ಕರ್ನಾಟಕ

karnataka

ETV Bharat / bharat

ಮಹಾತ್ಮ ಮತ್ತು ಗುರುದೇವ: ಸದೃಢ ಆತ್ಮ, ಶ್ರೇಷ್ಠ ಕಾವಲುಗಾರ, ಪ್ರಬುದ್ಧ ಮನಸ್ಸುಗಳ ಸೈದ್ಧಾಂತಿಕ ವಿಚಾರ ವೈವಿಧ್ಯ

ರವೀಂದ್ರನಾಥ್ ಠಾಗೂರ್​ ಹಾಗೂ ಗಾಂಧೀಜಿ ನಡುವೆ ಅದೆಷ್ಟೋ ವಿಚಾರಗಳ ಬಗ್ಗೆ ಚರ್ಚೆಗಳು, ತಾವು ಹೊಂದಿದ್ದ ಅಭಿಪ್ರಾಯಗಳಲ್ಲಿದ್ದ ವಿರೋಧಾಭಾಸಗಳು, ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಸಂಪೂರ್ಣ ಸ್ವರಾಜ್ಯ ದಕ್ಕಿಸಿಕೊಳ್ಳುವರೆಗೂ ಮುಂದುವರಿದವು.

ಮಹಾತ್ಮ ಮತ್ತು ಗುರುದೇವ

By

Published : Sep 15, 2019, 2:51 PM IST

Updated : Sep 15, 2019, 3:25 PM IST

20ನೇ ಶತಮಾನದ ಎರಡು ಪ್ರಬುದ್ಧ ಮನಸ್ಸುಗಳು ಹಲವು ವಿಷಯಗಳಲ್ಲಿ ವೈವಿಧ್ಯಮಯ ಹಾಗೂ ವಿಭಿನ್ನ ಅಭಿಪ್ರಾಯ ಹೊಂದಿದ್ದವು. ಆದರೆ ಅವರ ದೃಷ್ಟಿಕೋನಗಳಲ್ಲಿ ವೈವಿಧ್ಯತೆ ಇದ್ದರೂ ಇಬ್ಬರೂ ಸ್ವಾತಂತ್ರ್ಯಕ್ಕಾಗಿ ಒಂದೇ ದೋಣಿಯಲ್ಲಿ ಪಯಣಿಸಿದ ಪ್ರಯಾಣಿಕರಾಗಿದ್ದರು. ಹೌದು, ರವೀಂದ್ರನಾಥ್ ಠಾಗೂರ್​ ಹಾಗೂ ಗಾಂಧೀಜಿ ನಡುವೆ ಅದೆಷ್ಟೋ ವಿಚಾರಗಳ ಬಗ್ಗೆ ಚರ್ಚೆಗಳು, ತಾವು ಹೊಂದಿದ್ದ ಅಭಿಪ್ರಾಯಗಳಲ್ಲಿದ್ದ ವಿರೋಧಾಭಾಸಗಳು, ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಸಂಪೂರ್ಣ ಸ್ವರಾಜ್ಯ ದಕ್ಕಿಸಿಕೊಳ್ಳುವರೆಗೂ ಮುಂದುವರಿದವು.

ಯಾವುದೇ ಬಿಕ್ಕಟ್ಟು ಅಥವಾ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಗಾಂಧೀಜಿಯವರ ವಿಚಾರ ಗ್ರಹಿಕೆ, ನಿಲುವು, ಹಸ್ತಕ್ಷೇಪಗಳನ್ನು ಠಾಗೂರ್​ ಸಾಕಷ್ಟು ಬಾರಿ ಪ್ರಶ್ನಿಸಿದ್ದರು. ವಾಸ್ತವಿಕವಾದಿಗಳಲ್ಲದ ಇಬ್ಬರು ದಾರ್ಶನಿಕರ ನೈತಿಕ ತಳಹದಿಯ ಚಿಂತನೆಗಳು ಸಾಕಷ್ಟು ಭಿನ್ನತೆಯಿಂದಲೇ ಕೂಡಿರುತ್ತಿದ್ದವು.

ಈ ಎರಡೂ ವಿಶೇಷ ವ್ಯಕ್ತಿತ್ವಗಳು ಭಾರತದ ಅವಿಭಾಜ್ಯವಾದ ಹಳ್ಳಿಗಳಲ್ಲಿನ ನಾಗರಿಕತೆಯ ಐತಿಹಾಸಿಕ ತಳಹದಿಯನ್ನು ಕಂಡುಕೊಂಡಿದ್ದವು. ಇಬ್ಬರಲ್ಲೂ ಸ್ವಾವಲಂಬನೆಯ ಛಲವಿತ್ತು. ಬ್ರಿಟಿಷರನ್ನು ತೊಲಗಿಸುವ ಉದ್ದೇಶವಿತ್ತು. ಅಲ್ಲದೇ ಈ ಸ್ವಾವಲಂಬನೆ ಮನೋಭಾವ ಗ್ರಾಮೀಣ ಭಾರತವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಮಾತ್ರವಲ್ಲದೇ ರಾಜಕೀಯವಾಗಿ ಸಬಲೀಕರಣವನ್ನು ಒಳಗೊಂಡಿತ್ತು.

ಸ್ವರಾಜ್ ದಿಟ್ಟ ಮತ್ತು ಸ್ವಾತಂತ್ರ್ಯ ಭಾರತದ ಸ್ಥಾಪನೆಗೆ ಅವಶ್ಯವಾದ ಹೆಜ್ಜೆ ಎಂದು ತಿಳಿದಿದ್ದ ಗಾಂಧೀಜಿ ಸ್ವರಾಜ್‌ಗೆ ಆದ್ಯತೆ ನೀಡಿದ್ರು. ಟಾಗೋರ್‌ಗೆ, ಸ್ವದೇಶಿ ಸಮಾಜವು ಬಹುಪಾಲು ಸೃಜನಶೀಲ ಬೆಳವಣಿಗೆ ಮತ್ತು ವಿಕಾಸದ ವಿಷಯವಾಗಿದ್ದು, ರಾಜಕೀಯದಿಂದ ಸ್ವತಂತ್ರವಾಗಿಬೇಕು ಎಂಬ ನಿಲುವಿತ್ತು. ಆದ್ದರಿಂದ, ಗಾಂಧೀಜಿ ತಮ್ಮ ಎಲ್ಲಾ ಯುವ ಹಿಂಬಾಲಕರಿಗೆ ಅಸಹಾಕಾರ ಚಳವಳಿಯಲ್ಲಿ ಸೇರಲು ಕರೆ ನೀಡುತ್ತಿದ್ದಂತೆಯೇ, 'ಅರಾಜಕತೆ' ಮತ್ತು 'ನಿರಾಕರಣೆ' ಎಂಬ ಬಲಿಪೀಠದಲ್ಲಿ ಯುವ ಜನತೆ ಸ್ವಚಿಂತನೆಯನ್ನು ತ್ಯಾಗ ಮಾಡುವುದು ಬೇಜವಾಬ್ದಾರಿಯುತ ಮತ್ತು ದೀರ್ಘಕಾಲದ ಹಾನಿಯುಂಟಮಾಡಬಲ್ಲದು ಎಂದು ಟ್ಯಾಗೋರ್ ನಿರಾಕರಿಸುತ್ತಿದ್ದರು.

ಗಾಂಧಿಯವರಿಗೆ, ಚರಕ ಜನರನ್ನು ಒಟ್ಟುಗೂಡಿಸುವಿಕೆಯ ಮಹತ್ವದ ಅಸ್ತ್ರವಾಗಿತ್ತು. ಈ ನೂಲುವ ಯಂಚ್ರ ಕಠಿಣತೆ, ಸರಳತೆ ಮತ್ತು ಪ್ರಾಯೋಗಿಕ ತತ್ವಗಳನ್ನು ಸಂಯೋಜಿಸುವ ರಚನಾತ್ಮಕ ಪ್ರತಿಭಟನೆಯ ಪ್ರಬಲ ಸಂಕೇತ. ವಿದೇಶಿ ಆರ್ಥಿಕ ಶೋಷಣೆಯ ವಿರುದ್ಧ ನ್ಯಾಯಯುತ ಧಿಕ್ಕಾರ ಮನೋಭಾವನೆ ಇತ್ತು. ಅಂತಹ 'ಟೋಕನಿಸಂ'ನ ಪರಿಣಾಮಕಾರಿತ್ವದ ಬಗ್ಗೆ ಟ್ಯಾಗೋರ್‌ಗೆ ತಮ್ಮದೇ ಆದ ನಿಲುವಿತ್ತು. ಅವರ ದೃಷ್ಟಿಯಲ್ಲಿ, ಯಾವುದೇ ಮೂಲಭೂತ ಆಸಕ್ತಿಯಲ್ಲಿ ಸಂಘರ್ಷ ಇರಲಾರದು. ವಿಕಸನಗೊಳ್ಳುತ್ತಿರುವ ಜಾಗತಿಕ ತಂತ್ರಜ್ಞಾನಗಳ ಬಳಕೆಯನ್ನು 'ವಿಷ್ಣುವಿನ ಚಕ್ರ' ಎಂದು ಅವರು ಕರೆದರು. ಹಾಗೆಯೇ ಭಾರತದ ಪ್ರಗತಿ ಆರೋಗ್ಯಯುತ ಮತ್ತು ಸ್ವಾವಲಂಬನೆಯಿಂದ ಕೂಡಿರಬೇಕೆಂದೇ ಪ್ರತಿಪಾದಿಸಿದ್ರು.

1934 ರಲ್ಲಿ ಬಿಹಾರವನ್ನು ತಲ್ಲಣಗೊಳಿಸಿದ ಭೂಕಂಪವು, ಅಸ್ಪೃಶ್ಯತೆಗೆ ಸಂಬಂಧಿಸಿದ ದೌರ್ಜನ್ಯಗಳಿಗೆ ದೈವಿಕ ಖಂಡನೆ ಮತ್ತು ಪ್ರತೀಕಾರ ಎಂದು ಗಾಂಧಿ ಕರೆದರು. ಭಾರತೀಯ ಸಮಾಜವು ಮೂಢನಂಬಿಕೆಯ ಅಸ್ಪಷ್ಟತೆಗೆ ಒಳಗಾಗುವುದರಿದ ಉಂಟಾಗುವ ದೀರ್ಘಾವಧಿಯ ಅಪಾಯಗಳ ಬಗ್ಗೆ ಟಾಗೋರು ಕಳವಳ ವ್ಯಕ್ತಪಡಿಸ್ತಾರೆ. ಆದಾಗ್ಯೂ, ನೈಸರ್ಗಿಕ ವಿದ್ಯಮಾನಗಳಲ್ಲಿ ನೈತಿಕ ಕಾರಣವನ್ನು ತಳ್ಳಿಹಾಕುವಷ್ಟರ ಮಟ್ಟಿಗೆ ದೇವರ ಅಸ್ತಿತ್ವವನ್ನು ನಿರ್ಣಾಯಕವಾಗಿ ಓದುವುದು ಮಾನವ ಬೌದ್ಧಿಕ ಶಕ್ತಿಗಳಿಗೆ ಮೀರಿದೆ ಎಂದು ಗಾಂಧಿ ಸಮರ್ಥಿಸಿಕೊಂಡರು.

ಯಂಗ್ ಇಂಡಿಯಾ ಮತ್ತು ಮಾಡರ್ನ್ ರಿವ್ಯೂ ಪತ್ರಿಕೆಗಳಲ್ಲಿ ಪ್ರಕಟವಾದ ಗಾಂಧೀಜಿ ಹಾಗು ಟಾಗೋರ್‌ ಅವರ ತೆರೆದ ಪತ್ರಗಳು ಜನಮಾನಸದಲ್ಲಿ ಅರಿವು ಮೂಡಿಸುವಲ್ಲಿ ಗಮನಾರ್ಹ ಕೆಲಸ ಮಾಡಿವೆ. ಎರಡು ಮಹಾನ್ ವ್ಯಕ್ತಿತ್ವಗಳು ಮತ್ತು ವಿಶೇಷ ಮನಸ್ಸುಗಳು ರಾಷ್ಟ್ರೀಯ ವಿಚಾರದಲ್ಲಿ ಪರಸ್ಪರ ಗೌರವದಿಂದ ಅಥವಾ ರಾಷ್ಟ್ರೀಯತೆಗೆ ತೋರಿದ ಬದ್ಧತೆಯಿಂದ ದೂರವಾಗುತ್ತಿರಲಿಲ್ಲ.

ಆದರೆ, ಬೌದ್ಧಿಕ ವ್ಯತ್ಯಾಸ 'ಮಹಾತ್ಮ ' ಎಂಬುದರ ಬಗ್ಗೆ ಟಾಗೋರ್ ಅವರ ಉನ್ನತ ಗೌರವವನ್ನು ಬದಲಿಸಲು ಕಾರಣವಾಗಲಿಲ್ಲ ಎಂಬುದು ಅತ್ಯಂತ ವಿಶೇಷ. ಮಹಾತ್ಮ ಎಂಬ ಶೀರ್ಷಿಕೆಯನ್ನು ಸ್ವತಃ ಟಾಗೋರ್‌ ಅವರೇ ಗಾಂಧೀಜಿಗೆ 1915 ರ ಹಿಂದೆಯೇ ನೀಡಿದ್ದರು. ಇದು ಗಾಂಧೀಜಿಯವರಿಗೆ ರಾಷ್ಟ್ರೀಯತೆಯ ಬದಲಾಗಿ ಆಂತರಿಕ ಶತ್ರುಗಳೊಂದಿಗೆ ಹೋರಾಡಲು ಕರ್ಣನ ರಕ್ಷಾ ಕವಚದಂತಿತ್ತು.

1919ರ ಜಲಿಯನ್​ ವಾಲಾಬಾಗ್ ಹತ್ಯಾಕಾಂಡಕ್ಕೆ ಅವರು ನೀಡಿದ್ದ ಪ್ರತಿಕ್ರಿಯೆಗಳು ಗಮನಾರ್ಹ ಉದಾಹರಣೆಯಾಗಿವೆ. ಟಾಗೋರ್ ತಮ್ಮ 'ನೈಟ್‌ಹುಡ್' ಪ್ರಶಸ್ತಿಯನ್ನು ವೈಯಕ್ತಿಕ ಪ್ರತಿಭಟನೆಯ ಸೂಚಕವಾಗಿ ತ್ಯಜಿಸಿದ್ದರು. ಗಾಂಧೀಜಿ ಕೂಡ ಹಾಗೆ ಮಾಡುತ್ತಿದ್ದರು. ಅವರ ಗೌರವಾನ್ವಿತ ಪದಕಗಳನ್ನು ಒಪ್ಪಿಸಿ ನಂತರ ಹತ್ಯಾಕಾಂಡದ ಸ್ಥಳದಲ್ಲಿ ಸ್ಮಾರಕವೊಂದಕ್ಕೆ ರಾಷ್ಟ್ರವ್ಯಾಪಿ ಹಣ ಸಂಗ್ರಹಿಸುವ ಅಭಿಯಾನ ಪ್ರಾರಂಭಿಸಿದ್ದರು.

ಇತಿಹಾಸವನ್ನೊಮ್ಮೆ ಹಿಂತಿರುಗಿ ನೋಡಿದಾಗ,1914-15ರಲ್ಲಿ ಶಾಂತಿನಿಕೇತನದಲ್ಲಿರುವ ರವೀಂದ್ರನಾಥ ಟ್ಯಾಗೋರ್ ಅವರ ಶಾಲೆಯು 4 ತಿಂಗಳುಗಳ ಕಾಲ ದಕ್ಷಿಣ ಆಫ್ರಿಕಾದ ಡರ್ಬನ್‌ನ ಫೀನಿಕ್ಸ್‌ನಲ್ಲಿರುವ ಮೋಹನ್‌ದಾಸ್ ಕರಮ್‌ಚಂದ್ ಗಾಂಧಿಯವರ ಶಾಲೆಯ ಹುಡುಗರಿಗೆ ಆತಿಥ್ಯ ವಹಿಸಿತ್ತು.

ಕವಿಯ ಗೆಸ್ಚರ್‌ನಲ್ಲಿನ ಪರಾನುಭೂತಿ ಮತ್ತು ಪ್ರತಿಯಾಗಿ ನಾಯಕನ ನಿರಂತರ ಕೃತಜ್ಞತೆ, ಭಾರತದ ಹೋರಾಟದ ಮೂರು ಅತ್ಯಂತ ಘಟನಾತ್ಮಕ ದಶಕಗಳಲ್ಲಿ ವ್ಯಾಪಿಸಿರುವ ಬೆಚ್ಚಗಿನ ಮತ್ತು ಶ್ರೀಮಂತ ಸ್ನೇಹಕ್ಕಾಗಿ ದನಿ ಹೊಂದಿಸುತ್ತದೆ.
ಟಾಗೋರ್ 1920 ರಲ್ಲಿ ಗುಜರಾತ್‌ನ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ್ದರು. ಗಾಂಧಿಯವರು ಮೊದಲ ಬಾರಿಗೆ 1925 ರಲ್ಲಿ ಶಾಂತಿನಿಕೇತನಕ್ಕೆ ಭೇಟಿ ಕೊಡುತ್ತಾರೆ. ನಂತರ 1940 ರಲ್ಲಿ ಮತ್ತೆ ಅವರು ಭೇಟಿ ನೀಡಿದ್ದರು. ಉಪವಾಸ ಮತ್ತು ಸೆರೆವಾಸದ ಅವಧಿಯಲ್ಲಿ ನಾಯಕನಿಗೆ ಬೆಂಬಲ, ಗಾಂಧಿ ವಿಶ್ವ-ಭಾರತಿಗಾಗಿ 60,000 ರೂಪಾಯಿ ಹಣ ಸಂಗ್ರಹಿಸುವಲ್ಲಿ ಉದಾರವಾಗಿ ಪ್ರಮುಖ ಪಾತ್ರ ವಹಿಸಿದ್ದರು.

ಕುತೂಹಲಕಾರಿ ಸಂಗತಿ ಎಂಬಂತೆ 1930 ರಲ್ಲಿ ಒಂದು ವಿಶಾಲ ಅಥವಾ ಸಾರ್ವತ್ರಿಕವಾದ ಮನಸ್ಸು ಭೂಮಿಯ ಅಸ್ತಿತ್ವವನ್ನು ಒಳಗೊಳ್ಳುತ್ತದೆ ಎಂಬ ಆಲ್ಬರ್ಟ್ ಐನ್‌ಸ್ಟೈನ್ ಅವರ ವೈಜ್ಞಾನಿಕ 'ಭೌತಿಕವಾದ'ವನ್ನು ಠ್ಯಾಗೂರ್​ ಸಮರ್ಥಿಸಿಕೊಂಡಿದ್ದರು. ಎರಡು ವಿಭಿನ್ನ ಮನಸ್ಸುಗಳ ನಡುವಿನ ಈ ಸ್ನೇಹವು ‘ಸಾರ್ವಜನಿಕ ವಲಯ’ ರೂಪುಗೊಳ್ಳಲು ಸಹಾಯ ಮಾಡಿತು. ಇದು ಪ್ರಜಾಪ್ರಭುತ್ವದ ಆಧುನಿಕತೆಯ ಹೆಮ್ಮೆಯ ಪರಂಪರೆಗೆ ಬಹಳ ನಿರ್ಣಾಯಕ ಪಾತ್ರವಹಿಸಿತು. ಮತ್ತೊಂದೆಡೆ, ಅವರು ಚರ್ಚಿಸಿದ ವಿಷಯಗಳು, ಭಾರತ ಮತ್ತು ಅದರ ವಾಸ್ತವಗಳ ದೃಷ್ಟಿಯನ್ನು ಸಮನ್ವಯಗೊಳಿಸುವ ಸವಾಲುಗಳು ಎಲ್ಲಾ ಕಾಲಘಟ್ಟದಲ್ಲಿಯೂ ಪ್ರಸ್ತುತತೆ ಹೊಂದಿದೆ.

ಅನನ್ಯ ಗುಪ್ತಾ,ಪಿ.ಎಚ್​ಡಿ, ಸಹಾಯಕ ಪ್ರಾಧ್ಯಪಕರು, ವಿಶ್ವ ಭಾರತಿ

Last Updated : Sep 15, 2019, 3:25 PM IST

ABOUT THE AUTHOR

...view details