ಮುಂಬೈ:ಮದ್ಯದಂಗಡಿಗಳ ಮುಂದೆ ಜನಸಂದಣಿ ತಪ್ಪಿಸಲು ಮಹಾರಾಷ್ಟ್ರ ಸರ್ಕಾರ ಮನೆಗೆ ಮದ್ಯ ವಿತರಿಸಲು ಅನುಮತಿ ನೀಡಿದೆ.
ಗೃಹ ಇಲಾಖೆ ಹೊರಡಿಸಿರುವ ಈ ಆದೇಶವು, ಮಾರ್ಗಸೂಚಿಗಳನ್ನು ಅಂತಿಮಗೊಳಿಸಿದ ನಂತರವೇ ಜಾರಿಗೆ ಬರಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮದ್ಯ ಪಡೆಯಲು ಅನುಮತಿ ಪಡೆದವರು ಮಾತ್ರ ಮನೆ ಮದ್ಯ ಆರ್ಡರ್ ಮಾಡಬಹುದು. ಮೇ 5ರಿಂದ ಮತ್ತೆ ತೆರೆಯಲು ಅನುಮತಿಸಲಾದ ಮದ್ಯದಂಗಡಿಗಳು ಮಾತ್ರವೇ ಫೋನ್‌ನಲ್ಲಿ ಆರ್ಡರ್ ಪಡೆಯಬಹುದು. ಮದ್ಯದಂಗಡಿಗಳ ಮುಂದೆ ಜನಸಂದಣಿಯನ್ನು ತಪ್ಪಿಸುವುದು ಮತ್ತು ವೈರಸ್ ಹರಡುವುದನ್ನು ತಡೆಯಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
"ಈ ಬಗ್ಗೆ ಇಂದು ಆದೇಶ ಹೊರಡಿಸಲಾಗಿದೆ. ಆದರೆ ವಿವರವಾದ ಮಾರ್ಗಸೂಚಿಗಳನ್ನು ರೂಪಿಸುವವರೆಗೆ ಅದು ಜಾರಿಗೆ ಬರುವುದಿಲ್ಲ. ಮುಂದಿನ ಎರಡು ದಿನಗಳಲ್ಲಿ ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸುತ್ತದೆ" ಎಂದು ಅವರು ಹೇಳಿದ್ದಾರೆ.
TAGGED:
liquor