ಕರ್ನಾಟಕ

karnataka

ETV Bharat / bharat

ವಿಶ್ವದ ಅತಿ ಚಿಕ್ಕ ಮಹಿಳೆಯಿಂದ ವೋಟಿಂಗ್​... ಹಕ್ಕು ಚಲಾವಣೆ ಮಾಡಿ, ಸಂದೇಶ ನೀಡಿದ ಜ್ಯೋತಿ! - ಮತದಾನ

ಕೇವಲ 2.1 ಅಡಿ ಎತ್ತರದ 25 ವರ್ಷದ ಜ್ಯೋತಿ ನಾಗ್ಪುರದಲ್ಲಿ ಮತದಾನ ಮಾಡಿದ್ದಾರೆ. ಇದೇ ವೇಳೆ ಎಲ್ಲರಲೂ ಮತದಾನದಲ್ಲಿ ಭಾಗಿಯಾಗುವಂತೆ ಮನವಿ ಮಾಡಿದ್ದಾರೆ.

ವಿಶ್ವದ ಅತಿ ಚಿಕ್ಕ ಮಹಿಳೆಯಿಂದ ವೋಟಿಂಗ್

By

Published : Apr 11, 2019, 1:50 PM IST

Updated : Apr 11, 2019, 3:18 PM IST

ನಾಗ್ಪುರ್​:ಇಂದು ಲೋಕಸಭಾ ಚುನಾವಣೆಯ ಮೊದಲ ಹಂತದ ವೋಟಿಂಗ್​ ನಡೆಯುತ್ತಿದ್ದು, ಸೆಲಬ್ರಿಟಿ, ರಾಜಕೀಯ ಮುಖಂಡರು ಸೇರಿದಂತೆ ಅನೇಕರು ತಮ್ಮ ತಮ್ಮ ಹಕ್ಕು ಚಲಾವಣೆ ಮಾಡುತ್ತಿದ್ದಾರೆ. ಇದರ ಮಧ್ಯೆ ವಿಶ್ವದ ಅತಿ ಚಿಕ್ಕ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿರುವ ಜ್ಯೋತಿ ಕೂಡ ತಮ್ಮ ಹಕ್ಕು ಚಲಾಯಿಸಿದ್ದಾರೆ.

ವಿಶ್ವದ ಅತಿ ಚಿಕ್ಕ ಮಹಿಳೆಯಿಂದ ವೋಟಿಂಗ್

ಕೇವಲ 2.1 ಅಡಿ ಎತ್ತರದ 25 ವರ್ಷದ ಜ್ಯೋತಿ ನಾಗ್ಪುರದಲ್ಲಿ ಮತದಾನ ಮಾಡಿದ್ದಾರೆ. ಇದೇ ವೇಳೆ ಎಲ್ಲರಲೂ ಮತದಾನದಲ್ಲಿ ಭಾಗಿಯಾಗುವಂತೆ ಮನವಿ ಮಾಡಿದ್ದಾರೆ. ಮೊದಲ ಮತದಾನ ಮಾಡಿ ತದನಂತರ ನಿಮ್ಮ ನಿಮ್ಮ ಕೆಲಸಗಳಲ್ಲಿ ಭಾಗಿಯಾಗಿ ಎಂದು ಮನವಿ ಮಾಡಿರುವ ಜ್ಯೋತಿ, ತಾವೂ ವೋಟ್​ ಮಾಡಿರುವುದಾಗಿ ತಿಳಿಸಿದ್ದಾರೆ.

ಬಿಗ್​ಬಾಸ್​ 6,ಅಮೆರಿಕ, ಇಟಾಲಿಯನ್ ಟಿವಿಗಳಲ್ಲಿ ನಟನೆ ಮಾಡಿರುವ ಜ್ಯೋತಿ,ತನ್ನದೇ ಆದ ಮ್ಯೂಸಿಯಂ ಕೂಡ ಹೊಂದಿದ್ದಾರೆ.

Last Updated : Apr 11, 2019, 3:18 PM IST

ABOUT THE AUTHOR

...view details