ಪಾಲ್ಘರ್: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿರುವ ಹೋಟೆಲ್‌ನಲ್ಲಿ ಗುರುವಾರ ಬೆಳಗ್ಗೆ ಮೂವರು ಡಕಾಯಿತರು ಗುಂಡು ಹಾರಿಸಿ 1.10 ಲಕ್ಷ ರೂಪಾಯಿ ನಗದನ್ನು ಲೂಟಿ ಮಾಡಿರುವ ಘಟನೆ ನಡೆದಿದೆ.
ಬೆಳಗ್ಗೆ 3.30 ರ ಸುಮಾರಿಗೆ ಅಂಬೋಲಿ ಬಳಿಯ ದುಂಡಲ್ವಾಡಿ ಗ್ರಾಮದ ಆಕಾಶ್ ಹೋಟೆಲ್‌ಗೆ ಮೂವರು ಡಕಾಯಿತರು ಕಾರಿನಲ್ಲಿ ಬಂದಿದ್ದಾರೆ. ನಂತರ ಗುಂಡು ಹಾರಿಸಲು ಪ್ರಾರಂಭಿಸಿ ಅಲ್ಲಿಂದ ಹಣವನ್ನು ಲೂಟಿ ಮಾಡಿ ತಮ್ಮ ಕಾರಿನ ಮೂಲಕ ಪರಾರಿಯಾಗಿದ್ದಾರೆ. ಈ ಬಗ್ಗೆ ಕಾಸಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.