ಕರ್ನಾಟಕ

karnataka

ETV Bharat / bharat

ಮುರ್ಷಿದಾಬಾದ್‌ ಕಾಲೇಜಿನ ಮೆರಿಟ್ ಲಿಸ್ಟ್​ನಲ್ಲಿ ಧೋನಿ ಹೆಸರು..! - Kandi Raj College in Murshidabad

ಮುರ್ಷಿದಾಬಾದ್​ನ ಕಂದಿ ರಾಜ್ ಕಾಲೇಜು ಬಿಡುಗಡೆ ಮಾಡಿರುವ ಪ್ರಥಮ ವರ್ಷದ ಸ್ನಾತಕೋತ್ತರ ಪದವಿಯ ಗಣಿತಶಾಸ್ತ್ರ ವಿಭಾಗದ ಮೆರಿಟ್ ಲಿಸ್ಟ್​ನಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ಹೆಸರು ಅಗ್ರಸ್ಥಾನದಲ್ಲಿದೆ.

MS DHONI
ಮಹೇಂದ್ರ ಸಿಂಗ್ ಧೋನಿ

By

Published : Oct 2, 2020, 3:44 PM IST

ಮುರ್ಷಿದಾಬಾದ್‌: ಪಶ್ಚಿಮ ಬಂಗಾಳದ ಮುರ್ಷಿದಾಬಾದ್​ನಲ್ಲಿನ ಕಂದಿ ರಾಜ್ ಕಾಲೇಜಿನ ಪ್ರವೇಶ ಪಟ್ಟಿಯಲ್ಲಿ ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಹೆಸರು ಅಗ್ರಸ್ಥಾನದಲ್ಲಿದೆ.

ಕಲ್ಯಾಣಿ ವಿಶ್ವವಿದ್ಯಾಲಯದಡಿ ಬರುವ ಕಂದಿ ರಾಜ್ ಕಾಲೇಜು, ಪ್ರಥಮ ವರ್ಷದ ಸ್ನಾತಕೋತ್ತರ ಪದವಿಯ ಗಣಿತಶಾಸ್ತ್ರ ವಿಭಾಗದ ಮೆರಿಟ್ ಲಿಸ್ಟ್​ ಬಿಡುಗಡೆ ಮಾಡಿದೆ. ಇದರಲ್ಲಿ ಧೋನಿ ಹೆಸರು ಮೊದಲ ಸ್ಥಾನದಲ್ಲಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಲೇಜು ಅಧಿಕಾರಿಗಳು ಯಾರೋ ಉದ್ದೇಶಪೂರ್ವಕವಾಗಿ ಮಹೇಂದ್ರ ಸಿಂಗ್ ಧೋನಿ ಹೆಸರಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.

ಮೆರಿಟ್ ಲಿಸ್ಟ್​ನಲ್ಲಿ ಧೋನಿ ಹೆಸರು

ಕೆಲ ದಿನಗಳ ಹಿಂದೆ ಬಾಲಿವುಡ್ ನಟಿ ಸನ್ನಿ ಲಿಯೋನ್ ಹೆಸರಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಬಿಎ ಇಂಗ್ಲಿಷ್‌ಗೆ ಕೋಲ್ಕತ್ತಾದ ಅಶುತೋಷ್ ಕಾಲೇಜಿನ ಪ್ರವೇಶ ಪಟ್ಟಿಯಲ್ಲಿ ಸನ್ನಿ ಲಿಯೋನ್ ಹೆಸರು ಅಗ್ರಸ್ಥಾನದಲ್ಲಿತ್ತು. ಅಸುತೋಷ್ ಕಾಲೇಜು ತನ್ನ ವೆಬ್‌ಸೈಟ್‌ನಲ್ಲಿ ಅಪ್ಲಿಕೇಶನ್ ಐಡಿ ಮತ್ತು ರೋಲ್ ನಂಬರ್​ನೊಂದಿಗೆ ಮೆರಿಟ್ ಲಿಸ್ಟ್​ ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ ಸನ್ನಿ ಲಿಯೋನ್ 12ನೇ ತರಗತಿ ಪರೀಕ್ಷೆಯ ನಾಲ್ಕು ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನು ತೆಗೆದುಕೊಂಡಿರುವುದಾಗಿ ನಮೂದಿಸಲಾಗಿತ್ತು.

ABOUT THE AUTHOR

...view details