ಕರ್ನಾಟಕ

karnataka

ETV Bharat / bharat

ದೇಶದಲ್ಲಾದ ಪ್ರಮುಖ ಅನಿಲ ಸೋರಿಕೆ ಅವಘಡಗಳು ಯಾವುವು ಗೊತ್ತಾ?.. ಇಲ್ಲಿದೆ ಹಿಸ್ಟರಿ!

ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಸಂಭವಿಸಿರುವ ಇಂದಿನ ಅನಿಲ ದುರಂತ, ದೇಶದಲ್ಲಾದ ಪ್ರಮುಖ ಅನಿಲ ದುರಂತಗಳನ್ನು ನೆನಪಿಸಿದೆ.

Major gas leak accidents in India
ಅನಿಲ ದುರಂತ

By

Published : May 7, 2020, 2:11 PM IST

Updated : May 7, 2020, 2:38 PM IST

ದೇಶದಲ್ಲಿ ನಡೆದ ಇತ್ತೀಚಿನ ದುರಂತಗಳ ಪಟ್ಟಿ ಹೀಗಿದೆ...

06.02.2020:ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ರಾಸಾಯನಿಕ ಕಾರ್ಖಾನೆಯಿಂದ ವಿಷಕಾರಿ ಅನಿಲ ಸೋರಿಕೆಯಿಂದಾಗಿ ಮೂವರು ಮಕ್ಕಳು ಸೇರಿದಂತೆ ಕನಿಷ್ಠ ಏಳು ಮಂದಿ ಸಾವನ್ನಪ್ಪಿದ್ದರು.

12.05.2019: ಮಹಾರಾಷ್ಟ್ರ ತಾರಾಪುರದ ರಾಸಾಯನಿಕ ಘಟಕದಲ್ಲಿ ವಿಷಕಾರಿ ಅನಿಲವನ್ನು ಉಸಿರಾಡಿ ಘಟಕದ ಮೇಲ್ವಿಚಾರಕ ಸೇರಿದಂತೆ 3 ನೌಕರರು ಮೃತಪಟ್ಟಿದ್ದರು.

03.12.2018: ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ರಾಸಾಯನಿಕ ಸ್ಥಾವರದಿಂದ ಸೋರಿಕೆಯಾದ ಅಮೋನಿಯಾ ಅನಿಲ ಉಸಿರಾಡಿ 14 ಜನರನ್ನು ಆಸ್ಪತ್ರೆಗೆ ದಾಖಲಾಗಿದ್ದರು.

12.07.2018:ಆಂಧ್ರಪ್ರದೇಶದ ಅನಂತಪುರಂನಲ್ಲಿ ಅನಿಲ ಸೋರಿಕೆಯಿಂದ ಉಕ್ಕಿನ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಆರು ಕಾರ್ಮಿಕರು ಸಾವನ್ನಪ್ಪಿದ್ದರು.

03.07.2018: ಉತ್ತರ ಪ್ರದೇಶದ ಉನ್ನಾವೋ ಕಾರ್ಖಾನೆಯಲ್ಲಿ ಅನಿಲ ಸೋರಿಕೆಯಾದ ನಂತರ 3 ಮಂದಿ ಸಾವನ್ನಪ್ಪಿ ಇಬ್ಬರು ಗಂಭೀರವಾಗಿದ್ದರು.

03.05.2018: ಗುಜರಾತ್​ನ ಭರೂಚ್ ಜಿಲ್ಲೆಯಲ್ಲಿ ತ್ಯಾಜ್ಯ ಮರುಬಳಕೆ ಘಟಕದಲ್ಲಿ ಅನಿಲ ಸೋರಿಕೆ ಸಂಭವಿಸಿ 3 ಕಾರ್ಮಿಕರ ಸಾವು.

08.05.2017: ದೆಹಲಿಯ ತುಘಲಕಾಬಾದ್ ಪ್ರದೇಶದಲ್ಲಿ ವಿಷಕಾರಿ ಅನಿಲ ಸೋರಿಕೆಯಾಗಿ ರಾಣಿ ಝಾನ್ಸಿ ಸರ್ವೋದಯ ಕನ್ಯೆ ಬಾಲಕಿಯರ ಶಾಲೆಯ 475 ವಿದ್ಯಾರ್ಥಿಗಳು ಮತ್ತು ಒಂಬತ್ತು ಶಿಕ್ಷಕರು ಆಸ್ಪತ್ರೆಗೆ ದಾಖಲಾಗಿದ್ದರು.

15.03.2017: ಕೋಲ್ಡ್ ಸ್ಟೋರೇಜ್‌ನ ಗ್ಯಾಸ್ ಚೇಂಬರ್‌ನಿಂದ ಅಮೋನಿಯಾ ಸೋರಿಕೆಯಾದ ಪರಿಣಾಮ ಕಟ್ಟಡದ ಮೇಲ್ಛಾವಣಿ ಕುಸಿದು 9 ಜನರು ಸಾವನ್ನಪ್ಪಿದ್ದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿತ್ತು.

03.11.2016:ಗುಜರಾತ್ ನರ್ಮದಾ ಕಣಿವೆ ರಸಗೊಬ್ಬರಗಳು ಮತ್ತು ರಾಸಾಯನಿಕ ಲಿ(ಜಿಎನ್‌ಎಫ್‌ಸಿ). ರಾಸಾಯನಿಕ ಘಟಕದಲ್ಲಿವಿಷಕಾರಿ ರಂಜಕದ ಅನಿಲ ಸೋರಿಕೆಯಾಗಿ, ಭರೂಚ್​ನ ಹಳ್ಳಿಯೊಂದರ 4 ಕಾರ್ಮಿಕರು ಸಾವನ್ನಪ್ಪಿ, 13 ಮಂದಿ ಗಾಯಗೊಂಡಿದ್ದರು.

2016 : ಗುಜರಾತ್‌ನ ವಡೋದರಾ ಜಿಲ್ಲೆಯ ಪೋರ್ ಗ್ರಾಮದಲ್ಲಿ ಸಿಲಿಂಡರ್‌ನಿಂದ ಕ್ಲೋರಿನ್ ಅನಿಲ ಸೋರಿಕೆಯಾಗಿ 20 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

13.07.2014: ಛತ್ತೀಸ್​ಗಢದ ಭಿಲಾಯ್ ಸ್ಟೀಲ್ ಪ್ಲಾಂಟ್‌ನಲ್ಲಿ ಅನಿಲ ಸೋರಿಕೆಯಿಂದ ಉಪ ವ್ಯವಸ್ಥಾಪಕ ಬಿ.ಕೆ. ಸಿಂಘಾಲ್ ಮತ್ತು ಎನ್‌.ಕೆ. ಕಟಾರಿಯಾ ಸೇರಿದಂತೆ 5 ಉನ್ನತ ಅಧಿಕಾರಿಗಳು ಸಾವನ್ನಪ್ಪಿದ್ದರು. ಘಟನೆಯಲ್ಲಿ 50 ಜನರು ಗಾಯಗೊಂಡಿದ್ದಾರೆ.

27.08.2014:ಪಶ್ಚಿಮ ಬಂಗಾಳದ ಬುರ್ದ್ವಾನ್‌ನಲ್ಲಿ ನಡೆದ ವೆಲ್ಡಿಂಗ್ ಕಾರ್ಯಾಗಾರದಲ್ಲಿ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾದ ಪರಿಣಾಮ ಇಬ್ಬರು ಮಹಿಳೆಯರು ಸಾವನ್ನಪ್ಪಿ, 50 ಮಂದಿ ಗಾಯಗೊಂಡಿದ್ದರು.

07.08.2014: ಕೇರಳದ ಕೊಲ್ಲಂನಲ್ಲಿ ಸರ್ಕಾರಿ ಸ್ವಾಮ್ಯದ ಸ್ಥಾವರದಿಂದ ಅನಿಲ ಸೋರಿಕೆಯಾಗಿ 70 ಮಕ್ಕಳು ಅನಾರೋಗ್ಯಕ್ಕೆ ಒಳಗಾಗಿದ್ದರು. ಸ್ಥಾವರದಿಂದ ಹೊರಹೊಮ್ಮಿದ ವಿಷಕಾರಿ ಹೊಗೆಯನ್ನು ಉಸಿರಾಡಿದ ನಂತರ ಮಕ್ಕಳು ಅನಾರೋಗ್ಯಕ್ಕೆ ಒಳಗಾಗಿದ್ದರು.

05.06.2014: ತಮಿಳುನಾಡಿನ ಟುಟಿಕಾರಿನ್​​ನಲ್ಲಿ 'ನಿಲಾ' ಮೀನು ಸಂಸ್ಕರಣಾ ಘಟಕದಲ್ಲಿ ಅಮೋನಿಯಾ ಅನಿಲ ಪೈಪ್​ಲೈನ್ ​​ಸ್ಫೋಟಗೊಂಡು 54 ಮಹಿಳೆಯರು ಪ್ರಜ್ಞೆ ತಪ್ಪಿದ್ದರು.

18.03.2014: ತಮಿಳುನಾಡಿನ ಈರೋಡ್​ನಲ್ಲಿ ವಿಷಕಾರಿ ಅನಿಲವನ್ನು ಉಸಿರಾಡಿ ಡೈಯಿಂಗ್ ಪ್ಲಾಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಏಳು ಕಾರ್ಮಿಕರು ಉಸಿರುಗಟ್ಟಿಸಿ ಸಾವನ್ನಪ್ಪಿದ್ದರು.

23.03.2013: ಸ್ಥಾವರದಿಂದ ಹೊರಹೊಮ್ಮಿದ ಸಲ್ಫರ್ ಡೈಆಕ್ಸೈಡ್ ಎನ್ನಲಾದ ವಿಷಕಾರಿ ರಾಸಾಯನಿಕ ಅನಿಲವು ಜನರಿಗೆ ಉಸಿರುಗಟ್ಟುವಂತೆ ಮಾಡಿ ತಮಿಳುನಾಡಿನ ತೂತುಕುಡಿ ಗ್ರಾಮದ ಒಬ್ಬರು ಸಾಯುವಂತೆ ಮಾಡಿತ್ತು.

02.08.2011: ಕರ್ನಾಟಕದ ಜಿಂದಾಲ್ ಸ್ಟೀಲ್ ಪ್ಲಾಂಟ್‌ನಲ್ಲಿ ಸೋರಿಕೆಯಾದ ವಿಷಕಾರಿ ಅನಿಲ ಉಸಿರಾಡಿ ಮೂವರು ಕಾರ್ಮಿಕರು ಸಾವನ್ನಪ್ಪಿದ್ದರು.

16.07.2010: ಪಶ್ಚಿಮ ಬಂಗಾಳದ ದುರ್ಗಾಪುರ ಉಕ್ಕಿನ ಸ್ಥಾವರದಲ್ಲಿ ಇಂಗಾಲದ ಮಾನಾಕ್ಸೈಡ್ ಉಸಿರಾಡಿ 25 ಜನರು ಅನಾರೋಗ್ಯಕ್ಕೆ ತುತ್ತಾಗಿದ್ದರು.

12.11.2006: ಗುಜರಾತ್​ನ ಭರೂಚ್‌ನ ಅಂಕಲೇಶ್ವರ ಪಟ್ಟಣದ ತೈಲ ಕಾರ್ಖಾನೆಯಿಂದ ಅನಿಲ ಸೋರಿಕೆಯಾಗಿ 3 ಜನರು ಸಾವನ್ನಪ್ಪಿದ್ದರು.

02.12.1984: ದೇಶದ ಅತಿ ದೊಡ್ಡ ಅನಿಲ ದುರಂತವಾದ ಭೋಪಾಲ್‌ನ ಯೂನಿಯನ್ ಕಾರ್ಬೈಡ್ ಸ್ಥಾವರದಲ್ಲಿ 30 ಟನ್‌ಗಿಂತಲೂ ಹೆಚ್ಚು ವಿಷಕಾರಿ ಅನಿಲ ಸೋರಿಕೆಯಾಗಿ ಮಹಾದುರಂತ ಸಂಭವಿಸಿತ್ತು. ಘಟನೆಯಿಂದಾಗಿ ಸಾವಿನ ಕನಿಷ್ಠ 3,787 ಜನಸಾವನ್ನಪ್ಪಿದ್ದರು. ಈ ಅನಿಲ ಸೋರಿಕೆಯ ಪರಿಣಾಮವಾಗಿ ಒಟ್ಟು 16,000 ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ.

Last Updated : May 7, 2020, 2:38 PM IST

ABOUT THE AUTHOR

...view details