ಕರ್ನಾಟಕ

karnataka

ETV Bharat / bharat

ಲೋಕ ಸಮರಕ್ಕೆ ಬಿಜೆಪಿ ಫಸ್ಟ್​ ಲಿಸ್ಟ್ ರಿಲೀಸ್​​​: ವಾರಣಾಸಿಯಿಂದ ಮೋದಿ, ಗಾಂಧಿನಗರಕ್ಕೆ ಶಾ ಅಭ್ಯರ್ಥಿ - ವಾರಣಾಸಿ

ಮುಂಬರುವ ಲೋಕಸಭೆ ಚುನಾವಣೆಗಾಗಿ ಕೊನೆಗೂ ಬಿಜೆಪಿ ಮೊದಲ ಲಿಸ್ಟ್​ ರಿಲೀಸ್​ ಆಗಿದೆ. ಪಟ್ಟಿಯಲ್ಲಿ ಒಟ್ಟು 184 ಕ್ಷೇತ್ರದ ಅಭ್ಯರ್ಥಿಗಳ ಹೆಸರಿದೆ.

ಬಿಜೆಪಿ ಸಾಂದರ್ಭಿಕ ಚಿತ್ರ

By

Published : Mar 21, 2019, 8:24 PM IST

Updated : Mar 21, 2019, 10:01 PM IST

ನವದೆಹಲಿ: ಲೋಕಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷದ ಮೊದಲ ಲಿಸ್ಟ್​ ಇಂದು ರಿಲೀಸ್​ ಆಗಿದೆ. ಮೊದಲ ಪಟ್ಟಿಯಲ್ಲಿ ಕರ್ನಾಟಕದ ಅಭ್ಯರ್ಥಿಗಳು ಸೇರಿದಂತೆ ಒಟ್ಟು 184 ಜನರ ಹೆಸರಿದೆ.

ಪ್ರಮುಖವಾಗಿ ಪ್ರಧಾನಿ ನರೇಂದ್ರ ಮೋದಿ ವಾರಣಾಸಿ ಲೋಕಸಭಾ ಕ್ಷೇತ್ರದಿಂದ, ಗಾಂಧಿನಗರದಿಂದ ಅಮಿತ್‌ ಶಾ, ರಾಜನಾಥ ಸಿಂಗ್‌ ಲಖನೌ, ನಾಗ್ಪುರದಿಂದ ನಿತಿನ್‌ ಗಡ್ಕರಿ ಸ್ಪರ್ಧೆ ಮಾಡಲಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಕಾನೂನು ಸಚಿವ ಜೆಪಿ ನಡ್ಡಾ ಸುದ್ದಿಗೋಷ್ಟಿ ನಡೆಸಿ ಮಾಹಿತಿ ಹೊರಹಾಕಿದರು. ಪಟ್ಟಿಯಲ್ಲಿ ಉತ್ತರಪ್ರದೇಶ, ಬಿಹಾರ, ಮಹಾರಾಷ್ಟ್ರ,ಛತ್ತೀಸ್‌ಗಢ, ಒಡಿಶಾ, ಜಾರ್ಖಂಡ್​ ಹಾಗೂ ಕರ್ನಾಟಕ ಸೇರಿ 22 ರಾಜ್ಯಗಳ ಒಟ್ಟು 184 ಅಭ್ಯರ್ಥಿಗಳ ಹೆಸರಿದೆ. ಪ್ರಮುಖವಾಗಿ ಕರ್ನಾಟಕದ 21 ಅಭ್ಯರ್ಥಿಗಳ ಹೆಸರು ಮೊದಲ ಲಿಸ್ಟ್​ನಲ್ಲಿದೆ.

ಇನ್ನು ವಿಕೆ ಸಿಂಗ್​ ಘಾಜಿಯಾಬಾದ್​ನಿಂದ, ಹೇಮಾ ಮಾಲಿನಿ ಮಥುರಾ ಕ್ಷೇತ್ರ ,ಸಾಕ್ಷಿ ಮಹಾರಾಜ್​ ಉನ್ನಾವೋ ಕ್ಷೇತ್ರ, ಸ್ಮೃತಿ ಇರಾನಿ ಅಮೇಥಿ ಕ್ಷೇತ್ರದಿಂದ ಅಖಾಡಕ್ಕಿಳಿಯಲಿದ್ದಾರೆ. ಈಗಾಗಲೇ ಸಿಕ್ಕಿ ಹಾಗೂ ಅರುಣಾಚಲ ಪ್ರದೇಶದ ವಿಧಾನಸಭೆ ಕ್ಷೇತ್ರಕ್ಕೆ ಬಿಜೆಪಿ 16 ಅಭ್ಯರ್ಥಿಗಳ ಲಿಸ್ಟ್​ ರಿಲೀಸ್​ ಮಾಡಿದೆ.

ಉತ್ತರಪ್ರದೇಶದಿಂದ 28,ಕರ್ನಾಟಕದಿಂದ 21, ಮಹಾರಾಷ್ಟ್ರದಿಂದ 16,ರಾಜಸ್ಥಾನದಿಂದ 16, ಕೇರಳ 13, ಒಡಿಶಾದಿಂದ 10,ತೆಲಂಗಾಣ 10, ಆಸ್ಸೋಂ 8, ತಮಿಳುನಾಡು ಹಾಗೂ ಛತ್ತಿಸಘಡ,ಜಮ್ಮು-ಕಾಶ್ಮಿರ,ಉತ್ತರಾಖಂಡ್​ನಿಂದ ತಲಾ 5, ಅರುಣಾಚಲಪ್ರದೇಶ,ತ್ರಿಪುರಾ,ಆಂಧ್ರಪ್ರದೇಶದಿಂದ ತಲಾ 2,ಗುಜರಾತ್​,ಸಿಕ್ಕಿಂ,ಮಿಜೋರಾಂ ಹಾಗೂ ಲಕ್ಷದ್ವೀಪಂ ಮತ್ತು ದಾದರ್​,ನಗರಹವೇಲಿಯಿಂದ ತಲಾ 1 ಅಭ್ಯರ್ಥಿ ಲಿಸ್ಟ್​ ಇದರಲ್ಲಿದೆ.

Last Updated : Mar 21, 2019, 10:01 PM IST

ABOUT THE AUTHOR

...view details