ಭೋಪಾಲ್: ಇನ್ಮುಂದೆ ಸ್ಥಳೀಯರಿಗಷ್ಟೇ ಸರ್ಕಾರಿ ಹುದ್ದೆಗಳು ಎಂಬ ಕಾನೂನು ಜಾರಿಗೊಳಿಸುವುದಾಗಿ ಘೋಷಣೆ ಮಾಡಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಇದೀಗ ಮತ್ತೊಂದು ಮಹತ್ವದ ಯೋಜನೆ ಜಾರಿಗೊಳಿಸಲು ನಿರ್ಧರಿಸಿದ್ದಾರೆ.
ಮಧ್ಯಪ್ರದೇಶ ಸಿಎಂ ಮಹತ್ವದ ಘೋಷಣೆ ರಾಷ್ಟ್ರೀಯ ಆಹಾರ ಭದ್ರತೆ ಯೋಜನೆಯಡಿ ಮಧ್ಯಪ್ರದೇಶದ ಬಡವರು ಹಾಗೂ ಪಡಿತರ ಚೀಟಿ ಇಲ್ಲದವರಿಗೆ 1 ರೂಪಾಯಿಗೆ ಅಕ್ಕಿ, ಗೋಧಿ ಹಾಗೂ ಉಪ್ಪು ನೀಡಲು ನಿರ್ಧರಿಸಲಾಗಿದ್ದು, 1.5 ರೂ.ಗೆ ಸೀಮೆ ಎಣ್ಣೆ ವಿತರಣೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಸೆಪ್ಟೆಂಬರ್ 1ರಿಂದ ಈ ಯೋಜನೆ ರಾಜ್ಯಾದ್ಯಂತ ಜಾರಿಗೊಳ್ಳಲಿದೆ.
ರಾಜ್ಯದ ಜನರಿಗಷ್ಟೇ ಸರ್ಕಾರಿ ಹುದ್ದೆ: ಮಧ್ಯಪ್ರದೇಶ ಸಿಎಂ ಮಹತ್ವದ ನಿರ್ಧಾರ
ಪ್ರತಿ ವ್ಯಕ್ತಿಗೂ 10 ಕೆ.ಜಿ ಧಾನ್ಯ ನೀಡಲು ನಿರ್ಧರಿಸಲಾಗಿದ್ದು, ಮನೆಯಲ್ಲಿ 5 ಸದಸ್ಯರಿದ್ದರೆ ಅವರಿಗೆ 50 ಕೆಜಿ ಧಾನ್ಯ ಲಭ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಮಧ್ಯಪ್ರದೇಶದಲ್ಲಿ ಕೇವಲ ರಾಜ್ಯದ ಯುವಕರಿಗೆ ಮಾತ್ರ ಸರ್ಕಾರಿ ಉದ್ಯೋಗ ಸಿಗುವ ಉದ್ದೇಶದಿಂದ ಸರ್ಕಾರಿ ಉದ್ಯೋಗ ನಿಯಮದಲ್ಲಿ ಮಹತ್ವದ ಬದಲಾವಣೆ ಮಾಡಲು ಅಲ್ಲಿನ ಸರ್ಕಾರ ಮಹತ್ವದ ಕಾನೂನು ಜಾರಿಗೊಳಿಸಲಿದೆ. ಇದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನಿನ್ನೆ ಮಾಹಿತಿ ನೀಡಿದ್ದರು.