್ರ ಕೃಷಿ ಸಚಿವಾಲಯ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದೆ.

Agriculture Sector
ಕೃಷಿ ರಂಗ

By

Published : Apr 8, 2020, 12:43 PM IST

ನವದೆಹಲಿ: ಲಾಕ್​ಡೌನ್​ ಹಿನ್ನೆಲೆಯಲ್ಲಿ ಕೃಷಿ ರಂಗಕ್ಕೆ ಕೆಲವೊಂದು ರಿಲೀಫ್​ಗಳನ್ನು ಕೇಂದ್ರ ಕೃಷಿ ಸಚಿವಾಲಯ ಘೋಷಿಸಿದೆ. ಇದರಿಂದಾಗಿ ಕೃಷಿಕರು ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.

ಕೃಷಿ ವಲಯಕ್ಕೆ ಸಂಬಂಧಿಸಿದ ಟ್ರಕ್​ಗಳಿಗೆ ಒಂದೆಡೆಯಿಂದ ಮತ್ತೊಂದೆಡೆ ಸರಕು ಮತ್ತು ಸೇವೆಗಳನ್ನು ಸಾಗಿಸಲು ಅನುಮತಿ ನೀಡಲಾಗಿದೆ. ಕೃಷಿಗೆ ರಾಸಾಯನಿಕ ಗೊಬ್ಬರ, ಬೀಜ ಪೂರೈಸುವ ಅಂಗಡಿಗಳು ಮಳಿಗೆಗಳು ಹಾಗೂ ಕೃಷಿ ಸಾಧನಗಳನ್ನು ಪೂರೈಸುವ ಮಳಿಗೆಗಳಿಗೆ ಕೆಲವು ನಿರ್ಬಂಧಗಳೊಂದಿಗೆ ತೆರೆಯಲು ಅನುಮತಿಸಲಾಗಿದೆ.

ಕೃಷಿ ಉತ್ಪನ್ನಗಳ ರಫ್ತಿಗೆ ಯಾವುದೇ ನಿಯಂತ್ರಣವಿಲ್ಲ. ಕಾಫಿ ಹಾಗೂ ಟೀ ತೋಟಗಳಲ್ಲಿ ಶೇ 50ರಷ್ಟು ಕಾರ್ಮಿಕರು ಮಾತ್ರ ಕಾರ್ಯನಿರ್ವಹಿಸಬೇಕು. ಈ ವೇಳೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಕೇಂದ್ರ ಕೃಷಿ ಸಚಿವಾಲಯ ಸೂಚಿಸಿದೆ.

ABOUT THE AUTHOR

...view details